ಶಾರುಖ್ ಜೊತೆ ನಟಿಸುವಾಗ್ಲೇ ನಟಿ ಕಾಜೋಲ್ಗೆ ಎರಡನೆಯ ಬಾರಿ ಗರ್ಭಪಾತವಾಗಿತ್ತು. ಭಯಾನಕ ಘಟನೆ ನೆನಪಿಸಿಕೊಂಡ ನಟಿ ಹೇಳಿದ್ದೇನು?
ಕೃಷ್ಣ ಸುಂದರಿ, ಡಸ್ಕಿ ಬ್ಯೂಟಿ ಎಂದೇ ಫೇಮಸ್ ಆದವರು ಬಾಲಿವುಡ್ ನಟಿ ಕಾಜೋಲ್ ನಿನ್ನೆಯಷ್ಟೇ ಅಂದರೆ ಆಗಸ್ಟ್ 5ರಂದು 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೃಷ್ಣ ವರ್ಣದವರಿಗೆ ಇಂಡಸ್ಟ್ರಿಯಲ್ಲಿ ಚಾನ್ಸೇ ಸಿಗಲ್ಲ ಎಂದು ಹೇಳುತ್ತಿರುವ ನಡುವೆಯೇ, ತಮ್ಮ ಬಣ್ಣಕ್ಕಾಗಿಯೇ ಹಲವು ಬಾರಿ ಬಾಡಿ ಷೇಮಂಗ್ಗೂ ಒಳಗಾಗಿದ್ದರೂ ನಟಿ ಕಾಜೋಲ್, 80-90ರ ದಶಕಗಳಲ್ಲಿ ಹೇಗೆ ಬಾಲಿವುಡ್ ಆಳಿದ್ದರು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಕಾಜೋಲ್ ಮತ್ತು ಶಾರುಖ್ ಖಾನ್ ಕೆಮೆಸ್ಟ್ರಿಯನ್ನು ಮೆಚ್ಚದವರೇ ಇಲ್ಲವೇನೋ. ಅಷ್ಟೊಂದು ರೊಮ್ಯಾಂಟಿಕ್ ಜೋಡಿ ಇವರದ್ದು. ಅದರಲ್ಲಿಯೂ 2001 ರಲ್ಲಿ ಬಿಡುಗಡೆಯಾದ ಇವರಿಬ್ಬ ಅಭಿನಯದ ‘ಕಭಿ ಖುಷಿ ಕಭಿ ಗಮ್’ ಚಿತ್ರವು ಬ್ಲಾಕ್ ಬಸ್ಟರ್ ಎಂದು ಸಾಬೀತಾಗಿತ್ತು. ಆದರೆ ಇದೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಕಾಜೋಲ್ ಬಾಳಲ್ಲಿ ಮಹಾ ದುರಂತವೂ ಸಂಭವಿಸಿತ್ತು!
ಹೌದು. ಕಾಜೋಲ್ ಅವರಿಗೆ ಎರಡನೆಯ ಬಾರಿ ಗರ್ಭಪಾತವಾಗಿತ್ತು. ಈ ಚಿತ್ರದ ಸೆಟ್ ನಲ್ಲಿ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್ ಕೆಳಗೆ ಬಿದ್ದಿದ್ದರು. ಸುದ್ದಿ ತಿಳಿದು ಪತಿ ಅಜಯ್ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದ ಸಮಯದಲ್ಲಿ ಕಾಜೋಲ್ ಪ್ರಜ್ಞೆ ತಪ್ಪಿದ್ದರು. ಬಳಿಕ ಸೆಟ್ನಲ್ಲಿಯೇ ಕಾಜೋಲ್ ಕೆನ್ನೆಗೆ ಅಜಯ್ ಹೊಡೆದಿದ್ದರು ಎನ್ನಲಾಗಿದೆ. ಏಕೆಂದ್ರೆ ಗರ್ಭಿಣಿಯಾಗಿದ್ದ ಕಾಜೋಲ್ ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದು ಅವರಿಗೆ ಹಿಡಿಸಿರಲಿಲ್ಲ ಎನ್ನಲಾಗಿದೆ. ಆದರೆ ದುರದೃಷ್ಟವಶಾತ್ ಕಾಜೋಲ್ ಅವರಿಗೆ ಎರಡನೆಯ ಬಾರಿ ಗರ್ಭಪಾತವಾಗಿಬಿಟ್ಟಿತ್ತು!
ಕಾಜೋಲ್ ಹುಟ್ಟುಹಬ್ಬ: ನಟಿಯ ಜೊತೆ ಮಂಚ ಏರುವ ಆಸೆ ಇತ್ತಾ ಶಾರುಖ್ಗೆ? ಹಳೆಯ ವಿಡಿಯೋ ವೈರಲ್
ಆ ಬಳಿಕ ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ನೈಸಾ ಹಾಗೂ ಯುಗ್ ಎಂಬ ಇಬ್ಬರು ಮಕ್ಕಳಾದರು. ಆದರೆ ಇದಕ್ಕೂ ಮುನ್ನ ಎರಡು ಬಾರಿ ಗರ್ಭಪಾತ ಅನುಭವಿಸಿದ್ದರು ನಟಿ. ಈ ಕುರಿತು ಕಾಜೋಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಜಯ್ ದೇವಗನ್ ಜೊತೆ ಮದುವೆ, ಹನಿಮೂನ್ ಬಳಿಕ ಮಕ್ಕಳು ಬೇಕು ಎಂದುಕೊಂಡೆವು. ಆದರೆ ಎರಡು ಬಾರಿ ಗರ್ಭಪಾತವಾಯಿತು. ಬಳಿಕ ಇಬ್ಬರು ಮಕ್ಕಳು ಹುಟ್ಟಿದವು ಎಂದಿದ್ದಾರೆ. ಇದೇ ವೇಳೆ, ಅಜಯ್ ಅವರನ್ನು ಮೊದಲ ಬಾರಿ ಭೇಟಿಯಾದ ಬಗ್ಗೆಯೂ ಕಾಜೋಲ್ ಹೇಳಿದ್ದಾರೆ. ಅಜಯ್ ದೇವಗನ್ ರನ್ನು 'ಹಲ್‍ಚಲ್' ಸಿನಿಮಾ ಸೆಟ್ಸ್‌ನಲ್ಲಿ ಭೇಟಿಯಾಗಿದ್ದೆ, ಅಲ್ಲಿಯೇ ಪರಿಚಯವಾಗಿ, ಸ್ನೇಹವಾಗಿ ಮದುವೆಯವರೆಗೂ ಬಂದಿತು ಎಂದಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರೂ ಬೇರೆ ಬೇರೆಯವರ ಜೊತೆಗೆ ಡೇಟಿಂಗ್‌ನಲ್ಲಿದ್ದರೂ ಬಳಿಕ ಅವರೊಂದಿಗೆ ದೂರವಾದೆವು. ಆಗಲೇ ನಾವಿಬ್ಬರೂ ಹತ್ತಿರವಾದೆವು, ಜೊತೆಗೆ ಇರಬೇಕೆಂದು ಬಯಸಿದೆವು ಎಂದು ಕಾಜೋಲ್ ತಮ್ಮ ಲವ್ ಸ್ಟೋರಿಯನ್ನೂ ಹೇಳಿಕೊಂಡಿದ್ದಾರೆ.
ಅದೇ ಇನ್ನೊಂದೆಡೆ ಕಾಜೋಲ್ ಹೆಸರು ಶಾರುಖ್ ಅವರ ಜೊತೆಗೂ ಥಳಕು ಹಾಕಿಕೊಂಡಿತ್ತು. ಅದಕ್ಕೆ ಉತ್ತರಿಸಿದ್ದ ಶಾರುಖ್, ಕಾಜೋಲ್ ತುಂಬಾ ಚಿಕ್ಕವಳು. (ಶಾರುಖ್ಗಿಂತ ಕಾಜೋಲ್ ಎಂಟು ವರ್ಷ ಚಿಕ್ಕವರು). ಅಷ್ಟೇ ಅಲ್ಲದೇ ಆಕೆ ನಟಿ ತನುಜಾ ಅವರ ಮಗಳು. ಈ ಕಾರಣದಿಂದ ಆಕೆ ನನ್ನ ಸಹೋದರಿ ಇದ್ದಂತೆ. ನನಗಷ್ಟೇ ಅಲ್ಲ, ಗೌರಿಗೂ ಕಾಜೋಲ್ ಅಂದ್ರೆ ಅವಳು ಇಷ್ಟ’ ಎಂದಿದ್ದರು.ಇದೀಗ ಕಾಜೋಲ್ ಅವರ 50ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿಯ ಕುರಿತು ಶಾರುಖ್ ಹೇಳಿದ ಮಾತುಗಳು ವೈರಲ್ ಆಗುತ್ತಿವೆ. ಸಂದರ್ಶನವೊಂದರಲ್ಲಿ ಈ ಪ್ರಶ್ನೆ ಶಾರುಖ್ಗೆ ಕೇಳಲಾಗಿತ್ತು. ಆ ಸಮಯದಲ್ಲಿ ಶಾರುಖ್, ಗೌರಿ ಅವರನ್ನು ಮದುವೆಯಾಗಿದ್ದರು. ಆಗ ಅವರಿಗೆ ಕಾಜೋಲ್ ಜೊತೆಗಿನ ಸಂಬಂಧದ ಕುರಿತು ಕೇಳಲಾಯಿತು. ನೀವು ಮತ್ತು ಕಾಜೋಲ್ ಡೇಟಿಂಗ್ ಮಾಡುತ್ತಿದ್ದಿರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಈ ಬಗ್ಗೆ ನೇರವಾಗಿಯೇ ಶಾರುಖ್ ಉತ್ತರ ನೀಡಿದ್ದಾರೆ. ನೋಡಿ ಕಾಜೋಲ್ ತುಂಬಾ ಚಿಕ್ಕವಳು. (ಶಾರುಖ್ಗಿಂತ ಕಾಜೋಲ್ ಎಂಟು ವರ್ಷ ಚಿಕ್ಕವರು). ಅಷ್ಟೇ ಅಲ್ಲದೇ ಆಕೆ ನಟಿ ತನುಜಾ ಅವರ ಮಗಳು. ಈ ಕಾರಣದಿಂದ ಆಕೆ ನನ್ನ ಸಹೋದರಿ ಇದ್ದಂತೆ. ನನಗಷ್ಟೇ ಅಲ್ಲ, ಗೌರಿಗೂ ಕಾಜೋಲ್ ಅಂದ್ರೆ ಅವಳು ಇಷ್ಟ’ ಎಂದಿದ್ದರು.
ನಟಿ ಕಾಜೋಲ್ ಹಿಂಭಾಗಕ್ಕೆ ಇದೇನಾಗೋಯ್ತು? ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಶಾಕ್