ಕಂಗನಾ ರಣಾವತ್ ಮತ್ತು ಜಯಾ ಬಚ್ಚನ್ ಇಬ್ಬರೂ ಮುಖಾಮುಖಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಗನಾರನ್ನು ಮಾತನಾಡಸದೆ ಮುಂದೆ ಸಾಗಿದ ಜಯಾ ಬಚ್ಚನ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಕಂಗನಾ ಬಾಲಿವುಡ್‌ನ ಅನೇಕ ಮಂದಿಯ ವಿರೋಧ ಕಟ್ಟಿಕೊಂಡಿದ್ದಾರೆ. ಬಾಲಿವುಡ್‌ನ ಅನೇಕ ಸ್ಟಾರ್‌ಗಳ ವಿರುದ್ಧ ಕಂಗನಾ ಹರಿಹಾಯ್ದಿದ್ದರು. ಸುಶಾಂತ್ ಸಿಂಗ್ ಸಾವಿನ ಬಳಿಕ ಕಂಗನಾ ಬಾಲಿವುಡ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಅಲ್ಲದೇ ಬಾಲಿವುಡ್ ಅನ್ನು ಮಾಫಿಯಾ, ಮೋರಿ ಎಂದು ಜರಿದಿದ್ದರು. ಕಂಗನಾ ಮಾತಿಗೆ ನಟಿ ಜಯಾ ಬಚ್ಚನ್ ಕಿಡಿಕಾರಿದ್ದರು. ಜಯಾ ಬಚ್ಚನ್ ಮಾತಿಗೂ ಕಂಗನಾ ಸರಿಯಾಗಿ ತಿರುಗೇಟು ನೀಡಿದ್ದರು. ಈ ಎಲ್ಲಾ ಘಟನೆ ಬಳಿಕ ಕಂಗನಾ ಮತ್ತು ಜಯಾ ಬಚ್ಚನ್ ಇಬ್ಬರೂ ಮುಖಾಮುಖಿ ಆಗಿರಲಿಲ್ಲ. ಆದರೀಗ ಕಂಗನಾ ಮುಂದೆ ಬಂದ ಜಯಾ ಬಚ್ಚನ್ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೊಮನ್ ಇರಾನಿ ಸೇರಿದಂತೆ ಅನೇರ ಸ್ಟಾರ್ ಕಲಾವಿದರು ನಟಿಸಿರುವ ಊಂಚೈ ಸಿನಿಮಾದ ವಿಶೇಷ ಸ್ಟ್ರೀನಿಂಗ್ ಆಯೋಜಿಸಲಾಗಿತ್ತು. ಸ್ಪೆಷಲ್ ಸ್ಕ್ರೀನಿಂಗ್‌ಗೆ ಅನೇಕ ಸ್ಟಾರ್ ಕಲಾವಿದರು ಹಾಜರಾಗಿದ್ದರು. ವಿಶೇಷ ಎಂದರೆ ನಟಿ ಕಂಗನಾ ರಣಾವತ್ ಕೂಡ ಹಾಜರಾಗಿದ್ದರು. ಸಾಮಾನ್ಯವಾಗಿ ಕಂಗನಾ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಆದರೆ ಊಂಚೈ ವಿಶೇಷ ಶೋಗೆ ಎಂಟ್ರಿ ಕೊಟ್ಟಿದ್ದರು. ಶೋನಲ್ಲಿ ಕಂಗನಾ ಹಿರಿಯ ನಟ ಅನುಮಪಾ ಖೇರ್ ಜೊತೆ ಮಾತನಾಡುತ್ತಿದ್ದರು. ಆಗ ಜಯಾ ಬಚ್ಚನ್ ಬಂದರು. ಪಕ್ಕದಲ್ಲಿ ನಿಂತಿದ್ದ ಕಂಗನಾರನ್ನು ನೋಡಿದರೂ ಜಯಾ ಬಚ್ಚನ್ ಹಾಗೆ ಮುಂದೆ ಬಂದರು. ಬಳಿಕ ಅನುಪಮ್ ಖೇರ್ ಅವರನ್ನು ಮಾತನಾಡಿದರು. ಕಂಗನಾ ಇದ್ದಾರೆ ಮಾತನಾಡಿಸಿ ಎಂದು ಅನುಪಮ್ ಖೇರ್ ಹೇಳದರು. ಆದರೆ ಜಯಾ ಬಚ್ಚನ್ ನೋ ಎಂದು ಹೇಳಿದರು. ಅನುಪಮ್ ಖೇರ್ ಎಷ್ಟೇ ಹೇಳಿದರೂ ಜಯಾ ಬಚ್ಚನ್ ಮಾತನಾಡಲ್ಲ ಎಂದು ಹೊರಟು ಹೋದರು.
'ಕಾಂತಾರ' ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ; ನಟಿ ಕಂಗನಾ ರಣಾವತ್ ಒತ್ತಾಯ
ಜಯಾ ನಡೆದುಕೊಂಡ ರೀತಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರೂ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾಮೆಂಟ್ ಮಾಡಿ ಜಯಾ ಬಚ್ಚನ್ ಕಾಲೆಳೆಯುತ್ತಿದ್ದಾರೆ. ನೆಟ್ಟಿಗರೊಬ್ಬರು, 'ಕಂಗನಾ ನೋಡಿ ನಡುಗಿದ ಜಯಾ ಬಚ್ಚನ್ ಅಲ್ಲಿಂದ ಕಾಲ್ಕಿತ್ತರು' ಎಂದು ಹೇಳಿದ್ದಾರೆ. ಜಯಾ ಬಚ್ಚನ್ ಕಂಗನಾರನ್ನು ನಿರ್ಲಕ್ಷ ಮಾಡಿದರು ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಕಂಗನಾ ಎಷ್ಟೇ ಮಾತನಾಡಿದ್ರೂ ಅವವರ ಆಕ್ರೋಶ ಯಾವಾಗಲು ಬೆದರಿಕೆ ನೀಡುವವರ ವಿರುದ್ಧ ಮಾತ್ರ. ಪಾಪರಾಜಿಗಳ ಮುಂದೆ ಅವರ ನಡವಳಿಕೆ ತುಂಬಾ ಇಷ್ಟವಾಗುತ್ತಿದೆ' ಎಂದು ಕಂಗನಾರನ್ನು ಹಾಡಿಹೊಗಳಿದ್ದಾರೆ. ಇನ್ನೋರ್ವ ಕಾಮೆಂಟ್ ಮಾಡಿ, ಕಂಗನಾ ರಣಾವತ್ ಅವರು ನಗುತ್ತಲೆ ಜಯಾ ಬಚ್ಚನ್ ಅವರನ್ನು ಸ್ವಾಗತ ಮಾಡಿದರೂ. ಆದರೆ ಅವರೇ ಓಡಿಹೋಗಿದರು' ಎಂದು ಹೇಳಿದ್ದಾರೆ.
ಮದುವೆಗೆ ಮುನ್ನ ಜಯಾ ಬಚ್ಚನ್ ಅವರಿಗೆ ಅಮಿತಾಬ್ ಈ ಷರತ್ತುಗಳನ್ನು ಹಾಕಿದ್ದರಂತೆ!
ಇನ್ನೂ ಊಂಚೈ ಸಿನಿಮಾ ಬಗ್ಗೆ ಹೇಳುವುದಾದರೆ ಸೂರಜ್ ಬರ್ಜಾಟ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ನವೆಂಬರು 11ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.