ನಟಿ ಜಯಾ ಬಚ್ಚನ್‌ಗೆ ಮಂಡಿ ಉದ್ದ ಕೂದಲು ಬೆಳೆಯಲು ಸಹಾಯ ಮಾಡಿದ್ದೇ ಈ ಎಣ್ಣೆ; ರಿಸಿಪಿ ಲೀಕ್!

Published : Mar 17, 2025, 11:57 AM ISTUpdated : Mar 17, 2025, 12:25 PM IST
ನಟಿ ಜಯಾ ಬಚ್ಚನ್‌ಗೆ ಮಂಡಿ ಉದ್ದ ಕೂದಲು ಬೆಳೆಯಲು ಸಹಾಯ ಮಾಡಿದ್ದೇ ಈ ಎಣ್ಣೆ; ರಿಸಿಪಿ ಲೀಕ್!

ಸಾರಾಂಶ

ಜಯಾ ಬಚ್ಚನ್ ತಮ್ಮ ಸೌಂದರ್ಯ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಕೂದಲಿನ ಆರೈಕೆಗಾಗಿ ಕೊಬ್ಬರಿ ಎಣ್ಣೆಗೆ ಕರಿಬೇವು, ಮೆಂತ್ಯೆ, ಈರುಳ್ಳಿ ಸೇರಿಸಿ ಬಳಸುತ್ತಿದ್ದರು. ಚರ್ಮದ ಆರೈಕೆಗಾಗಿ ಮನೆಯಲ್ಲಿ ತಯಾರಿಸಿದ ಮೊಸರು, ಅರಿಶಿಣ, ಅಕ್ಕಿ ಹಿಟ್ಟಿನ ಮಿಶ್ರಣವನ್ನು ಉಪಯೋಗಿಸುತ್ತಿದ್ದರು. ತಾಳ್ಮೆ ಹೆಚ್ಚಿಸಲು ಉಪ್ಪನ್ನು ಚರ್ಮಕ್ಕೆ ಉಜ್ಜುವುದು ಹಾಗೂ ಆರೋಗ್ಯಕ್ಕಾಗಿ ಸಾತ್ವಿಕ ಆಹಾರ ಸೇವಿಸುವುದು ಮುಖ್ಯವೆಂದು ಅವರು ಸಲಹೆ ನೀಡಿದ್ದಾರೆ.

80-90ರ ದಶಕದಲ್ಲಿ ಬಿ-ಟೌನ್‌ ಅಂಗಳದಲ್ಲಿ ಸಖತ್ ಹೆಸರು ಮಾಡಿದ ನಟಿ ಜಯಾ ಬಚ್ಚನ್. ಅಮಿತಾಭ್ ಬಚ್ಚನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟರು. ಮೊಮ್ಮಕ್ಕಳು ಬಂದ ಮೇಲೆ ರಾಜಕೀಯಕ್ಕೆ ಕಾಲಿಟ್ಟರು. ಈಗಲೂ ಸ್ಕಿನ್ ಆಂಡ್ ಹೆಲ್ತ್‌ ಕೇರ್ ಮಾಡುವ ಜಯಾ ತಮ್ಮ ಕೆಲವೊಂದು ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ.

ಕೂದಲು ಎಣ್ಣೆ:

'ಬೆಂಗಾಲಿಗಳು ತಮ್ಮ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ ಅದಿಕ್ಕೆ ಅವರ ಕೂದಲು ಸದಾ ಉದ್ದ ಇರುತ್ತದೆ. ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಗೆ ಕರಿಬೇವು,ಮೆಂತ್ಯೆ  ಕಾಳು, ಈರುಳ್ಳಿ ಸೇರಿಸಿ ಬಿಸಿ ಮಾಡಬೇಕು. ತಣ್ಣಗಾಗುವವರೆಗೂ ಪಕ್ಕದಲ್ಲಿ ಇಟ್ಟು ಆನಂತರ ಒಂದು ಬಾಟಲ್‌ಗೆ ಶಿಫ್ಟ್ ಮಾಡಬೇಕು. ವಾರಕ್ಕೆ ಎರಡು ಮೂರು ಸಲ ಬಳಸಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ ಹಾಗೂ ದಪ್ಪ ಇರುತ್ತಿತ್ತು. ನಮ್ಮ ಕಾಲದಲ್ಲಿ ಯಾವುದೇ ಶಾಂಪೂ ಇರಲಿಲ್ಲ. ಸನ್‌ಲೈಟ್‌ ಎಂಬ ಸೋಪ್‌ ಬಳಸುತ್ತಿದ್ದೆ. ಹೀಗಾಗಿ ನನ್ನ ಕೂದಲು ಹಿಮ್ಮಡಿ ತನಕ ಬೆಳೆಯುತ್ತಿತ್ತು' ಎಂದು ಜಯಾ ಬಚ್ಚನ್ ಹೇಳಿದ್ದಾರೆ.

ನಿಜಕ್ಕೂ ಈ ಪ್ರಪಂಚದ ಸುಂದರಿ ನೀನಾ? ಅನುಷ್ಕಾ ಶರ್ಮಾ ಪ್ರಶ್ನೆಗೆ ಅತಿ ಸ್ಮಾರ್ಟ್ ಉತ್ತರ ಕೊಟ್ಟ ಐಶ್ವರ್ಯ ರೈ!

ಬ್ಯೂಟಿ ಟಿಪ್ಸ್:

'ಆ ಕಾಲದಲ್ಲಿ ಯಾವುದೇ ಬ್ಯೂಟಿ ಬ್ರಾಂಡ್‌ಗಳು ಇರಲಿಲ್ಲ ಯಾರೂ ಪ್ರಚಾರ ಮಾಡುತ್ತಿರಲಿಲ್ಲ ಬಹುಷ ನಾನು ಕ್ರೀಮ್ ಅಷ್ಟೇ ಹಾಕಿರುವುದು. ನಿವ್ಯಾ ಬ್ರಾಂಡ್‌ನಲ್ಲಿ ಬರುತ್ತಿದ್ದ ಕೋಲ್ಡ್ ಕ್ರೀಮ್ ಅಷ್ಟೇ ಹಚ್ಚುತ್ತಿದ್ದೆ. ಈಗ ನಾನು ಸ್ಕಿನ್‌ ಕೇರ್ ಮಾಡುವುದಕ್ಕೆ ಶುರು ಮಾಡಿದ್ದೀನಿ ಆದರೂ ನಾನು ಯಾವುದೇ ಕೆಮಿಕಲ್‌ ಇರುವ ಪ್ರಾಡೆಕ್ಟ್‌ಗಳನ್ನು ಬಳಸುವುದಿಲ್ಲ. ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಮನೆಯಲ್ಲಿ ಮಾಡಿದ ಮೊಸರಿಗೆ ಅರಿಶಿಣ ಮತ್ತು ಅಕ್ಕಿ ಹಿಟ್ಟು ಬೆರೆಸಿ ನಮ್ಮ ಮೈ ಕೈ ಹಚ್ಚುತ್ತಿದ್ದರು. ಬಿಸಿಲಿಗೆ ಚರ್ಮ ಕಪ್ಪಾಗಿದ್ದರೆ ಅದು ಸುಳಿದು ಬರುತ್ತಿತ್ತು' ಎಂದು ಜಯಾ ಹೇಳಿದ್ದಾರೆ.

ಟೆಂಟ್‌ನಲ್ಲಿ ಜಾಕಿ ಚಿತ್ರ ನೋಡುವಾಗ ನಟ ಕಿಶೋರ್‌ ಜೇಬಿನಲ್ಲಿದ್ದ ಹಣವನ್ನು ಎಸೆದು ಕುಣಿದು ಕುಪ್ಪಳಿಸಿದ ಅನುಶ್ರೀ

'ನಾನು ಬೆಳೆದ ರೀತಿಯಲ್ಲಿ ನನ್ನ ಮಗಳನ್ನು ಬೆಳೆಸಿದ್ದು. ಈ ಕಾಲದಲ್ಲಿ ತುಂಬಾ ನೆಮ್ಮದಿ ಹಾಗೂ ಖುಷಿಯಿಂದ ಇರಬೇಕು ಅಂದ್ರೆ ಸೈಲೆಂಟ್ ಆಗಿ ಇರಬೇಕು, ಹೆಚ್ಚಾಗಿ ಮಾತನಾಡಬಾರದು. ನಮ್ಮಲ್ಲಿ ತಾಳ್ಮೆ ಹೆಚ್ಚಾಗಬೇಕು ಅಂದ್ರೆ ಉಪ್ಪನ್ನು ನಮ್ಮ ತ್ವಚ್ಛೆ ಮೇಲೆ ಉಜ್ಜಬೇಕು. ಅದರೆ ಅಮಿತಾಭ್‌ ಮಾತ್ರ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳುತ್ತಾರೆ.  ಸರಿಯಾಗಿ ಊಟ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವು ಅಡುಗೆ ಮಾಡುವ ರೀತಿ ನಮ್ಮ ಆರೋಗ್ಯ ಇರುತ್ತದೆ. ಅಡುಗೆ ಮನೆಯಲ್ಲಿ ನಾವು ಅರಿಶಿಣ ಬಳಸುತ್ತೀವಿ ಹೀಗೆ ಪ್ರತಿಯೊಂದರಲ್ಲೂ ಹಲವು ಲಾಭಗಳು ಇರುತ್ತದೆ' ಎಂದಿದ್ದಾರೆ ಜಯಾ. 

ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಪೆಷಲ್ ಡ್ಯಾನ್ಸ್‌ಗಾಗಿಯೇ ನಾಯಕಿಯನ್ನು ಹುಡುಕುವ ನೆಲ್ಸನ್: ಜೈಲರ್ 2ನಲ್ಲಿ ರಜನಿಕಾಂತ್ ಆ ಫೀಲಿಂಗ್ಸ್ ಈಡೇರುತ್ತಾ?
9 ಸಿನಿಮಾ ಮಾಡಿದ್ರೂ 8 ಫ್ಲಾಪ್.. ಪ್ಯಾನ್ ಇಂಡಿಯಾ ಸ್ಟಾರ್ ಮೇಲಿದೆ ಭರವಸೆ.. ಯಾರು ಈ ನಟಿ?