ಸೊಸೆ ಐಶ್ವರ್ಯನ ರೈ ಕುರಿತು ಜಯಾ ಬಚ್ಚನ್​ ನೀಡಿದ ಹೇಳಿಕೆಗೆ ಫ್ಯಾನ್ಸ್​ ಗರಂ

By Suvarna News  |  First Published Jun 30, 2023, 11:36 AM IST

ಸೋಷಿಯಲ್ ಮೀಡಿಯಾದಲ್ಲಿ ಜಯಾ ಬಚ್ಚನ್ ಅವರ ಹಳೆಯ ವೀಡಿಯೊ ತುಂಬಾ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
 


 ಜಯಾ ಬಚ್ಚನ್ (Jaya Bachchan) ಅವರು ತಮ್ಮ ಯುಗದ ಅತ್ಯಂತ ಸುಂದರ  ಮಹಿಳೆಯಾಗಿದ್ದರು. ಅವರು ತಮ್ಮ ನಟನೆಯಿಂದ ಜನರ ಹೃದಯದಲ್ಲಿ ವಿಭಿನ್ನ ಸ್ಥಾನ ಮತ್ತು ಗುರುತನ್ನು ಸೃಷ್ಟಿಸಿದ್ದಾರೆ. ಮಿಲಿ, ಗುಡ್ಡಿ, ಅಭಿಮಾನ್ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲವನ್ನು ಸಾಬೀತುಪಡಿಸಿದ್ದಾರೆ. ಇಂದಿಗೂ ಅವರ ನಟನೆಯಲ್ಲಿ ಅದೇ ಶಕ್ತಿ ಇದೆ. ಆದರೆ ದಶಕಗಳು ಬದಲಾಗಿವೆ ಅದರೊಂದಿಗೆ ತಂತ್ರಜ್ಞಾನವೂ ಸಾಕಷ್ಟು ಬದಲಾಗಿದೆ. ಬಾಲಿವುಡ್‌ನಲ್ಲಿ ಪಾಪರಾಜಿಗಳ ಟ್ರೆಂಡ್ ಹೆಚ್ಚಾದಾಗಿನಿಂದ, ಜನರು ತುಂಬಾ ಕಟ್ಟುನಿಟ್ಟಾದ ಮತ್ತು ಶಿಸ್ತಿನ ಜಯಾ ಅವರ ಕಡೆ ನೋಡುತ್ತಿದ್ದಾರೆ. ಜಯಾ ನಟಿ ಅಷ್ಟೇ ಅಲ್ಲದೇ ರಾಜಕಾರಣಿಯೂ ಆಗಿದ್ದು, ಅವರು ತಮ್ಮ ಮನದ ಮಾತು ಹೇಳಲು ಆರಂಭಿಸಿದಾಗ ನಿರ್ಭಯವಾಗಿ ಅದನ್ನು ಮಾಡುತ್ತಾರೆ, ಜನರನ್ನು ಲೆಕ್ಕಿಸದೆ ಮನಸಿಗೆ ಬಂದಿದ್ದನ್ನು ಹೇಳುತ್ತಾರೆ. ಹೀಗಿರುವಾಗ ಜಯಾ ಬಚ್ಚನ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral) ಆಗುತ್ತಿದ್ದು, ಇದರಲ್ಲಿ ಅವರು ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ಕಂಡು ಬರುತ್ತಿದೆ. ಆದರೆ, ಈ ವಿಡಿಯೋದಲ್ಲಿ ಜಯಾ ಐಶ್ವರ್ಯಾ ಅವರನ್ನು ಹೊಗಳಿರುವ ರೀತಿ ಜನರಿಗೆ ಇಷ್ಟವಾಗುತ್ತಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನ ಜಯಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 

ವಾಸ್ತವವಾಗಿ, ಇದು ಜಯಾ ಬಚ್ಚನ್​ ಅವರ ಹಳೆಯ ವಿಡಿಯೋ.  ಅವರ ಈ ವೀಡಿಯೊ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ (Coffee with Karan) ಕಾರ್ಯಕ್ರಮದ್ದು. ಇದರಲ್ಲಿ ಜಯಾ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಮಾತನಾಡಿ,, ಐಶ್ವರ್ಯಾ ಸ್ವತಃ ದೊಡ್ಡ ತಾರೆ. ಆದರೆ ನಾವೆಲ್ಲರೂ ಒಟ್ಟಿಗೆ ಇರುವಾಗ, ಅವಳು ತನ್ನನ್ನು ತಾನೇ ಪ್ರಶಂಸಿಸಿಕೊಳ್ಳುವುದನ್ನು ನಾನು ಎಂದಿಗೂ ನೋಡಿಲ್ಲ, ನಾನು ಆ ಗುಣವನ್ನು ಪ್ರೀತಿಸುತ್ತೇನೆ. ಅವಳು ಶಾಂತ ಸ್ವಭಾವ ನಂಗಿಷ್ಟವಾಗುತ್ತದೆ. ಅವಳು ಹೇಳಿದ ಮಾತುಗಳನ್ನೆಲ್ಲಾ ಕೇಳುತ್ತಾಳೆ ಮತ್ತು ಅವಳು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾಳೆ ಮತ್ತು ಇನ್ನೊಂದು ಚೆಂದದ ವಿಷಯವೆಂದರೆ ಅವಳು ನಮ್ಮ ಕುಟುಂಬಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾಳೆ ಎಂದು ಜಯಾ ಹೇಳಿದ್ದರು. 

Tap to resize

Latest Videos

ಸೊಸೆ ಬಗ್ಗೆ ಕೀಳು ಕಮೆಂಟ್: ರೊಚ್ಚೆಗೆದ್ದ ಐಶ್ವರ್ಯಾ ಅತ್ತೆ ಜಯಾ ಬಚ್ಚನ್

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಜಯಾ ಅವರು ಐಶ್ವರ್ಯ ಅವರನ್ನು ಹೊಗಳುವ ಸಂದರ್ಭದಲ್ಲಿ ಕೆಲವೊಂದು ವೇಳೆ ಸೊಸೆಯನ್ನು ಅಗತ್ಯಬಿದ್ದರೆ ಕಂಟ್ರೋಲ್​  ಮಾಡುವುದಾಗಿಯೂ ಹೇಳಿದ್ದಾರೆ. ಇದು ನೆಟ್ಟಿಗರನ್ನು ಆಕ್ರೋಶಕ್ಕೆ ತಳ್ಳಿದೆ. ಸೋಷಿಯಲ್ ಮೀಡಿಯಾದಲ್ಲಿ ಜಯಾ ಅವರ ಈ ವಿಷಯಗಳನ್ನು ಜನ ಇಷ್ಟಪಡುತ್ತಿಲ್ಲ. ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.  ಜಯಾ ಬಚ್ಚನ್ ಅವರು ಏಕ್ತಾ ಕಪೂರ್ ಅವರ ಧಾರಾವಾಹಿಗಳ ಅತ್ತೆಯಂತೆ ಕಾಣುತ್ತಾರೆ ಎಂದಿದ್ದಾರೆ.  

ಈ ಹಿಂದೆ, ಅಮೆರಿಕದ  ಜನಪ್ರಿಯ ಷೋ ಆಗಿರುವ 'ದಿ ಬಿಗ್ ಬ್ಯಾಂಗ್ ಥಿಯರಿ'ನಲ್ಲಿ (Big Bang Theory) ಐಶ್ವರ್ಯ ರೈ ಮತ್ತು ಮಾಧುರಿ ದೀಕ್ಷಿತ್​ ಅವರ ಬಗ್ಗೆ  ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಜಯಾ ಬಚ್ಚನ್​ ಕಿಡಿ ಕಾರಿದ್ದರು. ಈ ಷೋನದಲ್ಲಿ ಶೆಲ್ಡನ್ ಕೂಪರ್ ಪಾತ್ರದಲ್ಲಿ ನಟಿಸಿರುವ ನಟ ಜಿಮ್ ಪಾರ್ಸನ್ಸ್ ಬಾಲಿವುಡ್​ ನಟಿಯರಾದ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಾಧುರಿ ದೀಕ್ಷಿತ್ ನೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಬಿಗ್ ಬ್ಯಾಂಗ್ ಥಿಯೇರಿ' ಸೀಸನ್ 2ನ ಒಂದು ದೃಶ್ಯದಲ್ಲಿ ಜಿಮ್ ಪಾರ್ಸನ್ಸ್ 'ಐಶ್ವರ್ಯಾ ರೈ ಬಡವರ ಪಾಲಿನ ಮಾಧುರಿ ದೀಕ್ಷಿತ್' ಎಂದು ಹೇಳಿದ್ದರು. ಆದರೆ  ಮಾಧುರಿ ದೀಕ್ಷಿತ್ ಕುಷ್ಠ ರೋಗವಿರುವ ವೇಶ್ಯೆ' ಎಂದು ಹೇಳಿದ್ದರು. ಇಂಥ ಹೇಳಿಕೆ ನೀಡುವವರನ್ನು ಬಚ್ಚಲು ಮನೆಗೆ ತಳ್ಳಬೇಕು ಎಂದಿದ್ದಾರೆ.  ಐಶ್ವರ್ಯಾ -ಮಾಧುರಿ ಹೋಲಿಕೆ ಮಾಡಿ ಮಾಧುರಿಯವರ  ಬಗ್ಗೆ ಅಸಭ್ಯ ಕಮೆಂಟ್ ಮಾಡಿದ ನಟ ಕುನಾಲ್ ನಾಯರ್ ಅವರನ್ನು ಮಾನಸಿಕ ಆಶ್ರಯಕ್ಕೆ ಕಳುಹಿಸಬೇಕು ಎಂದು ಜಯಾ ಬಚ್ಚನ್​ (Jaya Bachchan) ಹೇಳಿದ್ದರು.

Amitabh, Jaya Bacchan ದಾಂಪತ್ಯಕ್ಕೆ 50 ವರ್ಷ: ಬಿಗ್​-ಬಿ ಸಾವಿನ ಸಮೀಪವಿದ್ದಾಗ ಡಾನ್​ ಬಳಿ ಹೋಗಿದ್ದ ಜಯಾ!

click me!