ನಟಿ ಮಹಾಲಕ್ಷ್ಮಿ ಅವರು ಪತಿ ತಮಗೆ ಮೋಸ ಮಾಡಿರುವುದಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಅವರು ಹೇಳಿದ್ದೇನು?
ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi). ಈಚೆಗಷ್ಟೇ ಇವರು ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್ ಎದುರಾಗಿತ್ತು. ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಇದಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದು ಅವರು ಬಂಧನದಲ್ಲಿದ್ದಾರೆ. ಇವರ ವಿರುದ್ಧ ವಂಚನೆ ಆರೋಪ ದಾಖಲಾಗಿದೆ. ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15.83 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀಂದರ್ ಚಂದ್ರಶೇಖರ್ ಪೊಲೀಸ್ ಅವರನ್ನು ಬಂಧಿಸಲಾಗಿದೆ.
ಇವರ ಮೇಲೆ ಕೇಸ್ ಹಾಕಿರುವವರು ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿ. ರವೀಂದರ್ ಚಂದ್ರಶೇಖರ್ ತಮಗೆ ವಂಚನೆ ಮಾಡಿದ್ದಾರೆಂದು ಅವರು ದೂರು ದಾಖಲಿಸಿದ್ದಾರೆ. ರವೀಂದ್ರರ್ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡ ಜೈಲಲ್ಲಿ, ಹೆಂಡ್ತಿ ಫೋಟೋಷೂಟ್: ಮಹಾಲಕ್ಷ್ಮಿ ಪೋಸ್ಟ್ಗೆ ಸಾಂತ್ವನದ ಸುರಿಮಳೆ!
ಪತಿ ಜೈಲಿನಲ್ಲಿ ಇರುವಾಗಲೇ ಮಹಾಲಕ್ಷ್ಮಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದರು. ಹಳದಿ ಬಣ್ಣದ ಸೀರೆ ಧರಿಸಿ, ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಸಮಯ ಕೂಡ ಕಳೆದು ಹೋಗಲಿದೆ ಎಂದು ಬರೆದುಕೊಂಡಿದ್ದರು. ಈ ಬಾರಿ ಮಹಾಲಕ್ಷ್ಮಿಅವರಿಗೆ ಸಾಂತ್ವನ ಹೇಳುತ್ತಿದ್ದರು ನೆಟ್ಟಿಗರು. ಆದರೆ ಇದೀಗ ಮಹಾಲಕ್ಷ್ಮಿ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ. ನನಗೆ ಈ ದಢೂತಿ ಮನುಷ್ಯ ಮೋಸ ಮಾಡಿದ್ದಾನೆ. ತಾನು ಹೀಗೆ ಹತ್ತಾರು ಕೋಟಿ ರೂಪಾಯಿ ಮೋಸ ಮಾಡಿರುವ ವಿಷಯವನ್ನು ನನಗೆ ತಿಳಿಸದೇ ಮದುವೆಯಾಗಿದ್ದಾನೆ. ನಾನು ನನ್ನ ಮೊದಲ ಪತಿಗೆ ಡಿವೋರ್ಸ್ ಕೊಟ್ಟು ಈತನ ಜೊತೆ ಮದುವೆಯಾಗಿ ಮೋಸ ಹೋದೆ ಎಂದು ಗೋಳೋ ಎಂದು ಅತ್ತಿದ್ದಾರೆ. ಆತ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಮೋಸ ಮಾಡುತ್ತಿದ್ದ. ಇದ್ಯಾವುದೂ ನನ್ನ ಅರಿವಿಗೆ ಬರಲಿಲ್ಲ ಎಂದಿದ್ದಾರೆ. ಸದ್ಯ ಮಹಾಲಕ್ಷ್ಮಿ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಬಾಹ್ಯ ರೂಪ ನೋಡಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್ ಅವರ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. ಆದರೆ ಈಗ ಎಲ್ಲವೂ ಸರಿಯಾಗುತ್ತದೆ ಮೇಡಂ, ಧೈರ್ಯದಿಂದ ಇರಿ ಎಂದು ಹಲವರು ಕಮೆಂಟ್ ಮಾಡಿದ್ದರೆ, ನೀವು ಯಾವತ್ತಿನಂತೆಯೇ ಈಗಲೂ ಮುದ್ದಾಗಿ ಕಾಣಿಸುತ್ತೀರಿ ಎಂದು ಹಲವರು ಹೇಳಿದ್ದಾರೆ. ಎಷ್ಟೇ ಟ್ರೋಲ್ ಮಾಡಿದರೂ ತಲೆ ಕೆಡಿಸಿಕೊಳ್ಳದೇ ಈ ಜೋಡಿ ಫೊಟೋಗಳನ್ನು ಶೇರ್ ಮಾಡುತ್ತಲೇ ಇತ್ತು. ಆದರೆ ಇದೀಗ ಮಹಾಲಕ್ಷ್ಮಿಗೆ ಆಘಾತ ಎದುರಾಗಿದೆ. ಆಸ್ತಿ ನೋಡಿ ಮದ್ವೆಯಾದ್ರೆ ಹೀಗೆ ಆಗುವುದು ಎಂದು ಪುನಃ ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
ಬಾಲಿವುಡ್ ಮಲೈಕಾಗೂ, ಹಿಟ್ಲರ್ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!