ಮಕ್ಕಳು ಮದ್ವೆ ವಯಸ್ಸಿಗೆ ಬಂದ್ರೂ ಪತಿ ಮೇಲೆ ಕಣ್ಣಿಟ್ಟಿರೋ ಬಾಲಿವುಡ್​ ಸೆಲೆಬ್ರಿಟಿ ಇವ್ರೇ ನೋಡಿ... ಬಿಟ್ರೆ ಡೇಂಜರ್​ ಅಂತೆ!

By Suchethana D  |  First Published Aug 25, 2024, 5:54 PM IST

ಮಕ್ಕಳು ಮದ್ವೆ ವಯಸ್ಸಿಗೆ ಬಂದ್ರೂ ಪತಿ ಮೇಲೆ ಕಣ್ಣಿಟ್ಟಿರೋ ಬಾಲಿವುಡ್​ ಸೆಲೆಬ್ರಿಟಿ ಇವ್ರೇ ನೋಡಿ... ಬಿಟ್ರೆ ಡೇಂಜರ್​ ಅಂತೆ. ಟಾಪ್​-3 ನಟಿಯರು ಯಾರು ಗೊತ್ತಾ?
 


ಸೆಲೆಬ್ರಿಟಿಗಳಾದರೇನು? ಅವರಿಗೂ ಕುಟುಂಬದಲ್ಲಿ ಕೆಲವು ಸಾಮಾನ್ಯ ಮಹಿಳೆಯರಂತೆ ಅಭದ್ರತೆ ಎನ್ನುವುದು ಇದ್ದೇ ಇರುತ್ತದೆ. ತಮ್ಮ ಪತಿ ಅಥವಾ ಪತ್ನಿ ಬೇರೊಬ್ಬ ನಟ-ನಟಿಯ ಜೊತೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಏನೂ ಅನ್ನಿಸುವುದಿಲ್ಲವೇ, ಛೇ ಎಂದೆಲ್ಲಾ ಸಾಮಾನ್ಯ ಜನರಿಗೆ ಅನ್ನಿಸುವುದು ಉಂಟು. ಇಷ್ಟು ಅಸಹ್ಯ, ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಅವರ ಕರುಳು ಚುರುಕ್​ ಎನ್ನುವುದಿಲ್ಲವೇ ಎಂದು ಹಲವರು ಹೇಳುವುದು ಉಂಟು. ಆ ಸಂದರ್ಭದಲ್ಲಿ ಅವರಿಗೆ ಸಂಬಂಧಕ್ಕಿಂತ ಬರುವ ದುಡ್ಡೇ ಮುಖ್ಯವಾಗಿರುತ್ತದೆ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ಕೊಡುವುದೂ ಉಂಟು. ಅಷ್ಟಕ್ಕೂ ಸಿನಿ ಇಂಡಸ್ಟ್ರಿಯಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ ಬಿಡಿ. ಡೇಟಿಂಗ್​, ಸೆಕ್ಸ್​, ಔಟಿಂಗ್​... ಹೀಗೆ  ಏನೇನೋ ಯಾರ್ಯಾರದೋ ಜೊತೆ ನಡೆಯುತ್ತಲೇ ಇರುತ್ತದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ದೊಡ್ಡವರಲ್ಲಿ ಇವೆಲ್ಲಾ ಕಾಮನ್​ ಎಂದು ಹೇಳುವವರು ಎಷ್ಟು ಮಂದಿ ಸಿಗುವುದಿಲ್ಲ ಹೇಳಿ. 

ಇದರ ಹೊರತಾಗಿಯೂ ಕೆಲವು ನಟರ ಪತ್ನಿಯರು ತಮ್ಮ ಪತಿಯ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ ಎನ್ನುವ ಸುದ್ದಿ ಬಿ-ಟೌನ್​ನಲ್ಲಿ ಮೊದಲಿನಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಚಿತ್ರ ತಾರೆಯರು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾರೆ. ಇದು ಕಾಮನ್​. ಕೆಲವರು ಬೇರೆ ಧರ್ಮದವರನ್ನು ಮದ್ವೆಯಾಗಿದ್ದರೆ, ಮತ್ತೆ ಕೆಲವರು ತಮಗಿಂತ ವಯಸ್ಸಿನಲ್ಲಿ ಅತಿ ಚಿಕ್ಕವರನ್ನು ಮದ್ವೆಯಾಗಿದ್ದಾರೆ. ಮಗಳ ವಯಸ್ಸಿನವರನ್ನೂ ಮದ್ವೆಯಾದವರಿದ್ದಾರೆ, 10-15 ವರ್ಷ ಚಿಕ್ಕ ವಯಸ್ಸಿನ ಯುವಕನನ್ನೂ ಮದ್ವೆಯಾದ ನಟಿಯರು ಇದ್ದಾರೆ. ಆದರೂ ಏಕಪತ್ನಿ-ಪತಿ ವ್ರತಸ್ಥರು ಬೆರಳೆಣಿಕೆಯವರು ಇದ್ದಾರೆ. ಒಟ್ಟಿನಲ್ಲಿ ತಮ್ಮ ಗಂಡನ ಸದಾ ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುವ ಸೆರಗಿನಲ್ಲಿಯೇ ಕಟ್ಟಿಕೊಂಡು ತಿರುಗುವವರಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿದೆ. 

Tap to resize

Latest Videos

ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ? ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...

ಈ ಸಾಲಿನಲ್ಲಿ ಮೊದಲಿಗೆ ಕೇಳಿಬರುವ ಹೆಸರು ಕಿಂಗ್​ ಖಾನ್​. ಹೌದು.  ಶಾರುಖ್​ ಖಾನ್​ ಮತ್ತು ಗೌರಿ ದಂಪತಿಗೆ ಬಹು ದೊಡ್ಡ ಹೆಸರು ಇದೆ. ಅದಕ್ಕಿಂತಲೂ ಹೆಚ್ಚಾಗಿ ಶಾರುಖ್​ ಒಬ್ಬರನ್ನೇ ಮದುವೆಯಾಗಿರೋದು ಹಲವರಲ್ಲಿ ನಟನ ಮೇಲಿದ್ದ ಗೌರವ ಹೆಚ್ಚಿಸಿದೆ. ಇವರದ್ದು ಹಲವು ದಶಕಗಳ ಸುಖಮಯ ದಾಂಪತ್ಯ. ಒಬ್ಬರನ್ನೊಬ್ಬರು ಪರಸ್ಪರ ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಇದೀಗ ಈ ದಂಪತಿ ಮಕ್ಕಳಾದ ಸುಹಾನಾ ಖಾನ್​ ಮತ್ತು ಆರ್ಯನ್​ ಕೂಡ ಸೆಲೆಬ್ರಿಟಿಯಾಗಿದ್ದಾರೆ. ಸುಹಾನಾ ನಟಿಯಾಗಿದ್ದು, ಈಕೆಯ ಸುತ್ತಲೂ ಗಾಸಿಪ್​ಗಳೂ ಹರಿದಾಡುತ್ತಿವೆ. ಮದುವೆ ವಯಸ್ಸಿಗೆ ಬಂದಿರೋ ಮಕ್ಕಳು ಇದ್ದರೂ ಶಾರುಖ್​ ಇಂದಿಗೂ ನಾಯಕನೇ. ಅದೇ ಕಾರಣಕ್ಕೆ ಗೌರಿ ಖಾನ್​ ಎಲ್ಲೇ ಹೋದರೂ ಶಾರುಖ್​ ಹಿಂದೆಯೇ ಇರ್ತಾರಂತೆ. ಅವರ ಮೇಲೆ ಕಣ್ಣು ಇಟ್ಟಿರ್ತಾರಂತೆ. ಬಹುಶಃ ಅವರಿಗೆ ಪತಿಯ ಮೇಲೆ ನಂಬಿಕೆ ಇದ್ರೂ ಬೇರೆ ಮಹಿಳೆಯರ ಮೇಲೆ ಇದ್ದಂತಿಲ್ಲ!

ಇನ್ನು ಎರಡನೆಯ ಹೆಸರು ಪ್ಲೇಬಾಯ್​ ಎಂದೇ ಫೇಮಸ್​ ಆಗಿರೋ ಅಕ್ಷಯ್​ ಕುಮಾರ್​ ಮತ್ತು ಟ್ವಿಂಕಲ್​  ಖನ್ನಾ ಜೋಡಿ ಮತ್ತು ಎವರ್​ಗ್ರೀನ್​ ತಾರೆ ಕಾಜೋಲ್​ ಮತ್ತು ಅಜಯ್​ ದೇವಗನ್​ ಜೋಡಿ. ಅಕ್ಷಯ್​ ಕುಮಾರ್​ ಮತ್ತು ಟ್ವಿಂಕಲ್​ ಮದುವೆಯಾಗಿ 23 ವರ್ಷಗಳು ಕಳೆದಿವೆ. ಆರವ್​ ಕುಮಾರ್​ ಎನ್ನುವ ಮಗ ಇದ್ದಾನೆ. ಇವರದ್ದೂ ಕ್ಯೂಟ್​ ದಾಂಪತ್ಯ. ಇದಾಗಲೇ ಅಕ್ಷಯ್​ ಅವರ ಹೆಸರು ಹಲವಾರು ನಟಿಯರ ಜೊತೆ ಥಳಕು ಹಾಕಿಕೊಂಡಿರೋ ಕಾರಣ, ಟ್ವಿಂಕಲ್​ ಸದಾ ಪತಿಯ ಮೇಲೆ ಕಣ್ಣಿಡುತ್ತಾರಂತೆ. ಒಂದರ್ಥದಲ್ಲಿ ಸೆರಗಲ್ಲೇ ಕಟ್ಟಿಕೊಂಡು ತಿರುಗುತ್ತಾರೆ ಎನ್ನುವ ಸುದ್ದಿ ಬಿ-ಟೌನ್​ನಲ್ಲಿ ಹರಿದಾಡ್ತಿದೆ. ಇನ್ನು ಅಜಯ್​ ದೇವಗನ್​ ಹೇಳ್ಬೇಕಾ? ಇವರ ಹೆಸರು ಕೂಡ ಒಬ್ಬರಲ್ಲ, ಇಬ್ಬರಲ್ಲ ಹಲವರು ಜೊತೆ ಥಳಕು ಹಾಕಿಕೊಂಡಿದೆ. ಅದೇ ರೀತಿ ಕಾಜೋಲ್​ ಕೂಡ ಹಲವಾರು ವರ್ಷಗಳಿಂದ ಅಜಯ್​ ಅವರನ್ನು ನೋಡಿಕೊಂಡೇ ಬಂದಿದ್ದಾರೆ. ಇವರಿಬ್ಬರ ಮದುವೆ 1999ರಲ್ಲಿ ನಡೆದಿದೆ. ಮಗಳು ನೀಸಾ ಕೂಡ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಹೀಗಿದ್ರೂ ಕಾಜೋಲ್​ಗೆ ಸದಾ ಪತಿಯ ಮೇಲೆ ಕಣ್ಣಂತೆ!  

ಕರಣ್ ಜೋಹರ್ ಅವಳಿ ಮಕ್ಕಳ ತಾಯಿ ಯಾರು? ಹಲವರ ಕಾಡುತ್ತಿರೋ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಕೇಳಿ...

click me!