Casting Couch: ಗಟ್ಟಿಯಾಗಿ ತಬ್ಬಿಕೊಂಡ, ಖಾಸಗಿ ಅಂಗ ಮುಟ್ಟಿದ; ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಮಾಳವಿಕಾ

Published : Apr 11, 2023, 04:21 PM ISTUpdated : Apr 11, 2023, 04:25 PM IST
Casting Couch: ಗಟ್ಟಿಯಾಗಿ ತಬ್ಬಿಕೊಂಡ, ಖಾಸಗಿ ಅಂಗ ಮುಟ್ಟಿದ; ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಮಾಳವಿಕಾ

ಸಾರಾಂಶ

ಆಡಿಷನ್‌ಗೆ ಹೋದಾಗ ಹಿಂದೆಯಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡ, ಖಾಸಗಿ ಅಂಗ ಮುಟ್ಟಿದ ಎಂದು ನಟಿ ಮಾಳವಿಕಾ ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟಿದ್ದಾರೆ.   

ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಚಿತ್ರರಂಗದ ಕರಳ ಮುಖ ತೆರೆದಿಟ್ಟಿದ್ದಾರೆ. ಕಾಸ್ಟಿಂಗ್ ಕೌಚ್ ವಿರುದ್ಧ ಮೀ ಟೂ ಅಭಿಯಾನ ಕೂಡ ಪ್ರಾರಂಭವಾಗಿದೆ. ಆದರೂ ಇನ್ನೂ ಅನೇಕ ನಟಿಯರು ಇಂಥ ಕೆಟ್ಟ ಅನುಭವ ಎದುರಿಸುತ್ತಿದ್ದಾರೆ. ಕಾಸ್ಟಿಂಗ್​ ಕೌಚ್​ ಪಿಡುಗಿನಿಂದ ಬೇಸತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಈ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಅಂಟಿರುವ ಕೆಟ್ಟ ಪಿಡುಗು ದೂರ ಆಗಬೇಕು ಎಂದು ಹೋರಾಡಿದ್ದಾರೆ. ಇದೀಗ ಮತ್ತೋರ್ವ ನಟಿ ಚಿತ್ರರಂಗದ ಕೆಟ್ಟ ಅನುಭವದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಡಿಷನ್‌ಗೆ ಎಂದು ಕರೆದು ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಬೆಚ್ಚಿಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಟಿ ಮಾಳವಿಕಾ ಶ್ರೀನಾಥ್. 

ನಟಿ ಮಾಳವಿಕಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ‘ಮಧುರಂ’, ‘ಸ್ಯಾಟರ್ಡೇ ನೈಟ್' ಅನೇಕ ಚಿತ್ರಗಳಲ್ಲಿ ಮಿಂಚಿದ್ದಾರೆ. ‘24’ ವಾಹಿನಿಯ ‘ಹ್ಯಾಪಿ ಟು ಮೀಟ್​ ಯೂ’ ಸಂದರ್ಶನದಲ್ಲಿ ಮಾಳವಿಕಾ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಬಾಯಿಬಿಟ್ಟಿದ್ದಾರೆ. ಮೂರು ವರ್ಷದ ಹಿಂದೆ ಆಡಿಷನ್​ ಹೋಗಿದ್ದಾಗ ಏನಾಯ್ತು ಎಂದು ಬಿಚ್ಚಿಟ್ಟಿದ್ದಾರೆ. ಮಂಜು ವಾರಿಯರ್​ ಮಗಳ ಪಾತ್ರಕ್ಕಾಗಿ ಆಡಿಷನ್​ ಕರೆಯಲಾಗಿತ್ತು. ಆಗ ಕಾಸ್ಟಿಂಗ್​ ಕೌಚ್​ ಅನುಭವ ಆಗಿತ್ತು ಎಂದು ಹೇಳಿದ್ದಾರೆ. 

‘ಕೌಸ್ಟಿಂಗ್​ ಕೌಚ್​ ಇರುವುದು ನಿಜ. ನಾನು ಅದರ ಸಂತ್ರಸ್ತೆ. ಈ ಬಗ್ಗೆ ನಾನು ಬಹಿರಂಗವಾಗಿ ಎಲ್ಲಿಯೂ ಹೇಳಿರಲಿಲ್ಲ. ಈಗ ನನಗೆ ಚಿತ್ರರಂಗದಲ್ಲಿ ಒಂದು ಸ್ಥಾನ ಸಿಕ್ಕಿದೆ. ಹಾಗಾಗಿ ಇದನ್ನು ಹೇಳಲು ಧೈರ್ಯ ತೋರಿಸುತ್ತೇನೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದರು. ‘ಮಂಜು ವಾರಿಯರ್​ ಮಗಳ ಪಾತ್ರ ಎಂದಾಗ ಎಂಥವರೂ ಇಷ್ಟ ಪಡುತ್ತಾರೆ. ಚಿತ್ರರಂಗದಲ್ಲಿ ನನಗೆ ಯಾರ ಸಂಪರ್ಕವೂ ಇರಲಿಲ್ಲ. ನಾನು ಕೂಡ ಆಡಿಷನ್​ಗೆ ಹೋದೆ. ಅದು ನಿಜವಾದ ಆಡಿಷನ್​ ಹೌದೋ ಅಲ್ಲವೋ ಎಂಬುದು ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ ಮಾಳವಿಕಾ.

ನಿರ್ದೇಶಕ ರೂಮಿಗೆ ಕರೆದಾಗ ವಿದ್ಯಾ ಬಾಲನ್ ಮಾಡಿದ್ದೇನು? ಸಿನಿರಂಗದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

‘ತ್ರಿಶುರ್​ನಲ್ಲಿ ಆಡಿಷನ್​ ಇತ್ತು. ತಾಯಿ ಮತ್ತು ಸಹೋದರಿ ಜೊತೆ ನಾನು ಅಲ್ಲಿಗೆ ಹೋದೆ. ಆಡಿಷನ್​ ಬಳಿಕ ನನ್ನ ಕೂದಲು ಕೆದರಿದ್ದರಿಂದ ಡ್ರೆಸಿಂಗ್​ ರೂಮ್​ಗೆ ತೆರಳಿ ಸರಿಮಾಡಿಕೊಳ್ಳುವಂತೆ ಆತ ಸೂಚಿಸಿದ. ನಾನು ಡ್ರೆಸಿಂಗ್​ ರೂಮ್​ನಲ್ಲಿ ಇದ್ದಾಗ ಆತ ಹಿಂದಿನಿಂದ ಬಂದು ತಬ್ಬಿಕೊಂಡ. ಖಾಸಗಿ ಅಂಗ ಮುಟ್ಟಿದ. ನಾನುಬಿಡಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಬಿಟ್ಟಿಲ್ಲ’ ಎಂದು ಹೇಳಿದ್ದಾರೆ. 

ಒಂಟಿಯಾಗಿ ಬನ್ನಿ ಅಂತಾರೆ, ತಾಯಿ ಜೊತೆ ಬಂದ್ರೆ ಅವಕಾಶ ಇಲ್ಲ; ಚಿತ್ರರಂಗದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟಿ

‘ನಾನು ಆಗ ಚಿಕ್ಕವಳಾಗಿದ್ದೆ. ನನ್ನ ತಾಯಿ ಮತ್ತು ಸಹೋದರಿಯನ್ನು ಹೊರಗೆ ಕೂರಲು ಹೇಳಿದರು. ಭಯದಿಂದ ನಡುಗಿಹೋದೆ. ಆತನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಜೋರಾಗಿ ಅಳಲು ಆರಂಭಿಸಿದೆ. ಆತನ ಕ್ಯಾಮೆರಾವನ್ನು ಕೆಡಗಲು ಯತ್ನಿಸಿದೆ. ಅವನ ಗಮನವನ್ನು ಬೇರೆ ಕಡೆಗೆ ಸೆಳೆದು ಅಲ್ಲಿಂದ ತಪ್ಪಿಸಿಕೊಂಡು ಬಂದೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದಾರೆ. ಆದರೆ ಆತ ಯಾರು ಎನ್ನುವುದನ್ನು ಮಾಳವಿಕಾ ಬಹಿರಂಗ ಪಡಿಸಿಲ್ಲ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?