ಕಾಜೋಲ್ ಕೈಯಲ್ಲಿದ್ದ ಮೊಬೈಲ್​ ದಿಢೀರ್​ ಮಾಯ: ದೇವಿಯ ಶಾಪ್​ ಅಂತಿದ್ದಾರೆ ನೆಟ್ಟಿಗರು!

By Suchethana D  |  First Published Oct 12, 2024, 10:29 PM IST

ದುರ್ಗಾಪೂಜೆಗೆ ಬಂದು ಕಂಡಕಂಡವರ ಮೇಲೆ ರೇಗಾಡುತ್ತಿದ್ದ ನಟಿ ಕಾಜೋಲ್​ ಕೈಯಲ್ಲಿದ್ದ ಫೋನ್​ ಬಿದ್ದು ಹೋಗಿರುವ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ... 
 


​ನವರಾತ್ರಿಯ ಸಂದರ್ಭದಲ್ಲಿ ಬಾಲಿವುಡ್​ ನಟಿ ಕಾಜೋಲ್ ಎಲ್ಲರನ್ನೂ ಗದರಿಸೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕ್ಯಾಮೆರಾಮೆನ್​ಗಳು ಫೋಟೋ ಕ್ಲಿಕ್ಕಿಸಲು ಬಂದಾಗ ಅವರನ್ನು ಬೈದಿರುವುದು, ಚಪ್ಪಲಿ ಹಾಕಿಕೊಂಡು ಪೂಜೆಗೆ ಬಂದವರ ಮೇಲೆ ರೇಗಾಡಿದ್ದು, ಕ್ಯೂನಲ್ಲಿ ನಿಲ್ಲದವರ ಮೇಲೆ ಅಬ್ಬರಿಸಿದ್ದು... ಹೀಗೆ ದೇವಿಯ ದರ್ಶನಕ್ಕೆ ಬಂದ ಕಾಜೋಲ್​ ಯಾಕೋ ಗರಂ ಮೂಡಿನಲ್ಲಿ ಇದ್ದಂತೆ ಕಂಡು ಬಂದರು. ಇದೇ ಕಾರಣಕ್ಕೆ ಇವರನ್ನು ಜ್ಯೂನಿಯರ್​ ಜಯಾ ಬಚ್ಚನ್​ ಎಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಏಕೆಂದರೆ ಜಯಾ ಬಚ್ಚನ್​ ಕೂಡ ಇದೇ ರೀತಿ ಪಾಪರಾಜಿಗಳ ಮೇಲೆ ಹರಿಹಾಯುವುದು ಇದೆ. ಥೇಟ್​ ಅದೇ ರೀತಿಯಲ್ಲಿ ಕಾಜೋಲ್​ ಕೂಡ ಇಂದು ಕಾಣಿಸಿಕೊಂಡಿದ್ದಾರೆ. ಕಂಡ ಕಂಡವರ ಮೇಲೆ ಹರಿಹಾಯುತ್ತಿದ್ದಾರೆ.

ಇಷ್ಟೆಲ್ಲಾ ಆದ ಬಳಿಕ ನಟಿ ದೇವಿಯ ದರ್ಶನ ಪಡೆದು ಕೆಳಕ್ಕೆ ಇಳಿಯುತ್ತಿದ್ದಂತೆಯೇ ಕೈಯಲ್ಲಿದ್ದ ಮೊಬೈಲ್ ಗಾಯಬ್​ ಆಗಿದೆ. ಅಂದರೆ ನಟಿ ಮುಗ್ಗುರಿಸಿ ಬೀಳುತ್ತಿದ್ದಂತೆಯೇ ಮೊಬೈಲ್​ ಫೋನ್​ ಕೆಳಕ್ಕೆ ಜಾರಿ ಬಿದ್ದು ಹೋಗಿದೆ. ಎಲ್ಲರ ಮೇಲೂ ಕೂಗಾಡುತ್ತಿದ್ದ ನಟಿಗೆ ಈ ಘಟನೆಯಿಂದಾಗಿ ಸ್ವಲ್ಪ ಇರುಸು ಮುರುಸು ಆದರೂ ಅದನ್ನು ತೋರ್ಪಡಿಸಿದೇ ನಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದರ ವಿಡಿಯೋ ವೈರಲ್​ ಆಗುತ್ತಲೇ ಎಲ್ಲರೂ ದೇವಿಯ ಶಾಪ ಎನ್ನುತ್ತಿದ್ದಾರೆ. ದೇವಿಯ ದರ್ಶನಕ್ಕೆ ಬಂದು ಕೂಲ್​ ಆಗಿ ಇರುವುದನ್ನು ಬಿಟ್ಟು ಕಂಡ ಕಂಡವರ ಮೇಲೆ ರೇಗಾಡಿ, ಕೂಗಾಡಿ, ಹಾರಾಟ ಮಾಡಿದರೆ ಹೀಗೆಯೇ ಆಗುವುದು ಎನ್ನುತ್ತಿದ್ದಾರೆ. ನಟಿಯ ಮೊಬೈಲ್​ ಆ ಜನಜಂಗುಳಿಯಲ್ಲಿ ಸಿಕ್ಕಿತಾ, ಚೆನ್ನಾಗಿ ಇದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ.  ಆದರೆ ಮೊಬೈಲ್​ ಬಿದ್ದಿರುವ ವಿಡಿಯೋ ಮಾತ್ರ ಸಾಕಷ್ಟು ಕಮೆಂಟ್ಸ್​ಗಳಿಗೆ ದಾರಿ ಮಾಡಿಕೊಟ್ಟಿದೆ.

Tap to resize

Latest Videos

undefined

ಸೊಂಟದ ಮೇಲೆ ಕೈಹಾಕುವಂತೆ ಗಂಡನಿಗೆ ತಿವಿದು ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ನಟಿ ಕಾಜೋಲ್​! ವಿಡಿಯೋಗೆ ಫನ್ನಿ ಕಮೆಂಟ್ಸ್​

ಎಲ್ಲಕ್ಕಿಂತ ಹೆಚ್ಚಾಗಿ ದುರ್ಗಾಪೂಜಾ ಪೆಂಡಾಲ್ ಬಳಿ ಶೂ ಧರಿಸಿ ಬಂದವರನ್ನು ನೋಡಿ ಕೋಪಗೊಂಡ ಕಾಜೋಲ್ ಕೂಡಲೇ ಶೂ ಧರಿಸಿದವರು ಅಲ್ಲಿಂದ ದೂರ ಹೋಗುವಂತೆ ಕೆಂಡಾಮಂಡಲವಾಗಿ ಸೂಚಿಸಿದ್ದ ನಟಿಯ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.  ನೆರಳೆ ಹಾಗೂ ಪಿಂಕ್ ಬಣ್ಣ ಮಿಶ್ರಿತ ಸೀರೆ ಧರಿಸಿದ ಕಾಜೋಲ್ ಶೂ ಧರಿಸಿ ಪೆಂಡಾಲ್ ಸಮೀಪ ಬಂದವರನ್ನು ಜೋರಾಗಿ ಕೂಗಿ ಆ ಸ್ಥಳದಿಂದ ದೂರ ಹೋಗುವಂತೆ ಕೂಗಾಡಿದ್ದಾರೆ. ಹಲೋ ಹಲೋ ಎಂದು ಚಿಟಿಕೆ ಹೊಡೆದು ಕರೆದ ಕಾಜೋಲ್‌, ನೀವೆಲ್ಲರೂ ಚಪ್ಪಲಿ ಧರಿಸಿ ಬಂದಿದ್ದೀರಿ ಚಪ್ಪಲಿ ಬಿಟ್ಟು ಬನ್ನಿ ಅಥವಾ ದೂರ ಹೋಗಿ ಎಂದು ಕಾಜೋಲ್ ಸಿಟ್ಟಾಗಿದ್ದಾರೆ. ​​

ಕಾಜೋಲ್ ಅವರ ಕೂಗಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಆಕೆ ಮಾಡಿದ್ದು ಸರಿಯಾಗಿಯೇ ಇದೆ. ಪೂಜಾ ಸ್ಥಳಗಲ್ಲಿ ಚಪ್ಪಲಿ ಹಾಕಿ ಏಕೆ ಬರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಜನರು ಕನಿಷ್ಠ ಪೂಜಾ ಸ್ಥಳಕ್ಕೆ ಚಪ್ಪಲಿ ಹಾಕಿ ಹೋಗಬಾರದು ಎಂಬ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಆಕೆ ಶೂ ಹಾಕೊಂಡು ಬರ್ಬೇಡಿ ಎಂದು ಹೇಳಿದ್ದಾಳೆ ಹಾಗೂ ಆಕೆ ಸರಿಯಾಗಿಯೇ ಹೇಳಿದ್ದಾಳೆ ಎಂದು ಕಾಜೋಲ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಮತ್ತೆ ಕೆಲವರು ಆಕೆಯನ್ನು ಪಪಾರಾಜಿಗಳ ವಿರುದ್ಧ ಸದಾ ಕಿಡಿ ಕಾರುವ ಜಯಾ ಬಚ್ಚನ್‌ಗೆ ಹೋಲಿಕೆ ಮಾಡಿದ್ದಾರೆ. 

ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್​ 1 ನಟಿ ಆಗ್ತಾರೆ! ಆಮೀರ್​ ಖಾನ್​ ಹೇಳಿದ್ದೇನು ಕೇಳಿ

click me!