ಜೈಲು ಸೇರಿದ್ದ ಶಾರುಖ್ ಪುತ್ರನನ್ನು ಬಿಡಿಸಲು 1 ಲಕ್ಷ ರೂ.ಬಾಂಡ್‌ಗೆ ಸಹಿ ಮಾಡಿದ್ದ ಬಗ್ಗೆ ನಟಿ ಜೂಹಿ ಚಾವ್ಲಾ ಮೊದಲ ಬಾರಿಗೆ ಮಾತನಾಡಿದ್ದಾರೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗಾಗಿ 1 ಲಕ್ಷ ರೂಪಾಯಿ ಬಾಂಡ್‌ಗೆ ಸಹಿ ಹಾಕಿದ್ದ ನಟಿ ಜೂಹಿ ಚಾವ್ಲಾ ತಮ್ಮ ನಿರ್ಧಾರದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಜೂಹಿ ಆರ್ಯನ್ ಖಾನ್2ಗೆ ಮಾಡಿದ ಸಹಾಯ ನೆನಪಿಸಿಕೊಂಡಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆ ಎಂದು ಹೇಳಿರುವ ಜೂಹಿ ಇದು ತಾನು ಮಾಡಬೇಕಾದ ಸರಿಯಾದ ಕೆಲಸ ಎಂದು ತಾನು ಭಾವಿಸಿದ್ದೇನೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಳಿಕ ಜಾಮೀನಿನ ಮೇಲೆ ಹೊರಬಂದರು. ಆರ್ಯನ್ ಖಾನ್ ಜಾಮೀನಿಗೆ ಶಾರುಖ್ ಖಾನ್ ಗೆಳತಿ ಖ್ಯಾತ ನಟಿ ಜೂಹಿ ಚಾವ್ಲಾ ಸಹಾಯ ಮಾಡಿದ್ದರು. ಈ ವಿಚಾರ ಅಂದೇ ಬಹಿರಂಗವಾಗಿತ್ತು. ಶಾರುಖ್ ಪುತ್ರನಿಗಾಗಿ 1 ಲಕ್ಷ ರೂಪಾಯಿ ಬಾಂಡ್‌ಗೆ ಸಹಿ ಹಾಕಿದ್ದರು. ಜೂಹಿ ಚಾವ್ಲಾ ಮತ್ತು ಶಾರುಖ್ ಖಾನ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ, ಒಟ್ಟಾಗಿ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆರ್ಯನ್ ಹುಟ್ಟಿದಾಗಿನಿಂದಲೂ ಜೂಹಿ ಚಾವ್ಲಾರಿಗೆ ಪರಿಚಯ. ಅದೇ ಸ್ನೇಹ ಬಾಂಧವ್ಯದ ಮೇರೆಗೆ ಶಾರುಖ್ ಪುತ್ರನಿಗೆ ಜೂಹಿ ಚಾವ್ಲಾ ಅವರೇ ಶ್ಯೂರಿಟಿ ನೀಡಿದ್ದರು. ಈ ಬಗ್ಗೆ ಆರ್ಯನ್ ಖಾನ್ ಪರ ವಕೀಲರಾಗಿದ್ದ ಸತೀಶ್ ಮನೇಶಿಂಧೆ ಮಾಹಿತಿ ನೀಡಿದ್ದರು.
ಇದೀಗ ಮೊದಲ ಬಾರಿಗೆ ಈ ಬಗ್ಗೆ ಜೂಹಿ ಮಾತನಾಡಿದ್ದಾರೆ. 'ಇಂಥ ಒಂದು ಸಂದರ್ಭ ಬರುತ್ತೆ ಎಂದು ನಾವು ಖಂಡಿತ ತಿಳಿದಿರಲಿಲ್ಲ. ಆದರೆ ಆ ಸಮಕ್ಕೆ ನಾನು ಮಾಡಿದ ಸರಿಯಾದ ಕೆಲಸ ಎಂದು ನಾನು ಭಾವಿಸಿದೆ ಇದು ಅವನಿಗಾಗಿ' ಎಂದು ಹೇಳಿದರು. 'ಶಾರುಖ್ ಕುಟುಂಬದಲ್ಲಿ ಸಮಾಧಾನದ ಭಾವನೆ ಇದೆ. ನಾವೆಲ್ಲರೂ ಸಂತೋಷವಾಗಿ ಇದ್ದೀವಿ' ಎಂದು ಜೂಹಿ ಹೇಳಿದರು.
ನನ್ನ ಮದುವೆ ಪ್ರಸ್ತಾಪ ರಿಜೆಕ್ಟ್ ಮಾಡಿದ್ರು ಜೂಹಿ ಚಾವ್ಲಾ ತಂದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಲ್ಮಾನ್ ಖಾನ್
ಜೂಹಿ ಮತ್ತು ಶಾರುಖ್ ಉತ್ತಮ ಸ್ನೇಹಿತರು. ಇಬ್ಬರೂ ಉತ್ತಮ ಗೆಳೆಯರಾಗಿದ್ದರೂ ಭೇಟಿಯಾಗುವುದು ಅಪರೂಪ ಎಂದು ಬಹಿರಂಗಪಡಿಸಿದರು. ತನಗಿಂತ ಪತಿ ಜಯ್ ಮೆಹ್ತಾ ಅವರೊಂದಿಗೆ ಶಾರುಖ್ ಹೆಚ್ಚು ಸಂಪರ್ಕದಲ್ಲಿದ್ದಾರೆ ಎಂದು ನಟಿ ಹೇಳಿದರು.
ಇತ್ತೀಚೆಗಷ್ಟೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಶಾರುಖ್ ಮತ್ತು ಜೂಹಿ ನಟನೆಯ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಸಿನಿಮಾದ ಹಾಡನ್ನು ಹಾಕಲಾಗಿತ್ತು. ಆ ಬಗ್ಗೆ ಬಗ್ಗೆಯೂ ಮಾತನಾಡಿದ್ದಾರೆ. ಜೂಹಿ ಶಾರುಖ್‌ಗೆ ಹೇಳಿದ್ದನ್ನು ನೆನಪಿಸಿಕೊಂಡರು, ಆ ಸಿನಿಮಾ ಬಿಡುಗಡೆಯಾಗಿ 23 ವರ್ಷಗಳ ನಂತರ, ಈ ಹಾಡು ಸ್ಟೇಡಿಯಂನಲ್ಲಿ ಇಂತಹ ಮಹತ್ವದ ಸಂದರ್ಭದಲ್ಲಿ ಪ್ಲೇ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಜನರು ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ ಎಂದು ತಿಳಿದಿದ್ದರೆ ಕೆಲವು ವಿಷಯಗಳನ್ನು ವಿಭಿನ್ನವಾಗಿ ಮಾಡುತ್ತಿದ್ದೆ ಎಂದು ಶಾರುಖ್ ಜೊತೆ ಮಾತನಾಡಿದ್ದನ್ನು ಶೇರ್ ಮಾಡಿದ್ದರು.
ಡಿವೋರ್ಸ್ ಆದರೆ ನನ್ನನೇ ಮದುವೆ ಆಗಿ; ಜೂಹಿ ಚಾವ್ಲಾಗೆ ಪ್ರಪೋಸ್ ಮಾಡಿದ ನೆಟ್ಟಿಗ
ಜೂಹಿ ಮತ್ತು ಶಾರುಖ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡರ್, ಯೆಸ್ ಬಾಸ್, ಡುಪ್ಲಿಕೇಟ್ ಮತ್ತು ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ಸೋಹಾ ಅಲಿ ಖಾನ್, ಕೃತಿಕಾ ಕಮ್ರಾ, ಕರಿಷ್ಮಾ ತನ್ನಾ ಮತ್ತು ಶಹಾನಾ ಗೋಸ್ವಾಮಿ ಅವರೊಂದಿಗೆ ಹುಶ್ ಹುಶ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದರು.