'ದಸರಾ'ಗಾಗಿ ಬೆಂಗಳೂರಿಗೆ ಬಂದ ತೆಲುಗು ಸ್ಟಾರ್ ನಾನಿ; ನ್ಯಾಚುರಲ್ ಸ್ಟಾರ್‌ಗೆ ಅದ್ದೂರಿ ಸ್ವಾಗತ

Published : Mar 15, 2023, 02:50 PM IST
'ದಸರಾ'ಗಾಗಿ ಬೆಂಗಳೂರಿಗೆ ಬಂದ ತೆಲುಗು ಸ್ಟಾರ್ ನಾನಿ; ನ್ಯಾಚುರಲ್ ಸ್ಟಾರ್‌ಗೆ ಅದ್ದೂರಿ ಸ್ವಾಗತ

ಸಾರಾಂಶ

ದಸರಾ ಸಿನಿಮಾ ಪ್ರಮೋಷನ್‌ಗಾಗಿ ನ್ಯಾಚುರಲ್ ಸ್ಟಾರ್ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. 

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಏರ್ಪೋರ್ಟ್‌ಗೆ ಬಂದ ನಾನಿ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಹೂ ಮಾಲೆ ಹಾಕಿ ತೆಲುಗು ಸ್ಟಾರ್‌ನನ್ನು ಅಭಿಮಾನಿಗಳು ಬರಮಾಡಿಕೊಂಡರು. ಅಂದಹಾಗೆ ನಾನಿ ದಿಢೀರ್ ಅಂತ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಉದ್ದೇಶ ದಸರಾ. ನಾನಿ ಸದ್ಯ ದಸರಾ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. 
ನ್ಯಾಚುರಲ್ ಸ್ಟಾರ್ ನಾನಿ ಮೆಗಾ ಪ್ರಾಜೆಕ್ಟ್ ದಸರಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಈಗಾಗಲೇ ಸಖತ್ ನಿರೀಕ್ಷೆ ಮೂಡಿಸಿರುವ ದಸರಾ ಸಿನಿಮಾ ಇದೇ ತಿಂಗಳು ಮಾರ್ಚ್ 30ರಂದು ತೆರೆಗೆ ಬರುತ್ತಿದೆ. ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಸಿನಿಮಾತಂಡ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ದಸರಾ ಸಿನಿಮಾಗಾಗಿ ನಾನಿ ಮತ್ತು ತಂಡ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ಅಭಿಮಾನಿಗಳನ್ನು ಸೆಳೆಯಲು ಸಿನಿಮಾತಂಡ ಪ್ರಯತ್ನ ಪಡುತ್ತಿದೆ. 

ಕೊನೆಗೂ ಕನ್ನಡಕ್ಕೆ ಜೈ ಅಂದ ನಾನಿ! ಈಗ ಕನ್ನಡಿಗರನ್ನ ಎದುರು ಹಾಕ್ಕೊಳ್ಳೋದು ಸುಲಭ ಅಲ್ಲ!

‘ದಸರಾ’ದಲ್ಲಿ ನಾನು ಸಖತ್ ರಗಡ್ ಹಾಗೂ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಧರಣಿಯಾಗಿ ನಾನಿ ಅವತಾರ ಸಖತ್ ಕಿಕ್ ನೀಡುತ್ತಿದೆ. ಟ್ರೇಲರ್ ತುಣುಕಿನಲ್ಲಿ ನಾನಿ ಮಾಸ್ ಅವತಾರ, ಸಿಂಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಮನದಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ನ್ಯಾಚುರಲ್ ಸ್ಟಾರ್ ಮೇಕ್ ಓವರ್ ರಗಡ್ ಲುಕ್, ಹಾವ ಭಾವ ಎಲ್ಲವೂ ಗಮನ ಸೆಳೆದಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಮಾಸ್ ಆಕ್ಷನ್ ಸಬ್ಜೆಕ್ಟ್ ಮೂಲಕ ತೆರೆ ಮೇಲೆ ತರ್ತಿದೆ ದಸರಾ ಸಿನಿಮಾ. 

ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ ನಾನಿ-ಕೀರ್ತಿ ಸುರೇಶ್: ಫೋಟೋ ವೈರಲ್

ಈ ಚಿತ್ರ ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್‌ನಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್, ನಾನಿಗೆ ಜೋಡಿಯಾಗಿ ನಟಿಸಿದ್ದಾರೆ. ಟೀಸರ್,ಹಾಡುಗಳ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ಇದೀಗ ರಗಡ್ ಅಂಡ್ ಮಾಸ್ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ನಟ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ನಟಿಸಿದ್ದಾರೆ. ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಅನೇಕರು ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?