ಐಶ್​ ಪಾಲಿಗೆ ಅಮ್ಮನಂತಿದ್ದ ಜಯಾ ಸೀರಿಯಲ್​ ಅತ್ತೆ ಥರ ವಿಲನ್​ ಆಗಿದ್ದೇಕೆ? ವಿಡಿಯೋದಲ್ಲಿ ಏನಿದೆ?

Published : Jul 18, 2024, 09:22 PM IST
ಐಶ್​ ಪಾಲಿಗೆ ಅಮ್ಮನಂತಿದ್ದ ಜಯಾ ಸೀರಿಯಲ್​ ಅತ್ತೆ ಥರ ವಿಲನ್​ ಆಗಿದ್ದೇಕೆ? ವಿಡಿಯೋದಲ್ಲಿ ಏನಿದೆ?

ಸಾರಾಂಶ

ಐಶ್​​ ಪಾಲಿಗೆ ಅಮ್ಮನಂತಿದ್ದ ಜಯಾ ಸೀರಿಯಲ್​ ಅತ್ತೆ ಥರ ವಿಲನ್​ ಆಗಿದ್ದೇಕೆ? ಹಳೆಯ ವಿಡಿಯೋದಲ್ಲಿ ಜಯಾ ಬಚ್ಚನ್​ ಸೊಸೆ ಕುರಿತು ಹೇಳಿದ್ದೇನು?    

ಅದು 2007 ರ ಸಮಯ. ಆಗಷ್ಟೇ ಬಾಲಿವುಡ್​ ನಟರಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಸಮಯದಲ್ಲಿ  ಜಯಾ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ನಂದಾ ಜೊತೆಗೆ  ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಕಾಫಿ ವಿತ್ ಕರಣ್' ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಅವರು ಐಶ್ವರ್ಯಾ ರೈ ಬಗ್ಗೆ ಜಯಾ ಬಚ್ಚನ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಕಾರ್ಯಕ್ರಮದ ಸಂಭಾಷಣೆಯ ಸಮಯದಲ್ಲಿ, ಜಯಾ ಬಚ್ಚನ್ ಅವರು ಐಶ್ವರ್ಯಾ ರೈ ಅವರನ್ನು ತೀವ್ರವಾಗಿ ಹೊಗಳಿದ್ದರು ಮತ್ತು ಅವರು ಯಾವಾಗಲೂ ಐಶ್ವರ್ಯಾ ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದರು. ಐಶ್ವರ್ಯ ರೈ ತುಂಬಾ ದೊಡ್ಡ ತಾರೆ. ಆದರೆ ಬಚ್ಚನ್ ಕುಟುಂಬದಲ್ಲಿ ತುಂಬಾ ಚೆನ್ನಾಗಿ ಬೆರೆತಿದ್ದಾಳೆ ಎಂದು ಜಯಾ ಬಚ್ಚನ್ ಹೇಳಿದ್ದರು.  

ಅಷ್ಟೇ ಅಲ್ಲದೇ ಸೊಸೆಯನ್ನು ಮತ್ತಷ್ಟು ಕೊಂಡಾಡಿದ್ದ ಈ ಅತ್ತೆ, “ಅವಳು ತುಂಬಾ ಸಿಹಿಯಾಗಿದ್ದಾಳೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ಮೊದಲಿನಿಂದಲೂ ಐಶ್ವರ್ಯ ತುಂಬಾ ಇಷ್ಟ. ಅವಳು ಶಾಂತವಾಗಿದ್ದಾಳೆ ಮತ್ತು ಅಷ್ಟು ದೊಡ್ಡ ತಾರೆಯಾಗಿದ್ದರೂ, ನಾವು ಒಟ್ಟಿಗೆ ಇರುವಾಗಲೆಲ್ಲಾ ಅವಳು ಹಿಂದೆ ಉಳಿಯುತ್ತಾಳೆ ಮತ್ತು ತನ್ನತ್ತ ಗಮನ ಸೆಳೆಯಲು ಎಂದಿಗೂ ಪ್ರಯತ್ನಿಸುವುದಿಲ್ಲ. ಅವಳು ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ಕೇಳುತ್ತಾಳೆ ಮತ್ತು ಅರ್ಥಮಾಡಿಕೊಳ್ಳುತ್ತಾಳೆ. ಒಳ್ಳೆಯ ವಿಷಯವೆಂದರೆ ಅವಳು ನಮ್ಮ ಕುಟುಂಬಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ ಎಂದಿದ್ದರು. ಆಗ ಕರಣ್ ಜೋಹರ್  ಐಶ್ವರ್ಯ ಅವರು ನಿಮ್ಮ ಕೆಲವು ಜವಾಬ್ದಾರಿಗಳನ್ನು ಕಡಿಮೆಗೊಳಿಸುತ್ತಾರೆ ಎಂದು ಎನ್ನಿಸುತ್ತದೆಯೇ ಎಂದು ಪ್ರಶ್ನಿಸಿದ್ದಾಗ,  "ಅವಳು ನನ್ನ ಬಹಳಷ್ಟು ಜವಾಬ್ದಾರಿಯನ್ನು ಕಡಿಮೆ ಮಾಡುತ್ತಾಳೆ ಎಂದು ನಾನು ಭಾವಿಸುತ್ತೇನೆ ಎಂದೂ ಹೇಳಿದ್ದರು.

ವಿಚ್ಛೇದನ ಸುಲಭವಲ್ಲ... ಆದರೆ ನಿರೀಕ್ಷೆಯೇ ಹುಸಿಯಾದಾಗ.... ಐಷ್‌-ಅಭಿ ಬಿರುಕಿಗೆ ಸಾಕ್ಷಿಯಾದ ಪೋಸ್ಟ್‌?
 
ಆದರೆ ಇಂದು? ಅಂದು ಸೊಸೆಯನ್ನು ಹಾಡಿ ಹೊಗಳಿದ್ದ ಅತ್ತೆ ಜಯಾ ಬಚ್ಚನ್​ಗೆ ಇಂದು ಅದೇ ಸೊಸೆ ಬೇಡವಾಯ್ತಾ? ಸೊಸೆ ಐಶ್ವರ್ಯಾರನ್ನು ದೂರ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆಯೆ? ಹೀಗೆ ಹತ್ತಾರು ಪ್ರಶ್ನೆಗಳು ಅಮಿತಾಭ್​ ಕುಟುಂಬದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಸದ್ಯ ಬಿ ಟೌನ್​ನಲ್ಲಿ ಈ ತಾರಾ ದಂಪತಿ ಡಿವೋರ್ಸ್​ನದ್ದೇ ದೊಡ್ಡ ವಿಷಯವಾಗಿದೆ.  ಹಲವಾರು ಸಂದರ್ಭಗಳಲ್ಲಿ, ಹಲವಾರು ಘಟನೆಗಳಲ್ಲಿ ಈ ದಂಪತಿ ದೂರ ಆಗುತ್ತಿರುವ ಸೂಚನೆ ಕಾಣಿಸುತ್ತಿದೆ.  ಡಿವೋರ್ಸ್‌ ಆಗಿಯೇ ಬಿಟ್ಟರು ಎನ್ನುವ ರೀತಿಯಲ್ಲಿ ಇಬ್ಬರೂ ನಡೆದುಕೊಳ್ಳುತ್ತಿದ್ದಾರೆ. ಸುದ್ದಿಯಾಗುತ್ತಿದ್ದಂತೆಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.
 
ಇದೀಗ ಅಭಿಷೇಕ್​ ಬಚ್ಚನ್​ ಡಿವೋರ್ಸ್​ಗೆ ಸಂಬಂಧಿಸಿದ ಪೋಸ್ಟ್​ ಒಂದಕ್ಕೆ ಲೈಕ್​ ಮಾಡುವ ಮೂಲಕ ಈ ವಿಷಯ ಮತ್ತಷ್ಟು ಮುನ್ನೆಲೆಗೆ ಬರುವಂತೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ನಿರೀಕ್ಷೆ ಬರುತ್ತದೆ. ಆದರೆ ಕೆಲವು ಬಾರಿ ಜೀವನ ನಾವು ನಿರೀಕ್ಷಿಸದಂತೆ ಇರುವುದಿಲ್ಲ. ಅಷ್ಟಕ್ಕೂ ಡಿವೋರ್ಸ್ ಎನ್ನುವುದು ಸುಲಭದ ಮಾತಲ್ಲ. ಪ್ರತಿಯೊಬ್ಬಗೂ ಸಂತೋಷದ ಕನಸು ಕಾಣುತ್ತಾರೆ. ಖುಷಿಯ ಕ್ಷಣಗಳನ್ನು ಆನಂದಿಸುತ್ತಾರೆ. ಅದೇ ರೀತಿ,  ರಸ್ತೆ ದಾಟುತ್ತಿರುವಾಗ ಕೈಗಳನ್ನು ಹಿಡಿದಿರುವ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋ ನೋಡಿದಾಗ ಎಲ್ಲರ ಮನಸ್ಸೂ ಪ್ರಫುಲ್ಲವಾಗುತ್ತದೆ. ಆದರೆ ಎಲ್ಲರ ಜೀವನವೂ ಹಾಗಲ್ಲವಲ್ಲ.  ಜೊತೆಯಾಗಿಯೇ ಇದ್ದವರು ದಶಕಗಳ ನಂತರ  ಬೇರ್ಪಟ್ಟಾಗ ತಮ್ಮ ಜೀವನದ ಮಹತ್ವದ ಭಾಗ, ಕಡಿದುಕೊಳ್ಳಬೇಕಾಗುತ್ತದೆ.  ಗ್ರೇ ಡಿವೋರ್ಸ್‌ ಎನ್ನುವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ವಿವಾಹ ವಿಚ್ಚೇದನ ನೀಡುವುದಕ್ಕೆ ಸಂಬಂಧಪಟ್ಟಿದೆ ಎನ್ನುವ ಪೋಸ್ಟ್​ಗೆ ಲೈಕ್​  ಮಾಡಿದ್ದು, ದಂಪತಿ ಬಾಳಲ್ಲಿ ಬಿರುಗಾಳಿ ಬಂದಿದೆ ಎಂದೇ ಊಹಿಸಲಾಗುತ್ತಿದೆ. ಆದರೆ ಸೊಸೆಯನ್ನು ಅಷ್ಟೆಲ್ಲಾ ಹೊಗಳಿದ್ದ ಜಯಾ ಈಗ ಹೀಗೇಕೆ ಆದರು ಎನ್ನುವುದೇ ಎಲ್ಲರ ಪ್ರಶ್ನೆ. 

ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್​ ಫ್ಯಾಮಿಲಿ ಬಿಗ್​ ಸೀಕ್ರೆಟ್​: ಫ್ಯಾನ್ಸ್​ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ