War 2: ಹೃತಿಕ್ ರೋಷನ್ - ಜೂ.ಎನ್‌ಟಿಆರ್ ಚಿತ್ರಕ್ಕೆ ನಾಯಕಿ ಫಿಕ್ಸ್, ಯಾರದು?

By Shruthi KrishnaFirst Published Jun 17, 2023, 2:52 PM IST
Highlights

ಹೃತಿಕ್ ರೋಷನ್ ಮತ್ತು ಜೂ.ಎನ್‌ಟಿಆರ್ ನಟನೆಯ ವಾರ್ -2 ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ. ಬಾಲಿವುಡ್ ಖ್ಯಾತ ನಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಒಟ್ಟಿಗೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೌದು ಈ ಇಬ್ಬರೂ ಸ್ಟಾರ್ ನಟರು ವಾರ್ -2 ಸಿನಿಮಾಗಾಗಿ ಒಟ್ಟಾಗುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ ಸೂಪರ್ ಹಿಟ್ ವಾರ್ ಸಿನಿಮಾದ ಪಾರ್ಟ್-2 ಇದಾಗಿದೆ. ಪಾರ್ಟ್ 2ನಲ್ಲಿ ಟೈಗರ್ ಶ್ರಾಫ್ ಬದಲಿಗೆ ಜೂ.ಎನ್ ಟಿ ಆರ್ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಸ್ಟೋರಿ ಹೊರಬಿದ್ದಿದೆ. ಸ್ಟಾರ್ ನಟರು ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. 

ವಾರ್-2 ಸಿನಿಮಾಗೆ ಬಾಲಿವುಡ್‌ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಕಿಯಾರಾ ಈಗಾಗಲೇ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶನಕ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗೇಮ್ ಚೇಂಜರ್ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಕಿಯಾರಾ ಮತ್ತೊಂದು ದೊಡ್ಡ ಬಜೆಟ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಿನಿಮಾತಂಡ ಅಥವಾ ಕಿಯಾರಾ ಕಡೆಯಿಂದ ಅಧಿಕೃತವಾಗಿಲ್ಲ. 

Latest Videos

ವಾರ್-2 ಸಿನಿಮಾದಲ್ಲಿ ಹೃತಿಕ್ ಜೊತೆ ಜೂ.ಎನ್ ಟಿ ಆರ್ ಕೂಡ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಈ ಮೊದಲು ಸ್ವತಃ ಹೃತಿಕ್ ಸುಳಿವು ಬಿಟ್ಟುಕೊಟ್ಟಿದ್ದರು. 'ವಾರ್ ಫೀಲ್ಡ್‌ನಲ್ಲಿ ನಿನಗಾಗಿ ಕಾಯುತ್ತಿರುವೆ ಸ್ನೇಹಿತ' ಎಂದು ಹೃತಿಕ್ ರೋಷನ್ ಪೋಸ್ಟ್ ಶೇರ್ ಮಾಡಿ ಹುಟ್ಟುಹಬ್ಬದ ವಿಶ್ ಮಾಡಿದ್ದರು. ಈ ಮೂಲಕ ಇಬ್ಬರೂ ಒಟ್ಟಿಗೆ ವಾರ್-2ನಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಬಹಿರಂಗವಾಗಿತ್ತು. 

ಹೃತಿಕ್ ರೋಷನ್, ಗರ್ಲ್‌ಫ್ರೆಂಡ್‌ ಸಾಬಾ ಆಜಾದ್ ಅವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ!

ಜೂ.ಎನ್ ಟಿ ಆರ್ ಸದ್ಯ ತಮ್ಮ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ ಜೂ.ಎನ್ ಟಿ ಆರ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ. ಅಥವಾ ವಾರ್-2 ಮುಗಿಸಿ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಿದ್ರೂ ಅಚ್ಚರಿ ಇಲ್ಲ. ಅತ್ತ ಹೃತಿಕ್ ರೋಷನ್ ಕೂಡ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿಸಿ ವಾರ್-2 ಕೊಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಪತಿಗಾಗಿ ಕೈಯಾರೆ ಉಪಾಹಾರ ರೆಡಿ ಮಾಡಿದ ನಟಿ ಕಿಯಾರಾ ಅಡ್ವಾಣಿ

ಇನ್ನು ಕಿಯಾರಾ ಕೂಡ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಕಿಯಾರಾ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಹಿಂದಿಯಲ್ಲಿ ಸತ್ಯಪ್ರೇಮ್‌ಕಿ ಸಿನಿಮಾದಲ್ಲಿ ನಟಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸಿದ್ದಾರೆ.  ಇದೇ ತಿಂಗಳು ಈ ಸಿನಿಮಾ ತೆರೆಗೆ ಬರುತ್ತಿದೆ. 

click me!