ಜಯಾ ಬಚ್ಚನ್​@76: ಪತಿ ಅಮಿತಾಭ್ ಬಚ್ಚನ್​​-ರೇಖಾ ಸಂಬಂಧದ ಕುರಿತು ನಟಿ ಹೇಳಿದ್ದೇನು?

By Suvarna News  |  First Published Apr 9, 2024, 5:03 PM IST

ಇಂದು ನಟಿ ಜಯಾ ಬಚ್ಚನ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅಮಿತಾಭ್​ ಮತ್ತು ರೇಖಾ ನಡುವಿನ ಪ್ರೇಮ ಪ್ರಕರಣದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 


ಬಾಲಿವುಡ್‌ನ ನಿತ್ಯಹರಿದ್ವರ್ಣ ಸುಂದರಿ, ರೇಖಾ ಅವರಿಗೆ ಈಗ 69 ವರ್ಷ. ವಯಸ್ಸು ಇಷ್ಟಾದರೂ ಇಂದಿಗೂ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ ರೇಖಾ. ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ (Amithabh Bhacchan) ಮತ್ತು ಒಂದು ಕಾಲದಲ್ಲಿ ಬಾಲಿವುಡ್​ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.  ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. 70 ರ ದಶಕದಲ್ಲಿ, ಅಮಿತಾಭ್​ ಬಚ್ಚನ್ ಮತ್ತು ರೇಖಾ ಅವರ   ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು.  ಇದು ಕೇವಲ ಗಾಸಿಪ್​  ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು ಎನ್ನಲಾಗಿದೆ. ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್​ ಬಚ್ಚನ್​ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದ ಸುದ್ದಿ ಇಂದಿಗೂ ಚರ್ಚಿತ ವಿಷಯವೇ. 

ಇದೀಗ ಅಮಿತಾಭ್​ ಅವರು ಜಯಾ ಹಾಗೂ ಕುಟುಂಬದ ಸದಸ್ಯರ ಜೊತೆ ಸುಂದರವಾದ ಸಂಸಾರ ನಡೆಸುತ್ತಿದ್ದಾರೆ. ಇವರ ಸೊಸೆ ಐಶ್ವರ್ಯ ಕುರಿತು ಆಗಾಗ್ಗೆ ಸುದ್ದಿಗಳು ಹರಡುತ್ತಿವೆಯಾದರೂ, ಅಮಿತಾಭ್ ಮತ್ತು ಜಯಾ ಮಾತ್ರ ಅನ್ಯೋನ್ಯವಾಗಿದ್ದಾರೆ. ಇಂದು ಅಂದರೆ ಏಪ್ರಿಲ್​ 9 ಜಯಾ ಬಚ್ಚನ್​ ಅವರಿಗೆ 76ನೇ ಹುಟ್ಟುಹಬ್ಬದ ಸಂಭ್ರಮ. ಹಲವಾರು ಗಣ್ಯರು ನಟಿಗೆ ಶುಭಾಶಯಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ. ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೆ ರೇಖಾ ವಿಷಯ ಚರ್ಚೆಗೆ ಬಂದಿದೆ. ಹಿಂದೊಮ್ಮೆ ಜಯಾ ಬಚ್ಚನ್​ ಅವರು, ರೇಖಾ ಮತ್ತು ತಮ್ಮ ಪತಿ ಅಮಿತಾಭ್​ ಕುರಿತು ಹೇಳಿದ್ದ ಮಾತುಗಳಿವು.ಇಡೀ ಚಿತ್ರೋದ್ಯಮ ಹಾಗೂ ಸಿನಿ ಪ್ರಿಯರ ಬಾಯಲ್ಲಿ ಅಮಿತಾಭ್​ ಮತ್ತು ರೇಖಾ ಪ್ರೀತಿ ಬಹಿರಂಗಗೊಂಡಿತ್ತು. ಒಂದು ಹಂತದಲ್ಲಿ ಜಯಾ ಅವರೂ ರೇಖಾ ಜೊತೆ ಜಗಳವಾಡಿದ್ದರು ಹಾಗೂ ದಂಪತಿ ನಡುವೆ ಇದೇ ವಿಷಯವಾಗಿ ಭಾರಿ ಗಲಾಟೆ ನಡೆದಿತ್ತು ಎಂದೂ ಹೇಳಲಾಗುತ್ತಿದೆ. ಆದರೆ ಪೀಪಲ್ಸ್​ ಮ್ಯಾಗಜೀನ್​ಗೆ ಸಂದರ್ಶನ ನೀಡಿದ್ದ ಜಯಾ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತಿ ಅಮಿತಾಭ್​ ಮತ್ತು ರೇಖಾ ಜೊತೆಗಿನ ವಿಷಯ ಬಹಳ ಗುಲ್ಲು ಹಬ್ಬಿದ್ದು ನಿಜ. ಆದರೆ ಸೆಲೆಬ್ರಿಟಿಗಳು ಎಂದರೆ ಇಂಥ ಸುದ್ದಿಗಳು ಮಾಮೂಲೇ. ಒಂದು ವೇಳೆ ಈ ವಿಷಯ ನಿಜವೇ ಆಗಿದ್ದರೆ ಅಮಿತಾಭ್​ ನನ್ನೊಟ್ಟಿಗೆ ಇರುತ್ತಿರಲಿಲ್ಲವಲ್ಲ ಎಂದು ಹೇಳುವ ಮೂಲಕ ಈ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ. ಅಮಿತಾಭ್​ ಅವರ ಹೆಸರು ಬಹುತೇಕ ಅವರು ನಟಿಸಿರುವ ಎಲ್ಲಾ ನಟಿಯರ ಜೊತೆ ಥಳಕು ಹಾಕಿಕೊಂಡಿದೆ. ಹಾಗೆಂದು ಎಲ್ಲರ ಜೊತೆ ಅವರಿಗೆ ಸಂಬಂಧ ಕಟ್ಟಲು ಸಾಧ್ಯವೆ ಎಂದು ಪ್ರಶ್ನಿಸಿರುವ ಜಯಾ ಬಚ್ಚನ್​, ಒಂದು ವೇಳೆ ಇಂಥ ಸುದ್ದಿಗಳಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳುತ್ತಾ ಇದ್ದರೆ, ನನ್ನ ಬದುಕು ನರಕವಾಗುತ್ತಿತ್ತು. ಇಂಥ ಗಾಸಿಪ್​ಗಳಿಗೆ ನಾನು ಯಾವತ್ತೂ ಕಿವಿ ಕೊಟ್ಟವಳೇ ಅಲ್ಲ ಎಂದಿದ್ದಾರೆ. 

Tap to resize

Latest Videos

Rekha Birthday: ಅಮಿತಾಭ್​ ಕೈಕೊಟ್ಟು, ಪತಿಯ ಸಾವಿನ ಬಳಿಕ ಮತ್ತೊಂದು ಮದ್ವೆ ಆಸೆ ಬಿಚ್ಚಿದ್ದರು ರೇಖಾ!

 

ಕೆಲ ತಿಂಗಳ ಹಿಂದಷ್ಟೇ ಅಮಿತಾಭ್​ ಅವರು ರೇಖಾ ಅವರ ಫೋಟೋ ಶೇರ್​ ಮಾಡಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಇದು ಹಳೆಯ ಫೋಟೋ ಆಗಿದ್ದು, ಅಮಿತಾಭ್ ತಮ್ಮ ಕೈಯಲ್ಲಿ ಮೈಕ್‌ ಹಿಡಿದುಕೊಂಡು ಜನರತ್ತ ಕೈ ಬೀಸುತ್ತಾರೆ. ರಾಜ್ ಕಪೂರ್ ಅವರ ಪಕ್ಕದಲ್ಲಿ ಮತ್ತು ರೇಖಾ ಮತ್ತು ಶಮ್ಮಿ ಕಪೂರ್ ಸ್ವಲ್ಪ ದೂರದಲ್ಲಿ ನಿಂತಿದ್ದಾರೆ, ಜೊತೆಗೆ ಚಿತ್ರರಂಗದ ಇತರ ಸದಸ್ಯರು ಫೋಟೋದಲ್ಲಿದ್ದರು. ಅಷ್ಟಕ್ಕೂ ಅವರು ಈ ಫೋಟೋ ಶೇರ್​ ಏಕೆ ಮಾಡಿದರು ಎನ್ನುವುದು ಇಂದಿಗೂ ಸಸ್ಪೆನ್ಸ್ ಆಗಿಯೇ ಉಳಿದಿದೆ. 

ಶಾರುಖ್​ ಪುತ್ರ ಆರ್ಯನ್​ ಜೊತೆ ಐಶ್ವರ್ಯ ಪುತ್ರಿ ಆರಾಧ್ಯ ಮದ್ವೆ: ವೈರಲ್​​ ವಿಡಿಯೋ ನೋಡಿ ಫ್ಯಾನ್ಸ್ ಶಾಕ್​!

ಇನ್ನು ರೇಖಾ ಅವರ ವಿಷಯಕ್ಕೆ ಬರುವುದಾದರೆ, ಅಮಿತಾಭ್​ ಅವರ ಕುರಿತು ನೋವಿನಲ್ಲಿದ್ದ ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.  ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು. ಆಘಾತಕಾರಿ ವಿಷಯವೆಂದರೆ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದರು. ಇದು ಕೂಡ ಇಂದಿಗೂ ಚರ್ಚಿತ ವಿಷಯವೇ ಆಗಿದೆ. 

 

click me!