Pawan Kalyan ಡೇಲಿ ಇಷ್ಟು ದುಡೀತಾರಾ? ಮಾತು ಕೇಳಿ ಫ್ಯಾನ್ಸ್​ ಶಾಕ್​!

By Suvarna NewsFirst Published Mar 15, 2023, 3:25 PM IST
Highlights

ಕೆಲ ತಿಂಗಳುಗಳಿಂದ ಪವನ್​ ಕಲ್ಯಾಣ್​ ವಿರುದ್ಧ ಆರೋಪ ಕೇಳಿಬರುತ್ತಿದೆ. ಅವರು ರಾಜಕೀಯಕ್ಕೆ ಬಂದುದೇ ದುಡ್ಡು ಮಾಡಲು ಎಂದು. ಹೀಗೆ ಆರೋಪಿಸುತ್ತಿರುವವರು  ಮುಟ್ಟಿನೋಡಿಕೊಳ್ಳುವಂಥ ಹೇಳಿಕೆ ನೀಡಿದ್ದಾರೆ ಪವನ್​. ಅವರು ಹೇಳಿದ್ದೇನು?
 

ದಕ್ಷಿಣ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ (Remuneration) ಪಡೆಯುವ ನಟರ ಪಟ್ಟಿಯಲ್ಲಿ ತಮಿಳು ಮತ್ತು ತೆಲುಗು  ನಟರೇ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿದ್ದರೂ, ಟಾಲಿವುಡ್​ ಮಾತ್ರವಲ್ಲ, ಯಾವುದೇ ರಂಗದ ನಟ-ನಟಿಯರು ತಾವು ಪಡೆಯುವ ಸಂಭಾವನೆಯ ಕುರಿತು ಬಹಿರಂಗವಾಗಿ ಹೇಳಿಕೊಳ್ಳುವುದೇ ಇಲ್ಲ. ಹಾಗೆ- ಹೀಗೆ ಬರುವ ಗಾಳಿಸುದ್ದಿಯನ್ನೇ ಎಲ್ಲರೂ ನಂಬುವುದು ಒಂದುಕಡೆಯಾದರೆ, ಕೆಲವು ಸಿನಿ ಕ್ಷೇತ್ರದ ನಿಪುಣರು ಹಾಗೂ-ಹೀಗೂ ಮಾಡಿ ನಟ-ನಟಿಯರು ಪಡೆಯುವ ಸಂಭಾವನೆಯ ಬಗ್ಗೆಗಿನ ಅಂಕಿಅಂಶಗಳನ್ನು ಬಹಿರಂಗಗೊಳಿಸುತ್ತಾರೆ. ಎಲ್ಲಾ ಸಮಯದಲ್ಲಿಯೂ ಇದು ಸರಿಯಾಗಿಯೇ ಇರಬೇಕೆಂದೇನೂ ಇಲ್ಲ. ಆದರೂ ಅಂದಾಜು ಇಂತಿಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಲೆಕ್ಕಾಚಾರವಿದೆ. ಚಿತ್ರವೊಂದಕ್ಕೆ  ಕನಿಷ್ಠ 2-3  ಕೋಟಿ ರೂಪಾಯಿಗಳಿಂದ ಹಿಡಿದು  ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರೂ ಇದ್ದು, ಅದರಲ್ಲಿ ತೆಲಗು ಚಿತ್ರರಂಗವೇ ನಂ.1 ಎನ್ನುವ ಮಾತಿದೆ.

 ರಜನಿಕಾಂತ್ (Rajinikanth) ಕಮಲ್ ಹಾಸನ್, ದಳಪತಿ ವಿಜಯ್, ಪವನ್ ಕಲ್ಯಾಣ್, ಚಿರಂಜೀವಿ, ಜ್ಯೂನಿಯರ್ ಎನ್.ಟಿ.ಆರ್ ಹೀಗೆ ಪ್ರಮುಖ ನಟರ ಹೆಸರು ಟಾಪೆಸ್ಟ್​ ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಕೇಳಿಬರುತ್ತದೆ.  ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ಸಂಭಾವನೆ ಪಡೀತಾರೆ,  ದಳಪತಿ ವಿಜಯ್ 100 ಕೋಟಿ ಕೇಳ್ತಾರೆ, ರಜನಿಕಾಂತ್  ಅವರ ಸಂಭಾವನೆ 100 ಕೋಟಿ ಮೀರಿದೆ... ಹೀಗೆ ಗಾಳಿಸುದ್ದಿಗಳು ಬರುತ್ತಿದ್ದರೂ ಯಾವೊಬ್ಬ ನಟ-ನಟಿಯರು ಇದುವರೆಗೆ ಬಹಿರಂಗಪಡಿಸಿದ್ದಿಲ್ಲ. ಆದರೆ ಕುತೂಹಲದ ವಿಷಯವೇನೆಂದರೆ, ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ (Pawan Kalyan) ಅಧಿಕೃತವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತೇವೆ ಮತ್ತು ಎಷ್ಟು ದಿನ ಕಾಲ್ ಶೀಟ್ (Call Sheet) ನೀಡುತ್ತೇವೆ ಎನ್ನುವ ವಿಚಾರವನ್ನು   ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಈ ವಿಷಯವಾಗಿ ಮಾತನಾಡಿದ್ದಾರೆ.  ತಮ್ಮ ಸಂಭಾವನೆ ಎಷ್ಟು ಮತ್ತು ಹೇಗೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ನಟ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಜನಸೇನಾ ಪಕ್ಷ (Jana Seva Paksha) ಸ್ಥಾಪಿಸಿ ಆಂಧ್ರ ರಾಜಕಾರಣದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತರು ಛಲ ಬಿಡದೇ ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದರೆ ಎದುರಾಳಿ ಪಕ್ಷಗಳ ನಾಯಕರು ಪದೇ ಪದೇ ಪವರ್ ಸ್ಟಾರ್‌ನ ಟೀಕೆ ಮಾಡುತ್ತಿದ್ದಾರೆ. 

Latest Videos

ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್​ ನಟಿಯರಿವರು!

ಪವನ್​ ಅವರ ಮೇಲಿರುವ ದೊಡ್ಡ ಆರೋಪ ಏನೆಂದರೆ ಅವರು, ದುಡ್ಡಿಗಾಗಿ  ರಾಜಕೀಯಕ್ಕೆ ಬಂದಿದ್ದಾರೆ. ಆ ಪಕ್ಷದಿಂದ ಇಷ್ಟು ಸಿಗುತ್ತಿದೆ, ಪ್ಯಾಕೇಜಿಗಾಗಿ ಅಭಿಮಾನಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು.  ಅಂಥವರಿಗೆ ಇದೀಗ ಪವನ್ ಉತ್ತರ ಕೊಟ್ಟಿದ್ದಾರೆ. ‘ನನಗೆ ದುಡ್ಡಿನ ಚಿಂತೆ ಇಲ್ಲ. ನಾನು ದುಡ್ಡು ಮಾಡುವುದಕ್ಕೂ ಬಂದಿಲ್ಲ. ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಒಂದು ಚಿತ್ರಕ್ಕೆ 22 ದಿನಗಳ ಕಾಲ್ ಶೀಟ್ ಕೊಡುವೆ. 44 ಕೋಟಿ ರೂಪಾಯಿ ಬರುತ್ತದೆ. ಊಟ ಮಾಡುವುದೇ ದಿನಕ್ಕೆ ಒಂದೇ ಸಲ’ ಎಂದಿದ್ದಾರೆ. ತಮ್ಮ ಭಾಷಣದಲ್ಲಿ (Speech)ಸಂಭಾವನೆಯ ವಿಚಾರವಷ್ಟೇ ಅಲ್ಲ, ತಾವು ಚಿತ್ರಕ್ಕೆ ಕೊಡುವ ಡೇಟ್ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕೋಟಿ ಕೋಟಿ ಸಂಪಾದನೆಯನ್ನು ಸಿನಿಮಾದಲ್ಲೇ ಮಾಡುತ್ತೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ನಾನ್ಯಾಕೆ ದುಡ್ಡಿಗಾಗಿ ನನ್ನನ್ನು ನಾನು ಮಾಡಿಕೊಳ್ಳಲಿ, ನಾನು ಸಿನಿಮಾ ಮಾಡಿಕೊಂಡು ಇದ್ದರೆ ಆರಾಮಾಗಿ ಇರಬಹುದು. ದಿನಕ್ಕೆ ನನ್ನ ಸಿನಿಮಾ ಸಂಭಾವನೆ 2 ಕೋಟಿ ಎಂದು ಹೇಳಿರುವುದನ್ನು ಕೇಳಿ ವಿರೋಧಿಗಳು ಎಷ್ಟರಮಟ್ಟಿಗೆ ಏನೆಂದುಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಅಭಿಮಾನಿಗಳಂತೂ (Fans) ಶಾಕ್​ ಆಗಿದ್ದಾರೆ. 'ಹಣಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ. ಅವಶ್ಯಕತೆ ಬಿದ್ದರೆ ಹಣ ಸಂಪಾದಿಸಿ ನಿಮಗೆ ಕೊಡುವಂತಹ ವ್ಯಕ್ತಿ. ಅದುಬಿಟ್ಟು ಹಣಕ್ಕಾಗಿ ಆಸೆ ಬೀಳಲ್ಲ. ನನಗೆ ಹಣದ ಅವಶ್ಯಕತೆ ಇಲ್ಲ. ಇವನ್ನು ನಾನು ಧೈರ್ಯವಾಗಿ ಹೇಳುತ್ತೇನೆ. ಈಗ ನಾನು ಮಾಡುತ್ತಿರುವ ಸಿನಿಮಾ ಚಿತ್ರೀಕರಣದಲ್ಲಿ 22 ದಿನ ಭಾಗಿ ಆಗುತ್ತಿದ್ದೇನೆ. ಆ ಚಿತ್ರಕ್ಕಾಗಿ ದಿನಕ್ಕೆ 2 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

ಹೃದಯ ಸಮಸ್ಯೆಯ ನೋವಿನ ಸಂಗತಿ ತೆರೆದಿಟ್ಟ ಪವನ್​ ಕಲ್ಯಾಣ್​ ಮಾಜಿ ಪತ್ನಿ

 ಸರ್ಕಾರಿ ಉದ್ಯೋಗಿ ಮಗ ನಾನು. ಕಷ್ಟ ನನಗೆ ಗೊತ್ತು. ಇಷ್ಟು ಸಂಪಾದಿಸುವ ತಾಕತ್ತು ಇದ್ದು ನಾನು ರಾಜಕೀಯದಲ್ಲಿ (Political)ಯಾಕೆ ಇದ್ದೀನಿ? 1964ರಿಂದ ಎಲ್ಲರೂ ಒಂದೇ ಹೇಳ್ತಿದ್ದಾರೆ. ಬದಲಾವಣೆ ಆಗಬೇಕು ಎಂದು. ಅದಕ್ಕಾಗಿ ನಾನು ಜಿಗಿದಿದ್ದೇನೆ, ನೀವು ಸೋಲಿಸಿದಿರಿ. ಆದರೆ ನನಗೆ ನೋವಿಲ್ಲ. ನಿಮ್ಮ ನಂಬಿಕೆ ಗಳಿಸುತ್ತೇನೆ" ಎಂದು ಪವನ್ ಹೇಳಿದ್ದಾರೆ. 

click me!