
ಶಾರುಖ್ ಖಾನ್ (Shah rukh Khan) ಅಭಿನಯದ ಜವಾನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ದಶಕಗಳಿಂದ ಶಾರುಖ್ ಖಾನ್ ತಮ್ಮ ನಟನೆಯಿಂದ ಮನ ಗೆದ್ದಿದ್ದಾರೆ. ಅದೇ ಸಮಯದಲ್ಲಿ, 2023 ರಲ್ಲಿ ಪಠಾಣ್ ನೀಡಿದ ನಂತರ, ಅವರು ಅಭಿಮಾನಿಗಳಿಗೆ ಜವಾನ್ ಚಿತ್ರದೊಂದಿಗೆ ಮರಳಿದ್ದಾರೆ. ಸೆಪ್ಟೆಂಬರ್ 7 ರತ್ತ ಎಲ್ಲರ ಕಣ್ಣು ನೆಟ್ಟಿದೆ. ಇದೇ ವೇಳೆ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಅದರಲ್ಲಿ ಒಂದು ಹಾಡು ಈಗ ಭಾರಿ ಸದ್ದು ಮಾಡುತ್ತಿದೆ. ಇದಾಗಲೇ ಬಿಡುಗಡೆಯಾಗಿದ್ದ ಒಂದು ಹಾಡು ಜಿಂದಾ ಬಂದಾದಲ್ಲಿ 1000 ನರ್ತಕಿಯರು ನರ್ತಿಸಿರುವ ಸುದ್ದಿ ಹೊರಬಂದಿತ್ತು. ಮೊದಲ ಹಾಡಿನಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದು, ಅನಿರುದ್ಧ ರವಿಚಂದರ್ ವಿನ್ಯಾಸಗೊಳಿಸಿದ ಮತ್ತು ಶೋಬಿ ಅವರ ನೃತ್ಯ ಸಂಯೋಜನೆಯಲ್ಲಿ ಸಾವಿರಾರು ಹುಡುಗಿಯರು ಆಕರ್ಷಕವಾದ ಬೀಟ್‌ಗಳಿಗೆ ನೃತ್ಯ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಎರಡನೇ ಹಾಡು ಚಾಲೆಯಾ ಬಗ್ಗೆ ಕುತೂಹಲದ ಮಾಹಿತಿ ಹೊರಬಂದಿದೆ. ಅದೇನೆಂದರೆ ಇದರಲ್ಲಿ ಶಾರುಖ್ ಖಾನ್ ಬಳಸಿರುವ ಷರ್ಟ್ ಬೆಲೆ ಒಂದು ಲಕ್ಷ ರೂಪಾಯಿಗೂ ಅಧಿಕ ಎನ್ನಲಾಗಿದೆ!
ಇನ್ನೂ ಒಂದು ಕುತೂಹಲದ ವಿಚಾರ ಜವಾನ್ ಕುರಿತು ಹೊರಬಂದಿದೆ. ಅದೇನೆಂದರೆ, ಜವಾನ್ ಚಿತ್ರವು ಶಾರುಖ್ ಖಾನ್ ಅವರ ಇಲ್ಲಿಯವರೆಗಿನ ಅತಿ ದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಚಿತ್ರಕ್ಕೆ ಖರ್ಚಾಗಿರುವುದು 300 ಕೋಟಿ ರೂಪಾಯಿಗೂ ಅಧಿಕವಂತೆ! ಇಲ್ಲಿಯವರೆಗಿನ ಶಾರುಖ್ ಅವರ ಅತಿ ದೊಡ್ಡ ಬಜೆಟ್ ಚಿತ್ರ ಪಠಾಣ್ ಆಗಿತ್ತು. ಇದನ್ನು 250 ಕೋಟಿ ರೂಪಾಯಿಗಳಲ್ಲಿ ತಯಾರಾಗಿತ್ತು. ಈ ಚಿತ್ರವು ವಿಶ್ವಾದ್ಯಂತ 1000 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ. ಜವಾನ್ ಕೂಡ ಇದೇ ರೀತಿಯ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಬಾಕ್ಸ್ ಆಫೀಸ್ ಧೂಳೆಬ್ಬಿಸ್ತಿದೆ 'ಗದರ್-2': ಶಾರುಖ್ ಖಾನ್ ಚಿತ್ರ ಪಠಾಣ್ ದಾಖಲೆ ಉಡೀಸ್
ಅಂದಹಾಗೆ, ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರವು ಈ ಕ್ಷಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ‘ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್ ಇದಾಗಲೇ ಬಿಡುಗಡೆಯಾಗಿದ್ದು ಸಕತ್ ಹಿಟ್ ಆಗಿವೆ. ಶಾರುಖ್ ಅವರ ಆ್ಯಕ್ಷನ್ ಹಾಗೂ ವಿಭಿನ್ನ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸಿನಿಮಾ ಕುರಿತು ಹೊಸ ಹೊಸ ವಿಷಯಗಳು ಬರುತ್ತಲೇ ಇವೆ.
ಇದಾಗಲೇ ಈ ಸಿನಿಮಾದಲ್ಲಿ ಸುಮಾರು 6 ಹಾಡುಗಳಿವೆ ಎನ್ನುವುದು ತಿಳಿಸಿದೆ. ಜೊತೆಗೆ ಪರಾಠ ಎಂದ ಟೈಟಲ್ ಸಾಂಗ್ (Title Song) ಕೂಡ ಇದೆ ಎನ್ನಲಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರಂತೆ. ಒಂದು ನಯನತಾರಾ ಅವರ ಇಂಟ್ರೊಡಕ್ಷನ್ ಸಾಂಗ್ ಹಾಗೂ ಒಂದು ಶಾರುಖ್ ಅವರ ಗರ್ಲ್ ಗ್ಯಾಂಗ್ ಜೊತೆ ಜೈಲ್ ಸಾಂಗ್ ಇರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಈ ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್ ಸ್ಟಾರ್ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ (Preview) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
JAWAN: ನಯನತಾರಾ ಜತೆ ನಟಿಸುವಾಗ ಶಾರುಖ್ಗೆ ಅವ್ರ ಮೇಲೆ ಮನಸ್ಸಾಗಿತ್ತಾ? ನಟ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.