ಬಾಲಿವುಡ್ ಕ್ರೆಡಿಟ್ ಕದಿಯುತ್ತಿದೆ; ಸಂಸತ್‌ನಲ್ಲಿ ಆಸ್ಕರ್ ಗೆಲುವಿನ ಚರ್ಚೆ, ಜಯಾ ಬಚ್ಚನ್ ಸಖತ್ ಟ್ರೋಲ್

By Shruthi Krishna  |  First Published Mar 15, 2023, 4:19 PM IST

ಎಲ್ಲರೂ ಭಾರತೀಯರು, ಸೌತ್ ಮತ್ತು ಬಾಲಿವುಡ್ ಎನ್ನುವುದು ಇಲ್ಲ ಎಂದು ಸಂಸತ್‌ನಲ್ಲಿ ಜಯಾ ಬಚ್ಚನ್ ಹೇಳಿಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 


ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಆಸ್ಕರ್ ಗೆದ್ದು ಬೀಗುತ್ತಿದೆ. ಈ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದೆ. ಇನ್ನೂ ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.  ಈ ಬಾರಿ ಭಾರತ ಎರಡು ಆಸ್ಕರ್ ಗೆದ್ದಿದೆ. ಈ ಗೆಲುವು ಈಗ ಸೌತ್ ಮತ್ತು ಬಾಲಿವುಡ್ ಎನ್ನುವ ಚರ್ಚೆಯನ್ನು ಮತ್ತೆ ಹುಟ್ಟಿಹಾಕಿದೆ. ಈ ಬಗ್ಗೆ ಬಾಲಿವುಡ್ ಹಿರಿಯ ನಟಿ, ರಾಜಕಾರಣಿ ಜಯಾ ಬಚ್ಚನ್ ಪಾರ್ಲಿಮೆಂಟ್ ನಲ್ಲಿ ಮಾತನಾಡಿ ಮತ್ತೆ ಸಖತ್ ಟ್ರೋಲ್ ಆಗಿದ್ದಾರೆ. 

ಹಲವಾರು ಸಂಸದರು ಆಸ್ಕರ್ 2023ರಲ್ಲಿ ಎರಡು ಪ್ರಶಸ್ತಿ ಗೆದ್ದವರಿಗೆ ಅಭಿನಂದನೆ ಸಲ್ಲಿಸಲು ಸಂಸತ್ತಿನಲ್ಲಿ ತಮ್ಮ ಅವಕಾಶ ಪಡೆದುಕೊಂಡರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡೂ ಚಿತ್ರಗಳು ದಕ್ಷಿಣ ಭಾರತಕ್ಕೆ ಸೇರಿವೆ ಎಂದು ಉಲ್ಲೇಖಿಸಿ ಎರಡೂ ಸಿನಿಮಾಗಳನ್ನು ಶ್ಲಾಘಿಸಿದರು. ಖರ್ಗೆ ಅವರ ಈ ಹೇಳಿಕೆ ಜಯಾ ಬಚ್ಚನ್ ಅವರನ್ನು ಕೆರಳಿಸಿತು. ತಕ್ಷಣ ಅವರು ಈ ಎರಡು ಸಿನಿಮಾಗಳು ಇಂಡಿಯನ್ ಸಿನಿಮಾಗಳು ಎಂದು ತಿರುಗೇಟು ನೀಡಿದರು. 

Tap to resize

Latest Videos

ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?

ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ,  ಮಲ್ಲಿಕಾರ್ಜುನ ಖರ್ಗೆ ಅವರು, 'ವಿಶೇಷವಾಗಿ ಮೊದಲ ಬಾರಿಗೆ ಇಂತಹ ಪ್ರಶಸ್ತಿಯನ್ನು  ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ನೀಡಲಾಗಿದೆ. ಹೆಚ್ಚಾಗಿ ದಕ್ಷಿಣ ಭಾರತದಿಂದ ಬಂದವರು. ಇದು ನಮಗೆ ದೊಡ್ಡ ಹೆಮ್ಮೆಯ ವಿಷಯ' ಎಂದರು. ಇದೇ ಸಮಯಕ್ಕೆ  ಎಂಡಿಎಂಕೆ ನಾಯಕ ವೈಕೊ ಅವರು ತಮ್ಮ ಭಾಷಣದಲ್ಲಿ, 'ತಮಿಳುನಾಡಿನಿಂದ ಬಂದ ಎಆರ್ ರೆಹಮಾನ್ (ಸಂಗೀತ ನಿರ್ದೇಶಕ, ಗಾಯಕ) ಭಾರತಕ್ಕಾಗಿ ಏನು ಮಾಡಿದರು ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ' ಎಂದು ಹೇಳಿದರು.

ಆಸ್ಕರ್‌ನಲ್ಲಿ ಜೂ.ಎನ್‌ಟಆರ್-ರಾಮ್ ಚರಣ್ ಯಾಕೆ ಡಾನ್ಸ್ ಮಾಡಿಲ್ಲ? ಕಾರಣ ಬಿಚ್ಚಿಟ್ಟ ಆಸ್ಕರ್ ನಿರ್ಮಾಪಕ

ಜಯಾ ಬಚ್ಚನ್ ಮಾತು 

ಜಯಾ ಬಚ್ಚನ್ ಮಾತನಾಡಿ, 'ಅವರು ಉತ್ತರ, ಪೂರ್ವ, ದಕ್ಷಿಣ ಅಥವಾ ಪಶ್ಚಿಮದವರು ಎಂಬುದು ಮುಖ್ಯವಲ್ಲ. ಅವರೆಲ್ಲರೂ ಭಾರತೀಯರು. ಈ ದೇಶವನ್ನು ಹಲವು ಬಾರಿ ಪ್ರತಿನಿಧಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ನಮ್ಮ ಚಿತ್ರರಂಗದ ಬಂಧುತ್ವದ ಬಗ್ಗೆ ನಾನು ಇಲ್ಲಿ ಹೆಮ್ಮೆ ಮತ್ತು ಗೌರವದಿಂದ ನಿಂತಿದ್ದೇನೆ. ಸಿನಿಮಾ ಮಾರುಕಟ್ಟೆ ಇಲ್ಲಿದೆ. ಇದು ಅಮೆರಿಕಾವಲ್ಲ. ಇದು ಕೇವಲ ಆರಂಭ ಅಷ್ಟೆ. ನಾನು ಭಾರತೀಯರನ್ನು ಅಭಿನಂದಿಸಲು ಬಯಸುತ್ತೇನೆ. ಪಾಶ್ಚಿಮಾತ್ಯರು ಭಾರತೀಯ ಸಿನಿಮಾಗಳನ್ನು ಗುರುತಿಸಿ ಶ್ರೇಷ್ಠ ಕೃತಿಗಳನ್ನು ಗುರುತಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. 

ಆಸ್ಕರ್ ಗೆದ್ದ ಬಳಿಕ ಹೈದರಾಬಾದ್‌ಗೆ ಬಂದಿಳಿದ ಜೂ.ಎನ್‌ಟಿಆರ್‌ಗೆ ಅದ್ದೂರಿ ಸ್ವಾಗತ; RRR ಸ್ಟಾರ್ ಹೇಳಿದ್ದೇನು?

ನೆಟ್ಟಗರ ಆಕ್ರೋಶ

ಜಯಾ ಬಚ್ಚನ್ ಮಾತು ಈಗ ಸೌತ್ ಮಂದಿಯ ಕೋಪಕ್ಕೆ ಕಾರಣವಾಗಿದೆ. ಬಾಲಿವುಡ್ ಕ್ರೆಡಿಟ್ ಕದಿಯಲು ಬಯಸುತ್ತಿದೆ ಎಂದು ಆರೋಪಸುತ್ತಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡಿ, ಬಾಲಿವುಡ್ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ದಕ್ಷಿಣ ಭಾರತದ ಸಿನಿಮಾರಂಗ ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ಹಾಗೂ ವಿಷಯದಲ್ಲೂ ಗಡಿಗಳನ್ನು ದಾಟಿ ಮುಂದಕ್ಕೆ ಹೋಗಿದೆ. ಆದರೆ ಬಾಲಿವುಡ್ ಯಾವಾಗಲೂ ದಕ್ಷಿಣದವರನ್ನು ಕೀಳಾಗಿ ನೋಡುತ್ತದೆ. ಬಾಲಿವುಡ್ ಕ್ರೆಡಿಟ್ ಕದಿಯಲು ಬಯಸುತ್ತಿದೆ. 

ಮತ್ತೋರ್ವ ಕಾಮೆಂಟ್ ಮಾಡಿ, 'ಈ ಚರ್ಚೆ ಆರ್ಥ ಹೀನವಾಗಿದೆ. ಅದೊಂದು ತೆಲುಗು ಚಿತ್ರ. ಇಂತಹ ವಿಚಾರಗಳನ್ನು ಏಕೆ ಚರ್ಚೆ ಮಾಡಬೇಕು. ಜಯಾ ಬಚ್ಚನ್ ಯಾವಾಗಲೂ ಕಿರಿಕಿರಿಯುಂಟುಮಾಡುತ್ತಾರೆ' ಎಂದು ಹೇಳಿದ್ದಾರೆ. 


 

click me!