
ನವದೆಹಲಿ(ಜೂ.29) ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಇದೀಗ 72 ಹೊರೆನ್ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಸ್ವರ್ಗದ 72 ಕನ್ಯೆಯರು ಎಂಬ ಅರ್ಥದ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ವಿವಾದಕ್ಕೆ ಕಾರಣಾಗಿದೆ. ಭಯೋತ್ಪಾದನೆಯ ಕಾರಣವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಭಯೋತ್ಪಾದಕರನ್ನಾಗಿ ಮಾಡುವ ಪ್ರಕ್ರಿಯೆ ಕುರಿತು ಈ ಚಿತ್ರದಲ್ಲಿ ಹೇಳಗಾಗಿದೆ. ಹೂರೆನ್ ಅನ್ನೋದು ಅರೆಬಿಕ್ ಪದವಾಗಿದೆ. ಸ್ವರ್ಗದ ಕನ್ಯೆಯರು ಎಂದರ್ಥವಿದೆ. ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ 72 ಹೂರೆನ್ ಪದ ಬಳಕೆ ಮಾಡತ್ತಾರೆ. ಚಿತ್ರದ ಟ್ರೈಲರ್ ಬೆನ್ನಲ್ಲೇ ವಿವಾದವೂ ಜೋರಾಗಿದೆ. ಈ ಚಿತ್ರದ ಟ್ರೈಲರ್‌ಗೆ ಚಲನಚಿತ್ರ ಪ್ರಮಾಣೀಕರಣ ಕೇಂದ್ರ ಮಂಡಳಿ ಅನುಮತಿ ನಿರಾಕರಿಸಿತ್ತು ಅನ್ನೋ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಚಲನಚಿತ್ರ ಪ್ರಮಾಣೀಕರಣ ಕೇಂದ್ರ ಮಂಡಳಿ, ಕೆಲ ಮಾಧ್ಯಮದಲ್ಲಿ ಹೂರೇನ್) ಶೀರ್ಷಿಕೆಯ ಸಿನಿಮಾ ಮತ್ತು ಅದರ ಟ್ರೈಲರ್ ಗೆ ಚಲನಚಿತ್ರ ಪ್ರಮಾಣೀಕರಣ ಕೇಂದ್ರ ಮಂಡಳಿ(CBFC) ಪ್ರಮಾಣೀಕರಣ ನೀಡಲು ನಿರಾಕರಿಸಲಾಗಿದೆ ಅನ್ನೋ ವರದಿ ಬಂದಿದೆ. ಆದರೆ ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದೆ.
ಮಾಧ್ಯಮಗಳ ವರದಿಗೆ ವ್ಯತಿರಿಕ್ತವಾಗಿ, 'ಬಹತ್ತರ್ ಹೂರೇನ್ (72 ಹೂರೇನ್)' ಚಿತ್ರಕ್ಕೆ 'ಎ' ಪ್ರಮಾಣೀಕರಣವನ್ನು ನೀಡಿ 4-10-2019 ರಂದು ಪ್ರಮಾಣಪತ್ರವನ್ನು ಹೊರಡಿಸಲಾಗಿತ್ತು. ಚಿತ್ರದ ಟ್ರೈಲರ್ ಬಿಡುಗಡೆಗೆ ಅನುಮತಿ ಕೋರಿ 19-6-2023ರಂದು ಸಿಬಿಎಫ್ ಸಿಗೆ ಚಿತ್ರತಂಡ ಮನವಿ ಸಲ್ಲಿಸಿದ್ದು ಸಿನಿಮಾಟೊಗ್ರಾಫ್ ಕಾಯ್ದೆ 1952ರ ಸೆಕ್ಷನ್ 5ಬಿ(2)ಅಡಿಯಲ್ಲಿ ಹೊರಡಿಸಿರುವ ಮಾರ್ಗಸೂಚಿಯಂತೆ ಪರಿಶೀಲಿಸಲಾಗಿದೆ. ಚಿತ್ರದ ಟ್ರೈಲರ್ ಬಿಡುಗಡೆದೆ ಕಾನೂನು ಪ್ರಕಾರವಾಗಿ ಅನುಮತಿ ನೀಡಲಾಗಿದೆ. ಎಲ್ಲಾ ಮಾಹಿತಿಗಳ ಪರಿಶೀಲಿಸಿ ಅನುಮತಿ ನೀಡಲಾಗಿದೆ ಎಂದು ಮಂಡಳಿ ಹೇಳಿದೆ.
72 Hooren: ಭಯೋತ್ಪಾದನೆ ಹಿಂದಿರೋದು ಈ 72 ಕನ್ಯೆಯರು! ಕೇರಳ ಸ್ಟೋರಿ ಬಳಿಕ ಹಲ್ಚಲ್ ಸೃಷ್ಟಿಸಿದ ಟೀಸರ್
"ಅರ್ಜಿದಾರರಿಗೆ ಮಾಹಿತಿಯ ಅಡಿಯಲ್ಲಿ ಅಗತ್ಯ ಸಾಕ್ಷ್ಯಚಿತ್ರ ಸಲ್ಲಿಕೆಗಳನ್ನು ಕೇಳಿ ಅದನ್ನು ಸ್ವೀಕರಿಸಿದ ನಂತರ, ಮಾರ್ಪಾಡುಗಳಿಗೆ ಒಳಪಟ್ಟು ಪ್ರಮಾಣೀಕರಣವನ್ನು ನೀಡಲಾಗಿದೆ. ಮಾರ್ಪಾಡುಗಳ ಬಗ್ಗೆ ಶೋಕಾಸ್ ನೋಟಿಸ್ ನ್ನು 27-6-2023 ರಂದು ಅರ್ಜಿದಾರರಿಗೆ ಅಂದರೆ ಚಲನಚಿತ್ರ ನಿರ್ಮಾಪಕರಿಗೆ ನೀಡಲಾಗಿದೆ. ಅರ್ಜಿದಾರರಿಂದ ಪ್ರತಿಕ್ರಿಯೆ/ಅನುಸರಣೆ ಸಿಗಲು ಬಾಕಿಯಿದೆ" ಎಂದು ಸಿಬಿಎಫ್ ಸಿ ಹೇಳಿದೆ.
ವಿಷಯ ಪ್ರಕ್ರಿಯೆ ಹಂತದಲ್ಲಿರುವುದರಿಂದ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ತಪ್ಪು ಸುಳ್ಳು ವರದಿಗಳನ್ನು ಸಿಬಿಎಫ್ ಸಿ ಒಪ್ಪುವುದಿಲ್ಲ ಮತ್ತು ಇನ್ನು ಮುಂದೆ ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ಮಂಡಳಿಯು ಒತ್ತಾಯಿಸುತ್ತದೆ.
72 ಸ್ವರ್ಗ ಕನ್ಯೆಯರಿಗೆ ಭಯೋತ್ಪಾದನೆಗೂ ಏನು ಸಂಬಂಧ, ಈ ಪದವನ್ನು ಯಾಕೆ ಬಳಸಲಾಗುತ್ತದೆ. ಜಿಹಾದ್ ಹೆಸರಿನಲ್ಲಿ ಯುವಕರನ್ನು ಪ್ರಚೋದಿಸಿ, ಅವರ ಮನಪರಿವರ್ತಿಸುವ ಪ್ರತಿ ಹಂತವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ದಿ ಕೇರಳ ಸ್ಟೋರಿ ಚಿತ್ರಕ್ಕೆ ಎದುರಾದ ವಿರೋಧಗಳು ಈ ಚಿತ್ರಕ್ಕೂ ಎದುರಾಗಿದೆ. ಚಿತ್ರದ ಟ್ರೈಲರ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
72 HOOREN: ಮುಂಬೈ ಸ್ಯೂಸೈಡ್ ಬಾಂಬರ್ಸ್ಗೆ ಸಿಕ್ಕರಾ ಆ 72 ಕನ್ಯೆಯರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.