ಗುಟ್ಟಾಗಿ 2ನೇ ಮದ್ವೆಯಾದ್ರಾ ಜ್ಯೋತಿ ರೈ? ತೆಲುಗು ನಿರ್ದೇಶಕನಿಗಾಗಿ ಹೆಸರು ಬದಲಾಯಿಸಿಕೊಂಡ 'ಹೊಂಗನಸು' ನಟಿ

By Shruthi KrishnaFirst Published Jul 30, 2023, 1:58 PM IST
Highlights

ಕನ್ನಡದ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ತೆಲುಗು ನಿರ್ದೇಶಕ ಸುಕು ಪುರ್ವಜ್  ಜೊತೆ ಗುಟ್ಟಾಗಿ 2ನೇ ಮದ್ವೆಯಾದ್ರಾ ಎನ್ನುವ ಸುದ್ದಿ ವೈರಲ್ ಆಗಿದೆ.  ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿಕೊಂಡಿದ್ದು ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ. 

ಕನ್ನಡ ಮತ್ತು ತೆಲುಗು ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಜ್ಯೋತಿ ರೈ 2ನೇ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಜ್ಯೋತಿ ತೆಲುಗು ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಇಬ್ಬರೂ ಗುಟ್ಟಾಗಿ ಕೂಡ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಟ್ವಿಟ್ಟರ್ ಖಾತೆಯಲ್ಲಿ ಜ್ಯೋತಿ ಹೆಸರು ಬದಲಾಗಿರುವುದು. 

ನಟಿ ಜ್ಯೋತಿ ಪತಿಯಿಂದ ದೂರ ಆಗಿದ್ದು ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಜ್ಯೋತಿ ರೈ ಸದ್ಯ ತೆಲುಗಿನಲ್ಲಿ 'ಗುಪ್ಪೆದಂಥ ಮನಸು' ಎನ್ನುವ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಕನ್ನಡದ ಜೊತೆಗೆ ಜ್ಯೋತಿ ತೆಲುಗು ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ತೆಲುಗು ನಿರ್ದೇಶಕನ ಜೊತೆಯೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. 

Latest Videos

ಇತ್ತೀಚೆಗೆ ಜ್ಯೋತಿ ರೈ ನಿರ್ದೇಶಕ ಸುಕು ಪುರ್ವಜ್ ಜೊತೆಗೆ ಹೆಚ್ಚು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಎಲ್ಲಾ ಫೋಟೋಗಳಿಗೂ 'ಜ್ಯೋತಿಪುರ್ವಜ್' ಎಂದು ಹ್ಯಾಷ್ ಟ್ಯಾಗ್ ಹಾಕುತ್ತಿದ್ದಾರೆ. ಜೊತೆಗೆ ಇದೀಗ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಜ್ಯೋತಿ ಮತ್ತು ಸುಕು ಇಬ್ಬರೂ ಪರೋಕ್ಷವಾಗಿ ಇಬ್ಬರೂ ಮದುವೆಯಾಗಿದ್ದೀವಿ ಎನ್ನುವುದನ್ನು ಬಹಿರಂಗ ಪಡಿಸಿದ್ರಾ ಎನ್ನುವ ಅನುಮಾನ ಮೂಡಿದೆ. ಇನ್ನೂ ಇದು ನಿಜಕ್ಕೂ ಅಧಿಕೃತನಾ ಅಥವಾ ಫ್ಯಾನ್ ಮೇಡಾ ಎನ್ನುವುದು ಬಹಿರಂಗವಾಗಬೇಕಿದೆ. 

ಮೊದಲ ಪತಿಯಿಂದ ಡಿವೋರ್ಸ್ 

ನಟಿ ಜ್ಯೋತಿ ರೈ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರು. ಪದ್ಮನಾಭ ರೈ ಎನ್ನುವವರ ಜೊತೆ ಜ್ಯೋತಿ ರೈ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ಜ್ಯೋತಿ ರೈ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಜ್ಯೋತಿ ಮತ್ತು ಪದ್ಮನಾಭ್ ದಂಪತಿಗೆ 10 ವರ್ಷದ ಮಗನಿದ್ದಾನೆ. ಆದರೀಗ ಇಬ್ಬರೂ ದೂರ ಆಗಿದ್ದಾರೆ ಎನ್ನಲಾಗಿದೆ. 

ಪತಿಯಿಂದ ದೂರ ಆದ್ರ 'ಹೊಂಗನಸು' ನಟಿ? ತೆಲುಗು ಯುವ ನಿರ್ದೇಶಕನ ಜೊತೆ ಜ್ಯೋತಿ ರೈ ಡೇಟಿಂಗ್ ವದಂತಿ ವೈರಲ್

ಕಿರುತೆರೆಯ ಫೇಮಸ್ ನಟಿ

ನಟಿ ಜ್ಯೋತಿ ರೈ ಕನ್ನಡದಲ್ಲಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ ಜ್ಯೋತಿ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ, ಕಿನ್ನರಿ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.  ಕನ್ನಜ ಮಾತ್ರವಲ್ಲದೆ ಪರಭಾಷೆಯಲ್ಲು ಜ್ಯೋತಿ ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. 

ಕ್ಯಾನ್ಸರ್‌ಗೆ ತಾಯಿ ಕಳೆದುಕೊಂಡೆ, ಡಿಪ್ರೆಶನ್‌ಗೆ ಜಾರಿ ಮಗು ಮಾಡಿಕೊಂಡೆ: 'ಕಿನ್ನರಿ' ನಟಿ ಜ್ಯೋತಿ ರೈ ಕಣ್ಣೀರು

ಸುಕು ಜೊತೆ ಸಿನಿಮಾ

ಸುಕು ಮತ್ತು ಜ್ಯೋತಿ ಇಬ್ಬರೂ ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿವೆ. ಇಬ್ಬರ ಫೋಟೋಗಳಿಗೆ ಅಭಿಮಾನಿಗಳು ಸಹ ಕ್ರೇಜಿ ಕಾಮೆಂಟ್ ಮಾಡುತ್ತಿದ್ದಾರೆ. 

click me!