ಕಥೆ ಬದಲಾಯಿಸುವುದಿಲ್ಲ ಎಂದು ಹಠ ಮಾಡಿದ ನಯನತಾರಾ ಗಂಡ; ತಲಾ ಅಜಿತ್ ಸಿನಿಮಾದಿಂದ ಹೊರ ಬಂದ ವಿಘ್ನೇಶ್

Published : Apr 11, 2023, 04:09 PM IST
ಕಥೆ ಬದಲಾಯಿಸುವುದಿಲ್ಲ ಎಂದು ಹಠ ಮಾಡಿದ ನಯನತಾರಾ ಗಂಡ; ತಲಾ ಅಜಿತ್ ಸಿನಿಮಾದಿಂದ ಹೊರ ಬಂದ ವಿಘ್ನೇಶ್

ಸಾರಾಂಶ

AK62 ಸಿನಿಮಾದಲ್ಲಿ ದೊಡ್ಡ ಬದಲಾವಣೆ. ಕ್ರಿಯೇಟಿವಿಟಿ ಕೊರತೆ ಇದೆ ಎಂದು ಚಿತ್ರಕಥೆ ಬದಲಾಯಿಸಲು ಒತ್ತಾಯಿಸಿದ ನಿರ್ಮಾಪಕರು....   

ಕಳೆದ ಎರಡು ಮೂರು ವಾರಗಳಿಂದ ಲೇಡಿ ಸೂಪರ್ ಸ್ಟಾರ್ ನಯನತಾರಾ ಪತಿ ವಿಘ್ನೇಶ್‌ ಖುಷಿಯಿಂದ ತೇಲುತ್ತಿದ್ದರು. ಕಾರಣ ತಲಾ ಅಜಿತ್ ಕುಮಾರ್ ಅವರ AK62 ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದಕ್ಕೆ. ಆದರೆ ಇದ್ದಕ್ಕಿದ್ದಂತೆ ವಿಘ್ನೇಶ್ ನಿರ್ದೇಶನ ಮಾಡುವುದಿಲ್ಲ ಎಂದು ಹಿಂದೆ ಬಂದಿರುವುದು ಅಚ್ಚರಿಯ ವಿಚಾರ. ಅಜಿತ್ ಜೊತೆ ಕಾಣಿಸಿಕೊಂಡರೆ ಸಾಕು ಫೋಟೋ ತೆಗೆಸಿಕೊಂಡರೆ ಸಾಕು ಎಂದು ಖುಷಿ ಪಡುವವರು ತುಂಬಾ ಮಂದಿ ಇದ್ದಾರೆ ಆದರೆ ವಿಘ್ನೇಶ್ ಈ ಸೂಪರ್ ಆಫರ್‌ನ ಕೈ ಬಿಡಲು ಕಾರಣವೇನು?  ವಿಘ್ನೇಶ್ ಜಾಗಕ್ಕೆ ಯಾರು ಬಂದಿದ್ದಾರೆ? ಸಂಪೂರ್ಣ ವಿಚಾರದ ಬಗ್ಗೆ ಸ್ವತಃ ವಿಘ್ನೇಶ್ ಕ್ಲಾರಿಟಿ ಕೊಟ್ಟಿದ್ದಾರೆ. 

AK62 ಸಿನಿಮಾ ನಿರ್ಮಾಪಕರಿಗೆ ಕಥೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತಂತೆ ಸಣ್ಣ ಪುಟ್ಟ ಬದಲಾವಣೆ ಮಾಡಬಹುದು ಆದರೆ ಸೆಕೆಂಡ್‌ ಹಾಫ್‌ ಫುಲ್‌ ಬದಲಾಯಿಸುವುದಕ್ಕೆ ಆಗಲ್ಲ ಎಂದು ವಿಘ್ನೇಶ್‌ ಪ್ರಾಜೆಕ್ಟ್‌ ಕೈ ಬಿಡುವ ಮನಸ್ಸು ಮಾಡಿದ್ದಾರೆ. 'ಒಬ್ಬರೇ ಪ್ರತಿಯೊಂದನ್ನು ಹ್ಯಾಂಡಲ್‌ ಮಾಡುವುದು ತುಂಬಾ ಕಷ್ಟವಾಗುತ್ತದೆ. ಸಾಕಪ್ಪ ಎನ್ನುವಷ್ಟು ಬೇಸರವಾಗುತ್ತದೆ. ಸಹಿ ಮಾಡಿದ ಮೇಲೆ ನಮ್ಮ ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಬೇಕು ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಅಂದ್ರರ ಯೋಚನೆ ಮಾಡಬಹುದಿತ್ತು ಆದರೆ ಸೆಕೆಂಡ್ ಹಾಫ್‌ ಸಂಪೂರ್ಣ ಬದಲಾಯಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಸೆಕೆಂಡ್ ಹಾಫ್‌ನಲ್ಲಿ ಬರುವುದೇ ಮುಖ್ಯವಾದ ಕಥೆ ಅದೇ ಬೇಡ ಅಂಧ್ರೆ ನನ್ನ ಕಥೆಗೆ ಬೆಲೆ ಎಲ್ಲಿದೆ?' ಎಂದು ಗಲಾಟಾ ಪ್ಲಸ್‌ ಸಂದರ್ಶನದಲ್ಲಿ ವಿಘ್ನೇಶ್ ಮಾತನಾಡಿದ್ದಾರೆ. 

ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್; ಮೊಬೈಲ್ ಒಡೆದು ಹಾಕ್ತೀನೆಂದು ಸಿಟ್ಟಿಗೆದ್ದ ನಯನತಾರಾ

'ನನ್ನ ಕಥೆಯನ್ನು ನಾನು ಬದಲಾಯಿಸುವುದಿಲ್ಲ. ತಲಾ ಅಜಿತ್‌ ಕುಮಾರ್ ಸರ್‌ ಜೊತೆ ಏನೂ ಸಮಸ್ಯೆ ಇರಲಿಲ್ಲ ಪ್ರತಿಯೊಂದು ಸೂಪರ್ ಆಗತ್ತು ಆದರೆ ನಿರ್ಮಾಪಕರು ಕಿರಿಕಿರಿ ಮಾಡಿಬಿಟ್ಟರು. ನಿರ್ಮಾಪಕರ ಡಿಮ್ಯಾಂಡ್‌ನ ಕೇಳಬಹುದು ಆದರೆ ಇಡೀ ಕಥೆ ಬದಲಾಯಿಸಬೇಕು ಅಂದ್ರೆ ಯಾಕೆ ನಮ್ಮ ಕತೆಯನ್ನು ಆರಂಭದಲ್ಲಿ ಒಪ್ಪಿಕೊಳ್ಳಬೇಕು? ನಾನು ಬದಲಾಯಿಸುವುದಿಲ್ಲ ಎಂದು ಹೇಳಿ ಹೊರ ಬಂದೆ' ಎಂದು ವಿಘ್ನೇಶ್ ಹೇಳಿದ್ದಾರೆ. 

ಪರ್ಪಲ್‌ ಬಣ್ಣದ ಸೀರೆಯಲ್ಲಿ ಮಿಂಚಿದ ನಯನತಾರಾ; ಬೆಲೆ ಕೇಳಿ ಹೆಣ್ಣುಮಕ್ಕಳು ಶಾಕ್...

'ಸಿನಿಮಾವನ್ನು ಯಾರು ಬೇಕಿದ್ದರೂ ನಿರ್ದೇಶನ ಮಾಡಲಿ... ಮಾಗಿಜ್ ತಿರುಮೇನಿ ಆಕ್ಷನ್ ಕಟ್ ಹೇಳಬಹುದು ಎನ್ನುತ್ತಿದ್ದಾರೆ ಮಾಡಲಿ ಅವರು ತುಂಬಾ ಒಳ್ಳಯ ನಿರ್ದೇಶಕರು. ಅವರು ಸಿನಿಮಾವನ್ನು ಅದ್ಭುತವಾಗಿ ಹ್ಯಾಂಡಲ್ ಮಾಡುತ್ತಾರೆ. ಯಾವ ಕೆಲಸ ಬೇಗ ಆಗುತ್ತಿದೆ ಯಾವ ಕೆಲಸ ತಡ ಆಗುತ್ತಿದೆ ಎಂದು ನಾನು ಊಹಿಸಬಹುದು. ಈ ಸಿನಿಮಾ ಬೇಗ ಸಿಕ್ತು ಅನೇಕ ಕಾರಣಗಳಿಂದ ಬೇಗ ಹೊರ ಬಂದಿರುವೆ. ಕೆಲವೊಮ್ಮೆ Queueನಲ್ಲಿ ಬೇಗ ನಿಂತುಕೊಂಡಾಗ ಯಾರಾದರೂ ಒಬ್ಬರು ಎಳೆದು ಹೊರ ನೂಕುತ್ತಾರೆ. ಅನೇಕರು ಈ ಸಮಯದಕ್ಕೆ ಕಾಯುತ್ತಿದ್ದರು. ಸಿನಿಮಾದಲ್ಲಿ ಒಬ್ಬರು ಅವಕಾಶ ಕಳೆದುಕೊಂಡೆ ಮತ್ತೊಮ್ಮೆ  ಅವಕಾಶ ಪಡೆದುಕೊಳ್ಳುತ್ತಾರೆ. ನಾನು ಅವಕಾಶ ಕಳೆದುಕೊಂಡು ಕಾರಣ ಮಾಗಿಜ್‌ ಪಡೆದುಕೊಂಡರು. ಒಳ್ಳೆಯದಾಗಲಿ ಸಿನಿಮಾ ನೋಡಲು ನಾನು ಕಾಯುವೆ' ಎಂದಿದ್ದಾರೆ ವಿಘ್ನೇಶ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?