ಶಾರುಖ್ ಪುತ್ರ ಆರ್ಯನ್ ಖಾನ್ ಜೊತೆ ಐಶ್ವರ್ಯ ಮಗಳು ಆರಾಧ್ಯ ಮದ್ವೆ ವಿಡಿಯೋ ವೈರಲ್ ಆಗಿದೆ. ಏನಿದರ ಅಸಲಿಯತ್ತು?
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಕಿರಿಯ ಪುತ್ರ ಅಬ್ರಾಮ್ ಹಾಗೂ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ರೈ ಬಚ್ಚನ್ ಇಂಟರ್‌ನೆಟ್‌ನಲ್ಲಿ ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿದ್ದು, ಅವರ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಈ ಇಬ್ಬರೂ ಅಂಬಾನಿ ಒಡೆತನದ ಧೀರುಭಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದು, ಇತ್ತೀಚೆಗೆ ಶಾಲೆಯ ವಾರ್ಷಿಕೋತ್ಸವದ ವೇಳೆ ಇಬ್ಬರೂ ಕೂಡ ಸ್ಟೇಜ್ ಮೇಲೆ ನಾಟಕ ಪ್ರದರ್ಶನ ಮಾಡಿ ಭೇಷ್ ಎನಿಸಿಕೊಂಡಿದ್ದರು. ಆರಾಧ್ಯಾ ಬಚ್ಚನ್ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಶ್ಲಾಘನೆ ವ್ಯಕ್ತವಾಗಿತ್ತು. ಈಗ ಇದೇ ಕಾರ್ಯಕ್ರಮದಲ್ಲಿ ಆರಾಧ್ಯಾ ಬಚ್ಚನ್ ಶಾರುಖ್ ಖಾನ್ ಕಿರಿಯ ಮಗ ಅಬ್ರಾಮ್ನನ್ನು ಸ್ವಂತ ತಮ್ಮನಂತೆ ತಬ್ಬಿಕೊಂಡು ಮುದ್ದು ಮಾಡುವ ವಿಡಿಯೋ ಇದಾಗಿತ್ತು. ಕುತೂಹಲಕಾರಿಯಾಗಿ ಈ ವೀಡಿಯೋ ಅಭಿಮಾನಿಗಳಿಗೆ ಐಶ್ವರ್ಯಾ ರೈ ಹಾಗೂ ಶಾರುಖ್ ಖಾನ್ ಒಡಹುಟ್ಟಿದವರಾಗಿ ನಟಿಸಿದ್ದ ಜೋಶ್ ಸಿನಿಮಾವನ್ನು ನೆನಪು ಮಾಡಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು.
ಆದರೆ ಇದೀಗ ಶಾಕಿಂಗ್ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಆರಾಧ್ಯ ಬಚ್ಚನ್, ಶಾರುಖ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಜೊತೆ ಮದುವೆಯಾದಂತೆ ಕಾಣುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿದೆ. ಆರಾಧ್ಯಾ ಮತ್ತು ಆರ್ಯನ್ ಅವರ ಫೋಟೋಗಳನ್ನು ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಆರಾಧ್ಯ ವಧುವಾಗಿ ಕಾಣಿಸಿಕೊಂಡರೆ, ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದು, ಹಲವಾರು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ತಿಂಗಳ ಹಿಂದೆ, ನಟ ಅಭಿಷೇಕ್ ಬಚ್ಚನ್ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ್ದರು. ಆರಾಧ್ಯಳ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡಿದ್ದಕ್ಕಾಗಿ ಅಭಿಷೇಕ್ ಕೋರ್ಟ್ಗೆ ಹೋಗಿದ್ದರು. ಇದೀಗ ಮದುವೆಯ ಫೋಟೋ ವೈರಲ್ ಮಾಡಲಾಗಿದೆ.
ಐದು ವರ್ಷ ಹಿರಿಯ ಬಾರ್ ಡ್ಯಾನ್ಸರ್, ನೈಟ್ ಗರ್ಲ್ ಜೊತೆ ಆರ್ಯನ್ ಡೇಟಿಂಗ್? ಈಕೆ ಬಾಲಿವುಡ್ ಹಾಟ್ ನಟಿ!
ಹೇಳಿ ಕೇಳಿ ಇರುವ ಎಐ ಯುಗ. ಯಾರ ಫೋಟೋ ಬೇಕಾದರೂ ಸುಲಭದಲ್ಲಿ ಎಡಿಟ್ ಮಾಡಿ ಏನು ಬೇಕಾದರೂ ಮಾಡಬಹುದು. ಅದರಲ್ಲಿಯೂ ಸೆಲೆಬ್ರಿಟಿಗಳ ಫೋಟೋಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಮಜ ನೋಡುವ ವಿಕೃತ ಮನಸ್ಸುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದೇ ರೀತಿ ಆರಾಧ್ಯ ಮತ್ತು ಆರ್ಯನ್ ಮದುವೆಯಾದತೆ, ಇಬ್ಬರೂ ವಧು -ವರರಂತೆ ಕಾಣುವ ಎಡಿಟೆಡ್ ಫೋಟೋ ವೈರಲ್ ಮಾಡಲಾಗಿದೆ. ‘ಫೋಟೋ ಎಡಿಟ್ ಮಾಡಿದವರ ವಿರುದ್ಧ ಕೇಸು ದಾಖಲಿಸಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ’ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ.
ಅಷ್ಟಕ್ಕೂ ಆರ್ಯನ್ ಖಾನ್ ಗರ್ಲ್ಫ್ರೆಂಡ್ಸ್ಗಳ ವಿಷಯದಿಂದಲೇ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತಾರೆ. 59 ವರ್ಷದ ಅಪ್ಪ ಶಾರುಖ್ ಖಾನ್ ಅವರ ಹಿಂದೆಯೇ ಇಂದಿಗೂ ಹಲವು ತರುಣಿಯರು ಬೀಳುವುದು ಇದೇ ಅಂದ ಮೇಲೆ, ಇನ್ನು ಅವರ ಮಗ, 26 ವರ್ಷದ ಆರ್ಯನ್ ಬಗ್ಗೆ ಕೇಳಬೇಕೆ? ಹೇಳಿ ಕೇಳಿ ಸ್ಟಾರ್ ಕಿಡ್. ಅದರಲ್ಲಿಯೂ ಶಾರುಖ್ ಪುತ್ರ ಬೇರೆ. ಈ ಚಿಕ್ಕ ವಯಸ್ಸಿನಲ್ಲಿಯೇ ಆರ್ಯನ್ ಖಾನ್ ಹೆಸರು ಬಹಳ ನಟಿಯರ ಜೊತೆ ಕೇಳಿ ಬಂದಿದ್ದಿದೆ. ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಸೇರಿದಂತೆ ಹಲವರ ಜೊತೆ ಆರ್ಯನ್ ಖಾನ್ ಡೇಟಿಂಗ್ ವಿಷಯ ಸಕತ್ ಸದ್ದು ಮಾಡುತ್ತಲೇ ಇದೆ. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಆರ್ಯನ್ ಖಾನ್ ತಮಗಿಂತ ಐದು ವರ್ಷ ದೊಡ್ಡವರಾಗಿರುವ ಬಾರ್ ಡ್ಯಾನ್ಸರ್ ಹಾಗೂ ಬಾಲಿವುಡ್ನ ಹಾಟೆಸ್ಟ್ ತಾರೆ ಎಂದೇ ಫೇಮಸ್ ಆಗಿರೋ ನೋರಾ ಫತೇಲಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷ್ಯ ವೈರಲ್ ಆಗುತ್ತಿದೆ. ಅದೇನೆ ಇದ್ದರೂ, ಆರಾಧ್ಯ ಇನ್ನೂ 12 ವರ್ಷದ ಬಾಲಕಿ. ಈಗಲೇ ಈಕೆಯ ಇಮೇಜ್ ಈ ರೀತಿ ಹಾಳು ಮಾಡುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ಅಭಿಮಾನಿಗಳ ನಿರೀಕ್ಷೆ ಸುಳ್ಳಾಗೋಯ್ತು: ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ರಜನಿ ಪುತ್ರಿ ಐಶ್ವರ್ಯಾ- ಧನುಷ್?