ಆಟ ಆರಂಭಿಸಿದ ಕಾರ್ತಿಕ್ ಗೌಡ ಟೀಂ, ಕೇರಳದಲ್ಲಿ ಕೆಆರ್‌ಜಿ ಸ್ಟೂಡಿಯೋಸ್ ಗೇಮ್ ಪ್ಲಾನ್ ಏನು?

By Shriram BhatFirst Published Jul 18, 2024, 7:32 PM IST
Highlights

ಪಡಕ್ಕಳಂ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆಆರ್‌ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು  ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ಸಿನಿಮಾವೊಂದು ಕೆಆರ್‌ಜಿ ಸ್ಟೂಡಿಯೋಸ್ ಮೂಲಕ..

ಸಾಕಷ್ಟು ಸಮಯದಿಂದ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಕೆಆರ್‌ಜಿ ಸ್ಟೂಡಿಯೋಸ್. ಇದೀಗ ಮುಹೂರ್ತದ ಮೂಲಕ ಚೊಚ್ಚಲ ಮಲಯಾಳಂ ಚಿತ್ರ 'ಪಡಕ್ಕಳಂ'ಗೆ ಚಾಲನೆ ನೀಡಿದೆ ಕೆಆರ್‌ಜಿ ಸ್ಟೂಡಿಯೋಸ್. ಕೆಆರ್‌ಜಿ ಸ್ಟೂಡಿಯೋಸ್ ಮತ್ತು ಫ್ರೈಡೇ ಫಿಲಂ ಹೌಸ್ ನ ಪ್ರಥಮ ಸಹಯೋಗ ಮತ್ತು ಕೆ.ಆರ್.ಜಿ. ಬ್ಯಾನರ್‌ನ ಮೊದಲ ಮಲಯಾಳಂ ಚಿತ್ರವೂ ಆದ 'ಪಡಕ್ಕಳಂ' ಚಿತ್ರಕ್ಕೆ ಮುಹೂರ್ತದ ಮೂಲಕ ಚಾಲನೆ ಸಿಕ್ಕಿದೆ.
 
ಚಿತ್ರ ತಂಡ ಇತ್ತೀಚೆಗೆ ಕೊಚ್ಚಿಯಲ್ಲಿ ಮುಹೂರ್ತದ ಮೂಲಕ ಹಾಗೂ ಒಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಅಧಿಕೃತವಾಗಿ ಆರಂಭಿಸಿದೆ. ಪಡಕ್ಕಳಂ ಒಂದು ಹಾಸ್ಯಭರಿತ ಫ್ಯಾಂಟಸಿಯ ಚಿತ್ರವಾಗಿದ್ದು, ಚಿತ್ರವನ್ನು ಮನು ಸ್ವರಾಜ್ ನಿರ್ದೇಶಿಸುತ್ತಾರೆ. ಈ ಚಿತ್ರ ಅವರ ಮೊದಲ ಪ್ರಯತ್ನವಾಗಿದೆ. ಆದರೆ ಮೊದಲ ಪ್ರಯತ್ಬವೇ ತುಂಬಾ ಗ್ರಾಂಡ್ ಆಗಿದ್ದು ಸಖತ್ ಕುತೂಹಲ ಕೆರಳಿಸತೊಡಗಿದೆ.

ದರ್ಶನ್ ಬಗ್ಗೆ ಒಂದಿಷ್ಟು ಹೇಳಿದ ಅನು ಪ್ರಭಾಕರ್, ಇನ್ನೊಂದಿಷ್ಟು ಹೇಳಲ್ಲ ಅಂದಿದ್ಯಾಕೆ?

Latest Videos

ಪಡಕ್ಕಳಂ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆಆರ್‌ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು  ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ಸಿನಿಮಾವೊಂದು ಕೆಆರ್‌ಜಿ ಸ್ಟೂಡಿಯೋಸ್ ಮೂಲಕ ನಿರ್ಮಾಣವಾಗುವ ಹಂತದಲ್ಲಿರುವುದು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿನ ಸಂಚಲನವನ್ನು ಉಂಟು ಮಾಡಿದೆಯಂತೆ. 

ಈಗ ಪ್ಯಾನ್ ಇಂಡಿಯಾ ಟ್ರೆಂಡ್ ಎಲ್ಲಾ ಸಿನಿರಂಗದಲ್ಲೂ ಕಾಲಿಟ್ಟಿದೆ. ಅದು ಮಲಯಾಳಂ ಸಿನಿಮಾರಂಗವನ್ನು ಮಾತ್ರ ಬಿಡಲು ಅಸಾಧ್ಯ. ಲೇಟ್ ಆದರೂ ಲೇಟೆಸ್ಟ್ ಎಂಬಂತೆ, ಕೆಆರ್‌ಜಿ ಸ್ಟೂಡಿಯೋಸ್ ಈಗ ಮಲಯಾಳಂ ಚಿತ್ರರಂಗದಲ್ಲೂ ಕಾಲಿಟ್ಟು ಅಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕಾರ್ತಿಕ್ ಗೌಡ ಅವರು ಕಾಲಿಟ್ಟ ಕಡೆ ಚಿನ್ನವನ್ನೇ ಬೆಳೆಯುತ್ತಾರೆ ಎಂಬ ಮಾತು ಸ್ಯಾಂಡಲ್‌ವುಡ್ ಮೀರಿಯೂ ಚಾಲ್ತಿಯಲ್ಲಿದೆ. ಈಗ ಮಲಯಾಳಂ ಸಿನಿರಂಗದಲ್ಲೂ ಅದನ್ನು ನಿಜವಾಗಿಸಲು ಹೊರಟಿದ್ದಾರೆ ಕನ್ನಡದ ಹೆಮ್ಮೆಯ ಕಾರ್ತಿಕ್ ಗೌಡ & ಟೀಂ ಎನ್ನಬಹುದು. 

ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?

ಒಟ್ಟಿನಲ್ಲಿ, ಕೆಆರ್‌ಜಿ ಸ್ಟೂಡಿಯೋಸ್ ಹೊಸ ಹೆಜ್ಜೆ ಇಟ್ಟಿದೆ, ನಾರ್ತ್ ಹಾಗೂ ಸೌತ್ ಎಂಬ ಗಡಿಯನ್ನು ಮೀರಿ ಭಾರತೀಯ ಚಿತ್ರರಂಗ ಇಂದು ಬೆಳೆಯುತ್ತಿದೆ. ಮೊದಲೆಲ್ಲ ಬಾಲಿವುಡ್ ಬಾಗಿಲೇ ಬೇರೆ, ದಕ್ಷಿಣ ಭಾರತದ ಬಾಗಿಲೇ ಬೇರೆ ಎಂಬ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ರಾಜಮೌಳಿಯವರು ಆ ಗೆರೆಯನ್ನು ಬಾಹುಬಲಿ ಸಿನಿಮಾ ಮೂಲಕ ಅಳಿಸಿಹಾಕಿ ಮುಂಬೈನಲ್ಲೂ ತಮ್ಮ ಸಿನಿಮಾವನ್ನು ಗೆಲ್ಲಿಸಿದ್ದರು. ಬಳಿಕ ಕೆಜಿಎಫ್ ಸಹ ಆ ಸಾಧನೆಗೆ ಕೈ ಜೋಡಿಸಿದೆ. ಈಗ ಸಾಕಷ್ಟು ಸಿನಿಮಾಗಳು ಅದೇ ಹಾದಿ ಹಿಡಿಯುತ್ತಿವೆ. 

click me!