ಕಿಯಾರಾ ಅಡ್ವಾಣಿ ಈ ದೃಶ್ಯದಿಂದ ಸೆಕ್ಸ್‌ ಟಾಯ್ಸ್ ಮಾರಾಟ ಶೇ.50 ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ ಮಿಶ್ರಾ

By Suvarna News  |  First Published Apr 8, 2024, 8:56 PM IST

ನಟಿ ಕಿಯಾರಾ ಅಡ್ವಾಣಿ ಅವರ ಲಸ್ಟ್‌ ಸ್ಟೋರೀಸ್‌ ಸಿನಿಮಾದ ಒಂದೇ ಒಂದು ದೃಶ್ಯದಿಂದ ದೇಶದಲ್ಲಿ ಬರೋಬ್ಬರಿ ಸೆಕ್ಸ್‌ ಟಾಯ್ಸ್‌ ಮಾರಾಟದಲ್ಲಿ ಬರೋಬ್ಬರಿ ಶೇ.50ರಷ್ಟು ಹೆಚ್ಚಳವಾಗಿತ್ತು.


ನವದೆಹಲಿ (ಏ.08): ದೇಶದಲ್ಲಿ 2018ರ ನೆಟ್‌ಫ್ಲಿಕ್ಸ್ ಚಿತ್ರ 'ಲಸ್ಟ್ ಸ್ಟೋರೀಸ್'‌ನಲ್ಲಿ ಕಿಯಾರಾ ಅಡ್ವಾಣಿಯ ಆರ್ಗ್ಯಾಸಂ ಸೀನೊಂದು ಬಹಳ ಸದ್ದು ಮಾಡಿತ್ತು. ಆದರೆ, ಈ ಪಾತ್ರದಿಂದಾಗಿ ಸೆಕ್ಸ್‌ ಟಾಯ್ಸ್ ಮಾರಾಟ ಪ್ರಮಾಣದಲ್ಲಿ ಶೇ.50ರಷ್ಟು ಹೆಚ್ಚಾಗಿತ್ತು ಎಂದು ಕರಣ್ ಜೋಹರ್ ಒಡೆತನದ 'ಧರ್ಮ ಪ್ರೊಡಕ್ಷನ್ಸ್'ನ ಮುಖ್ಯಸ್ಥ ಸೋಮನ್ ಮಿಶ್ರಾ ಹೇಳಿದ್ದಾರೆ.

ಲಸ್ಟ್‌ ಸ್ಟೋರೀಸ್‌ನಲ್ಲಿ ನಟನೆ ಮಾಡಿದ ನಂತರ ನಟಿ ಕಿಯಾರಾ ಅಡ್ವಾಣಿ (Kiara Advani) ಅವರಿಗೆ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಬಂದಿದೆ. ಇನ್ನು ಅನೇಕ ಬ್ರ್ಯಾಂಡ್‌ಗಳು ಕೂಡ ತಮ್ಮ ವಸ್ತುವಿನ ಮಾರಾಟ ಹೆಚ್ಚಿಸಿಕೊಳ್ಳಲು ಅವರೊಂದಿಗೆ ಜಾಹೀರಾತು ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ, ಕಿಯಾರಾ ಹಲವು ಬ್ರ್ಯಾಂಡ್‌ಗಳ ಪ್ರಚಾರವನ್ನು ಮಾಡುತ್ತಾರೆ. ಆದರೆ, ಕಿಯಾರಾ ಅಡ್ವಾಣಿ ಪ್ರಚಾರ ಮಾಡದಿದ್ದರೂ ಒಂದು ಪ್ರಾಡಕ್ಟ್‌ ಮಾತ್ರ ಮಾರಾಟದಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿತ್ತು ಎಂದು ಸೋಮನ್ ಮಿಶ್ರಾ (Somen Mishra) ಹಳೆಯ ಗುಟ್ಟಿನ ವಿಚಾರವೊಂದನ್ನು ರಟ್ಟು ಮಾಡಿದ್ದಾರೆ.  

Tap to resize

Latest Videos

'ಲಸ್ಟ್ ಸ್ಟೋರೀಸ್‌'ನ ಕಿಯಾರಾ ಪಾತ್ರಕ್ಕೆ ಕರಣ್ ಆಯ್ಕೆ ಮಾಡಿದ್ದು ಈ ನಟಿಯನ್ನು, ಮುಂದೇನಾಯ್ತು?

ಲಸ್ಟ್‌ ಸ್ಟೋರೀಸ್ (Lust Stories) ಸಿನಿಮಾದ ಬಗ್ಗೆ ಮಾತನಾಡಿದ ಸೋಮನ್ ಮಿಶ್ರಾ ಈ ಸಿನಿಮಾ ರಿಲೀಸ್ ಬಿಡುಗಡೆಯಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಸೆಕ್ಸ್‌ ಟಾಯ್ಸ್ ಮಾರಾಟದಲ್ಲಿ ಭಾರೀ ಏರಿಕೆ ಕಂಡಿತ್ತು. ಸೆಕ್ಸ್‌ ಟಾಯ್ಸ್‌ ಬಳಸಿದ್ದ ದೃಶ್ಯವನ್ನು ನಟಿಸಿದ್ದ ಕಿಯಾರಾ ಅವರ ನಟನೆಯು ಭಾರೀ ವೈರಲ್ ಆಗುವಂತೆ ಮಾಡಿತ್ತು. ಇದರಿಂದಾಗಿ ಸೆಕ್ಸ್ ಟಾಯ್ಸ್ ಮಾರಾಟದಲ್ಲಿ ಏರಿಕೆ ಕಂಡಿತ್ತು. ಈ ಲಸ್ಟ್ ಸ್ಟೋರಿ ಸಿನಿಮಾ ಬರುವುದಕ್ಕಿಂತ ಮುಂಚೆ ಮಾರಾಟ ಆಗುತ್ತಿದ್ದ ಟಾಯ್ಸ್‌ಗಿಂದ ಶೇ.50 ಪರ್ಸೆಂಟ್‌ ಹೆಚ್ಚು ಮಾರಾಟವಾಗಿದೆ. ಇನ್ನು ಗೂಗಲ್‌ನಲ್ಲಿ ಕಿಯಾರಾ ಅಡ್ವಾಣಿ ವೈಬ್ರೇಟರ್, ಕಿಯಾರಾ ಅಡ್ವಾಣಿ ಸೆಕ್ಸ್‌ ಟಾಯ್ಸ್ ಎಂದು ಹುಡುಕುವವರ ಸಂಖ್ಯೆಯೂ ಹೆಚ್ಚಾಗಿತ್ತು ಎಂದು ಸೋನಮ್‌ ತಿಳಿಸಿದ್ದಾರೆ.

ಹಲವು ಕಥೆಗಳನ್ನು ಸೇರಿಸಿ 2018ರಲ್ಲಿ 'ಲಸ್ಟ್ ಸ್ಟೋರಿಸ್' (lust Stories) ಸಿನಿಮಾ ಮಾಡಲಾಗಿತ್ತು. ಇದರಲ್ಲಿ ಲೈಂಗಿಕ ವಿಚಾರಗಳು ಹೆಚ್ಚಾಗಿದ್ದವು. ವಿಕ್ಕಿ ಕೌಶಲ್ ಹಾಗೂ ಕಿಯಾರಾ ಅಡ್ವಾಣಿ ಒಟ್ಟಾಗಿ ನಟಿಸಿದ್ದರು. ಕಿಯಾರಾ ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಈಕೆ ಸೆಕ್ಸ್ ಟಾಯ್ ಮೊರೆ ಹೋಗುತ್ತಾರೆ. ಈ ದೇಶ್ಯದಲ್ಲಿ ನಟಿಸಿದ ಕಿಯಾರಾ ಅಡ್ವಾಣಿಯ ದೇಶ್ಯಗಳು ಭಾರೀ ವೈರಲ್ ಆಗಿದ್ದವು. ಹೀಗಾಗಿ, ಸಿನಿಮಾ ಕ್ಷೇತ್ರದಲ್ಲಿ ಕಿಯಾರಾ ಅಡ್ವಾಣಿಗೆ ಲಸ್ಟ್‌ ಸ್ಟೋರಿ ಸಿನಿಮಾ ಭರ್ಜರಿ ಹೆಸರು ತಂದುಕೊಟ್ಟಿದೆ.

ಇನ್ನು ನಟಿ ಕಿಯಾರಾ ಅಡ್ವಾಣಿಗಿಂತ ಮೊದಲು ಈ ಪಾತ್ರವನ್ನು ಕೃತಿ ಸನೋನ್‌ (Kriti Sanon) ಅವರುಗೆ ಕೊಡಲಾಗಿತ್ತು. ಆದರೆ, ಈ ಚಿತ್ರದ ಸ್ಕ್ರಿಪ್ಟ್ ಹಾಗೂ ಕಥೆ ಕೇಳಿ ನನ್ನ ತಾಯಿ ಇದರಲ್ಲಿ ನಟಿಸಬೇಡ ಎಂದು ಹೇಳಿದ್ದಾರೆಂದು ತಿರಸ್ಕರಿಸಿದರು. ಈ ಬಗ್ಗೆ ಸ್ವತಃ ಕೃತಿ ಸನೋನ್ ಅವರು ಕರಣ್ ಜೋಹರ್ (Karan Johar) ನಡೆಸಿಕೊಡುವ 'ಕಾಫಿ ವಿತ್ ಕರಣ್ ಶೋ'ನಲ್ಲಿ ಹೇಳಿಕೊಂಡಿದ್ದರು.

ನಟ ಸಿದ್ಧಾರ್ಥ ಕೈ ಹಿಡಿದು ನಡೆದ ರಾಶಿ ಖನ್ನಾ ವಿರುದ್ಧ ಸಿಟ್ಟಿಗೆದ್ದ ಕಿಯರಾ ಅಭಿಮಾನಿಗಳು...!

ಮತ್ತೊಂದೆಡೆ ಕಿಯಾರಾ ಅಡ್ವಾಣಿ ಅವರಿಗೆ 'ಲಸ್ಟ್ ಸ್ಟೋರಿಸ್' ಸಾಕಷ್ಟು ಹೆಸರು ತಂದುಕೊಟ್ಟರೆ, ಬಹುತೇಕರು ಟ್ರೋಲ್ ಮಾಡಿ ಖುಷಿ ಪಟ್ಟರು. ಇದರಿಂದ ನಂತರದ ಸಿನಿಮಾಗಳನ್ನು ಅಳೆದು ತೂಗಿ ಒಪ್ಪಿಕೊಳ್ಳಲು ಮುಂದಾದರು. ನಂತರ 'ಕಬೀರ್ ಸಿಂಗ್', 'ಗುಡ್ ನ್ಯೂಸ್', 'ಶೇರ್‌ಷಾ’ ಅನೇಕ ಸಿನಿಮಾ ಮಾಡಿದ್ದಾರೆ. ಈಗ ನಟ ರಾಮ್ ಚರಣ್ (Ram Charan) ನಾಯಕನಾಗಿ ನಟಿಸುತ್ತಿರುವ 'ಗೇಮ್ ಚೇಂಜರ್' ಹಾಗೂ ಜೂನಿಯರ್ ಎನ್‌ಟಿಆರ್ (Junior NTR) ಅಭಿನಯದ 'ವಾರ್ 2' ಸಿನಿಮಾಗಳಲ್ಲಿ ಕಿಯಾರಾ ನಾಯಕಿಯಾಗಿದ್ದಾರೆ.

click me!