Kajol Trolled: ಪೋಸ್ ನೀಡದೆ ಸೂಪರ್‌ ಫಾಸ್ಟ್ ನಡೆದ ನಟಿ, ವಾಶ್‌ರೂಂಗೆ ಹೋಗ್ಬೇಕಾ ಎಂದ ನೆಟ್ಟಿಗರು

Published : Jan 04, 2022, 12:43 PM ISTUpdated : Jan 04, 2022, 01:16 PM IST
Kajol Trolled: ಪೋಸ್ ನೀಡದೆ ಸೂಪರ್‌ ಫಾಸ್ಟ್ ನಡೆದ ನಟಿ, ವಾಶ್‌ರೂಂಗೆ ಹೋಗ್ಬೇಕಾ ಎಂದ ನೆಟ್ಟಿಗರು

ಸಾರಾಂಶ

ಬಾಲಿವುಡ್ ನಟಿ ಕಾಜೊಲ್ ಪಾಪ್ಪರಾಜಿ ಫ್ರೆಂಡ್ಲೀ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಈಗ ತಮ್ಮ ವಿಚಿತ್ರ ವರ್ತನೆಯಿಂದ ಮತ್ತೆ ಟ್ರೋಲ್ ಆಗಿದ್ದಾರೆ.

ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಕಾಜೋಲ್(Kajol) ತಮ್ಮ ಬಹಳಷ್ಟು ಹಿಟ್ ಸಿನಿಮಾಗಳಲ್ಲಿ ಐಕಾನಿಕ್ ಪಾತ್ರಗಳಿಗಾಗಿ,  ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅದರ ಹೊರತಾಗಿಯೂ, ಅವರು ಆಗಾಗ ಇತರ ಕಾರಣಗಳಿಗಾಗಿ ಟ್ರೋಲ್ ಆಗುತ್ತಾರೆ. ಅಷ್ಟಾಗಿ ಪಾಪ್ಪರಾಜಿಗಳ ಜೊತೆ ಫ್ರೆಂಡ್ಲೀ ಆಗಿರದ ಕಾಜೊಲ್ ಪೋಸ್ ಕೊಡೋದು ತುಂಬಾ ಕಮ್ಮಿ. ಈ ಬಾರಿ ನಟಿ ತನ್ನ ವಿಚಿತ್ರವಾದ ನಡಿಗೆಯ ಶೈಲಿಯಿಂದ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ. ಈ ಹಿಂದೆಯೂ ನಟಿ ಟ್ರೋಲ್(Troll) ಆಗಿದ್ದರು. ಈಗ ನಟಿ ತಮ್ಮ ಸೂಪರ್ ಫಾಸ್ಟ್ ನಡಿಗೆಯಿಂದ ಟ್ರೋಲ್ ಆಗಿದ್ದಾರೆ.

ಇತ್ತೀಚೆಗೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.ಅವರು ವಿಮಾನ ನಿಲ್ದಾಣದಿಂದ(Airport) ನಿರ್ಗಮಿಸುವಾಗ, ನಟಿ ತುಂಬಾ ವೇಗವಾಗಿ ನಡೆಯುತ್ತಿರುವುದು ಕಂಡುಬಂದಿದೆ. ನಟಿ ಆತುರದಲ್ಲಿದ್ದಂತೆ ತೋರುತ್ತಿದೆ. ನಟಿಯನ್ನು ವಿಮಾನ ನಿಲ್ದಾಣದಲ್ಲಿ ಕಾಣುತ್ತಿದ್ದಂತೆ ಪಾಪ್ಪರಾಜಿಗಳು ಅವರ ಈ ವಿಮಾನ ನಿಲ್ದಾಣದ ವೀಡಿಯೊ ಫೋಟೋಗಳಿಗಾಗಿ ಮುಗಿಬಿದ್ದಿದ್ದಾರೆ. ನಟಿ ವಿಡಿಯೋ ಹಾಗೂ ಫೋಟೋಗಳು ಕೆಲವೇ ಸಮಯದಲ್ಲಿ ವೈರಲ್ ಆಗಿದೆ.

ಸಹ ನಟ ಶಾರೂಖ್ ಸಂಕಷ್ಟದಲ್ಲಿದ್ರೂ ಕಾಜೊಲ್‌ಗೆ ಸಂಭ್ರಮ

ಹಲವಾರು ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ನಟಿಯ ಈ ರೀತಿಯ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟಿ ಕಾಜೊಲ್ ಹಾಗೂ ಅವರ 'ರಾಜಧಾನಿ ಎಕ್ಸ್‌ಪ್ರೆಸ್' ನಡಿಗೆಯನ್ನು ಟ್ರೋಲ್ ಮಾಡಿದ್ದಾರೆ ನೆಟ್ಟಿಗರು. ಕಠಿಣ ಮತ್ತು ಅರ್ಥಪೂರ್ಣವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು 'ವಾಶ್ರೂಮ್ ಹೋಗಬೇಕೇ' ಎಂದು ಬರೆದರೆ, ಮತ್ತೊಬ್ಬರು 'ಬಹಳಷ್ಟು ಒತ್ತಡದಲ್ಲಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಮೇಕಪ್ ಮಾಡದೆ ಬಂದಿದ್ದಾರೆ ಅನಿಸುತ್ತದೆ, ಹಾಗಾಗಿ ಓಡುತ್ತಿದ್ದಾರೆ ಎಂದು ಬರೆದಿದ್ದಾರೆ. 'ವಿಲಕ್ಷಣವಾಗಿ ನಡೆಯುತ್ತಿದ್ದಾರೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬರ್ತ್‌ಡೇ ಕೇಕ್ ತಂದ ಫ್ಯಾನ್ಸ್ ಜೊತೆ ಕಾಜೊಲ್ ಜಂಭದ ವರ್ತನೆ

ನಟಿಯ ಬರ್ತ್‌ಡೇ ದಿನದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಒಳ್ಳೆ ಕಾರಣಕ್ಕಾಗಿ ನಟಿಯ ವಿಡಿಯೋ ವೈರಲ್ ಅಗಿದ್ದಲ್ಲ. ಒಂದಷ್ಟು ಜನ ಫ್ಯಾನ್ಸ್ ನಟಿಯ ಮನೆಯ ಮುಂದೆ ಕೇಕದ ಜೊತೆ ಬಂದಿದ್ದರು. ನಟಿಗೆ ವಿಶ್ ಮಾಡಿ ಕೇಕ್ ಕತ್ತರಿಸಲೆಂದು ಕಾಜೊಲ್ ಮನೆಯ ಮುಂದೆ ನಿಂತಿದ್ದರು. ನಟಿಯ ಸುತ್ತ ಮುತ್ತಲೂ ಪಪ್ಪಾರಾಜಿಗಳು ಹಾಗೂ ಅಭಿಮಾನಿಗಳು ನಿಂತು ಹ್ಯಾಪಿ ಬರ್ತ್‌ಡೇ ಹಾಡಿದ್ದಾರೆ. ಆಗ ನಟಿ ಕೇಕ್ ತುಂಡರಿಸಿದ್ದಾರೆ. ಈ ಸಂದರ್ಭ ಕೇಕ್ ತೆಗೆದುಕೊಳ್ಳಿ ಎಂದು ಅಭಿಮಾನಿ ಕೇಕ್ ಆಫರ್ ಮಾಡಿದ ನಿರಾಕರಿಸಿದ್ದಾರೆ ನಟಿ. ಈ ಕಾರಣಕ್ಕಾಗಿ ವಿಡಿಯೋ ವೈರಲ್ ಆಗಿದ್ದು, ನಟಿಯ ನಡವಳಿಕೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಛಾಯಾಗ್ರಾಹಕ ವೈರಲ್ ಭಯಾನಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಾಜೋಲ್ ಇಂದು ತಮ್ಮ ಜುಹು ಬಂಗಲೆಯ ಹೊರಗೆ ಕೆಲವು ಹೊರರಾಜ್ಯದ ಅಭಿಮಾನಿಗಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 19 ವರ್ಷಗಳಲ್ಲಿ 30 ಕ್ಕೂ ಹೆಚ್ಚು ಚಲನಚಿತ್ರಗಳ ನಂತರ, ಕಾಜೋಲ್ ದೇಶದ ಅತ್ಯಂತ ಪ್ರೀತಿಯ ತಾರೆಯರಲ್ಲಿ ಒಬ್ಬರಾಗಿದ್ದಾರೆ ಎಂದಿದ್ದಾರೆ.

ತಕ್ಷಣವೇ ಅನೇಕ ಕಾಮೆಂಟ್‌ಗಳು ಹರಿದುಬಂದಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ ಅವಳ ದುರಹಂಕಾರವನ್ನು ನೋಡಿ, ನನಗೆ ಅವಳನ್ನು ಮೊದಲಿನಿಂದಲೂ ಇಷ್ಟವಿಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬಳು ನನ್ನ ತಂಗಿ ಅವಳನ್ನು ಭೇಟಿಯಾದಳು, ಅವಳಿಗೆ ಮಾತನಾಡಲು ಅಥವಾ ಯಾವುದಕ್ಕೂ ಆಸಕ್ತಿಯಿರಲಿಲ್ಲ. ನನ್ನ ತಂಗಿ ರಾಣಿಯನ್ನು ಭೇಟಿಯಾದಳು, ಅವರು ಮಾತನಾಡಿದರು ಮತ್ತು ಫೋಟೋ ತೆಗೆದರು. ದೊಡ್ಡ ವ್ಯತ್ಯಾಸ. ಕಾಜೋಲ್ ಏನೂ ಅಲ್ಲ ಎಂದಿದ್ದಾರೆ.

ದುರ್ಗಾ ಪೂಜೆಯಲ್ಲಿ ತಂಗಿ ಜೊತೆ ಜಗಳವಾಡಿದ ಕಾಜೋಲ್‌ ವಿಡೀಯೋ ವೈರಲ್‌!

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವಾಕಿಂಗ್ ಸ್ಟೈಲ್‌ಗಾಗಿ ಗ್ಲಾಮ್ ಗರ್ಲ್ ಮಲೈಕಾ ಅರೋರಾ ಟ್ರೋಲ್ಗೆ ಒಳಗಾಗಿದ್ದರು. ತನ್ನ ಅಭಿಮಾನಿಗಳಲ್ಲಿ ಉನ್ನತ ಮಟ್ಟದ ಫ್ಯಾಷನ್ ಮತ್ತು ಫಿಟ್‌ನೆಸ್ ಗೋಲ್ಸ್ ನೀಡುವ ನಟಿ, ಇತ್ತೀಚೆಗೆ ವ್ಯಾನಿಟಿ ವ್ಯಾನ್‌ನಿಂದ ಹೊರಗೆ ಬಂದು ನಡೆದ ವೀಡಿಯೊ ವೈರಲ್ ಆದಾಗ ಟ್ರೋಲ್‌ ಆಗಿದ್ದರು. ಮಲೈಕಾ ನಡಿಗೆಯನ್ನು ಗಮನಿಸಿದ ಬಳಕೆದಾರರಲ್ಲಿ ಒಬ್ಬರು ಇವರ ನಡಿಗೆಗೆ ಏನಾಗಿದೆ' ಎಂದು ಬರೆದರೆ, ಮತ್ತೊಬ್ಬರು, 'ಯಾಕೆ ನಟಿ ಯಾವಾಗಲೂ ಹೀಗೆ ನಡೆಯುತ್ತಿದ್ದಾರೆ? ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?