ಉಡುಪಿ: ಕಾಪು ಮಾರಿಯಮ್ಮನ ಆಶೀರ್ವಾದ ಪಡೆದ ಬಹುಭಾಷಾ ನಟಿ ಜಯಪ್ರದಾ

By Girish Goudar  |  First Published Nov 9, 2022, 11:32 PM IST

ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಜಯಪ್ರದಾ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಹಿಂದೆಯೂ ಜಯಪ್ರದಾ ಉಡುಪಿ ಜಿಲ್ಲೆಯ ಅನೇಕ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು.


ಉಡುಪಿ(ನ.09): ಬಹುಭಾಷಾ ನಟಿ ಜಯಪ್ರದಾ ಉಡುಪಿ ಜಿಲ್ಲೆಯ ಕಾಪುವಿಗೆ ಇಂದು(ಬುಧವಾರ) ಭೇಟಿ ನೀಡಿ ಕಾಪು ಮಾರಿಯಮ್ಮನ ದೇವಿಯ ಆಶೀರ್ವಾದ ಪಡೆದಿದ್ದಾರೆ. 

ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ನಟಿ ಜಯಪ್ರದಾ, ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್, ಡಾ.ವಿಷ್ಣುವರ್ಧನ್ ಜೊತೆಗೂ ನಾಯಕಿಯಾಗಿ ನಟಿಸಿ ಕನ್ನಡ ನಾಡಿನಲ್ಲಿ ಮನೆಮಾತಾಗಿದ್ದರು.

Tap to resize

Latest Videos

undefined

ಗೃಹಭಂಗದ ಕಂಟಿ ಜೋಯಿಸ್ ಪಾತ್ರಕ್ಕೆ ಜೀವ ತುಂಬಿದ್ದ ಲೋಹಿತಾಶ್ವ..!

ತುಳುನಾಡಿನ ಜನರು ಅತಿಯಾಗಿ ವಿಶ್ವಾಸವಿಟ್ಟ ಮಾರಿಗುಡಿ ಸದ್ಯ ಬಹುಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಜಯಪ್ರದಾ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಹಿಂದೆಯೂ ಜಯಪ್ರದಾ ಉಡುಪಿ ಜಿಲ್ಲೆಯ ಅನೇಕ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು.

ಇತ್ತೀಚೆಗಷ್ಟೇ ಹಳೆ ಮಾರಿಗುಡಿಯಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡಪಾಣಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಇದೇ ವೇಳೆ ಗುಡ್ಡಪಾಣಾರ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. 
ನಟಿ ಜಯಪ್ರದಾ ಅವರಿಗೂ ದೇವಸ್ಥಾನದ ಆಡಳಿತ ಮಂಡಳಿಯವರು ಗೌರವ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಪ್ರಸಾದ ನೀಡಿ ಗೌರವಿಸಿದರು. 
 

click me!