ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದದ ರಾಘವ್ ಹನಿಮೂನ್ ಕ್ಯಾನ್ಸಲ್ ಆಗಿದೆ. ಜೋಡಿ ಎಲ್ಲಿಗೆ ಹೋಗ್ತಾರೆಂದು ಕಾಯ್ತಿದ್ದ ಫ್ಯಾನ್ಸ್ಗೆ ನಿರಾಸೆಯಾಗಿದೆ. ಇದಕ್ಕೆ ಕಾರಣವೇನು?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಭರ್ಜರಿ ಮದ್ವೆ ಸಂಭ್ರಮ ಮುಗಿದಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಇದರ ಒಂದೊಂದೇ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಒಂದು ವಾರದ ಸತತ ಸಂಪ್ರದಾಯಗಳ ಬಳಿಕ ಇದೇ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅದರ ರೋಚಕ ವಿಡಿಯೋ ವೈರಲ್ ಆಗಿದೆ. ಇಂದು ರಿಸೆಪ್ಷನ್ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ತಾಜ್ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಲಿದ್ದು, ಅದರ invitation card ಇದಾಗಲೇ ವೈರಲ್ ಆಗಿತ್ತು. ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಅದರ ವಿಡಿಯೋಗಳು ಹಂತ ಹಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮದುವೆಯ ದಿನ ಮೊಬೈಲ್ ಫೋನ್ ಬ್ಯಾನ್ ಮಾಡಿದ್ದರಿಂದ ಮದುವೆಯ ದಿನವೇ ಫೋಟೋ, ವಿಡಿಯೋಗಳು ವೈರಲ್ ಆಗಿರಲಿಲ್ಲ.
ರಿಸೆಪ್ಷನ್ ಮುಗಿದ ಬಳಿಕ ಜೋಡಿ ಹನಿಮೂನ್ಗೆ ಎಲ್ಲಿ ಹೋಗ್ತಾರೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ತಮ್ಮ ನೆಚ್ಚಿನ ನಟಿ ಹಾಗೂ ರಾಜಕಾರಣಿ ಎಲ್ಲಿಗೆ ಹೋಗಬಹುದು ಎಂದು ಎಲ್ಲರೂ ಸುದ್ದಿಯಾಗಿ ನಿರೀಕ್ಷೆ ಹೊತ್ತಿದ್ದರು. ಆದರೆ ಎಲ್ಲರಿಗೂ ಈಗ ನಿರಾಸೆಯಾಗಿದೆ. ಏಕೆಂದರೆ, ಸದ್ಯ ಈ ಜೋಡಿ ಹನಿಮೂನ್ ಕ್ಯಾನ್ಸಲ್ ಮಾಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟ, ನಿಖರ ಮಾಹಿತಿ ಬಂದಿಲ್ಲವಾದರೂ ಹನಿಮೂನ್ ಸದ್ಯ ಇಲ್ಲ, ಅದನ್ನು ಪೋಸ್ಟ್ಪೋನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ ಏನೆಂದರೆ, ನವದಂಪತಿಗೆ ಇಬ್ಬರ ಕುಟುಂಬದ ಜೊತೆ ಬಾಂಧವ್ಯ ಬೆಸೆಯುವ ಸಲುವಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರಂತೆ. ಕುಟುಂಬ ಜೊತೆ ಟೈಂ ಕಳೆಯಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಷ್ಟೆಂದರೂ ವರ್ಷಗಟ್ಟಲೆ ಡೇಟಿಂಗ್ ಮಾಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹನಿಮೂನ್ ಪ್ಲ್ಯಾನ್ ಮುಂದೂಡಿದ್ದಾರೆ.
ಮದ್ವೆಯ ದಿನ ಪರಿಣಿತಿ ಭಾವಿ ಪತಿಗೆ ಹೀಗೆ ಕಂಡೀಷನ್ ಹಾಕೋದಾ? ಮುಗೀತು ನಿಮ್ ಕಥೆ ಎಂದ ಫ್ಯಾನ್ಸ್!
ಇಷ್ಟೇ ಅಲ್ಲದೇ, ಬರುವ ತಿಂಗಳು ಅಂದರೆ ಅಕ್ಟೋಬರ್ 6ರಂದು ಪರಿಣಿತಿ ಅವರು ಅಕ್ಷಯ್ ಕುಮಾರ್ ಜೋಡಿಯಾಗಿ ನಟಿಸಿರುವ ‘ಮಿಷನ್ ರಾಣಿಗಂಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಅದರ ಪ್ರಚಾರ ಕಾರ್ಯವೂ ನಡೆಯಬೇಕಿದೆ. ಇದಕ್ಕಾಗಿ ಪರಿಣಿತಿ ಚೋಪ್ರಾ ಸಮಯ ನೀಡಬೇಕಿದೆ. ಇತ್ತ ರಾಘವ್ ಚಡ್ಡಾ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಪರಿಣಿತಿ-ರಾಘವ್ ಇಬ್ಬರು ಸಿನಿಮಾ, ರಾಜಕೀಯ ಕೆಲಸದಲ್ಲಿ ಬಿಜಿ ಇರುವ ಕಾರಣ, ಬಿಡುವು ಮಾಡಿಕೊಂಡು ಹನಿಮೂನ್ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಇವರ ಮದ್ವೆಯ ಕುರಿತು ಹೇಳುವುದಾದರೆ, ಲೀಲಾ ಪ್ಯಾಲೇಸ್ನ ಸರೋವರದ ಮಧ್ಯೆ ಮದುವೆ ಮಂಟಪ ಇದೆ. ಬೋಟ್ ಮೂಲಕ ಈ ಜೋಡಿ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾಲೆ ಬದಲಾಯಿಸಿಕೊಂಡರು. 4 ಗಂಟೆಗೆ ಈ ಜೋಡಿ ಸಪ್ತಪದಿ ತುಳಿದರು. ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಅರೇಜ್ಮೆಂಟ್ಗಳು ಅದ್ದೂರಿಯಾಗಿತ್ತು. ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್, ಮನಿಶ್ ಮಲ್ಹೋತ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗ್ವಂತ್ ಮಾನ್ ಮೊದಲಾದವರು ಮದುವೆಗೆ ಹಾಜರಿ ಹಾಕಿದ್ದರು. ಪರಿಣಿತಿ ಚೋಪ್ರಾ ಸಹೋದರಿ ಪ್ರಿಯಾಂಕಾ ಚೋಪ್ರಾ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅವರು ಸೋಷಿಯಲ್ ಮೀಡಿಯಾ ಮೂಲಕ ಅವರು ಸಹೋದರಿಗೆ ವಿಶ್ ಮಾಡಿದ್ದರು.
ರಿಷಬ್ ಶೆಟ್ಟಿ ಮೇಲೆ ಬಿತ್ತು ರಾಖಿ ಸಾವಂತ್ ಕಣ್ಣು! ನಟನ ಮುಂದೆ ಇಟ್ರು ಬಹುದೊಡ್ಡ ಬೇಡಿಕೆ