ಧರಿಸಿರೋ ತುಂಡು ಬಟ್ಟೆ ಬಿಚ್ಚುತ್ತಲೇ ಕೈಕಾಲು ಒತ್ತಲು ಆಫರ್ ಕೊಟ್ಟಿ ದ್ದಾರೆ ನಟಿ ಶೆರ್ಲಿನ್ ಚೋಪ್ರಾ:ವೈರಲ್ ವಿಡಿಯೋ ನೋಡಿ ನೆಟ್ಟಿಗರು ಏನು ಹೇಳಿದ್ರು?
ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ಬಂದಿರುವ, ದೇಹದ ಭಾಗವನ್ನು ದೊಡ್ಡದಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಎದೆಯ ಮೇಲೆಯೂ ಬಟ್ಟೆ ನಿಲ್ಲುವುದಿಲ್ಲ. ನಿಂತರೂ ಪ್ರಯೋಜನ ಇಲ್ಲ ಎನ್ನುವಂತಿರುತ್ತದೆ. ಈಕೆಗೆ ಚಿತ್ರರಂಗಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ತುಂಡುಡುಗೆ ತೊಟ್ಟು ದಿನಕ್ಕೊಂದು ರೀತಿಯಲ್ಲಿ ವಿಚಿತ್ರ ವೇಷ ಮಾಡಿಕೊಂಡು ಸದಾ ಸುದ್ದಿಯಲ್ಲಿ ಇರುತ್ತಾರೆ. ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದವರು ಬಾಲಿವುಡ್ ಹಾಟ್ ಬ್ಯೂಟಿ ಶೆರ್ಲಿನ್ ಚೋಪ್ರಾ. ಅಷ್ಟಕ್ಕೂ, ನಟಿ ಶೆರ್ಲಿನ್ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ. ಈಕೆ (Sherlyn Chopra) ಆಗಾಗ ಶಾಕಿಂಗ್ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ.
ಎದೆಯ ಪ್ರದರ್ಶನ ಮಾಡಿದರಷ್ಟೇ ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು. ದೇಹ ಪ್ರದರ್ಶನದಿಂದಲೇ ಫೇಮಸ್ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರಿಂದ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು.
ಬಿಡಿ ಬಿಡಿ ಎಂದ್ರೂ ಹುಡುಗನನ್ನು ಹಿಡಿದು ಶೆರ್ಲಿನ್ ಮಾಡ್ತಿರೋದೇನು? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!
ಇದೀಗ ನಟಿ ಮತ್ತದೇ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟ ನಟಿ, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್ ನೀಡಿದ್ದಾರೆ. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್ ಸ್ಕಿನ್ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದಾರೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗಲೆಲ್ಲವೂ ಟ್ರೋಲ್ ಬಿಟ್ಟರೆ ಇನ್ನೇನೂ ಆಗುವುದಿಲ್ಲ. ನಟಿಗೆ ಬೇಕಿರುವುದೂ ಅದೇ. ಇದಕ್ಕಾಗಿಯೇ ಈ ವೇಷ. ಕೆಲವು ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಇದೊಂದು ರೀತಿಯ ಚಟವಾಗಿದೆ. ಎಲ್ಲಿಯೂ ಅವಕಾಶ ಸಿಗದಾಗ ಸೋಷಿಯಲ್ ಮೀಡಿಯಾದಲ್ಲಿ ದೇಹ ಪ್ರದರ್ಶನ ಮಾಡಿಕೊಂಡು ಟ್ರೋಲ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿ. ಅದನ್ನೇ ಶೆರ್ಲಿನ್ ಮಾಡುತ್ತಿದ್ದಾರೆ.
ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.
ನನ್ನ ಶರೀರದ ತುಂಬೆಲ್ಲಾ ವಿಷವಿದೆ ಎಂದ ಶೆರ್ಲಿನ್! ಸತ್ತವರ ಲೆಕ್ಕ ಕೊಡಿ ಅನ್ನೋದಾ ನೆಟ್ಟಿಗರು?