ಪಾಕಿಸ್ತಾನದ ನೆಲದಲ್ಲಿಯೇ ನಿಂತು ಭಯೋತ್ಪಾದನೆ ವಿರುದ್ಧ ಗುಡುಗಿದ ಗೀತರಚನೆಕಾರ ಜಾವೇದ್ ಅಖ್ತರ್ ಅವರನ್ನು ಕಂಗನಾ ರಣಾವತ್ ಹೊಗಳಿದ್ದಾರೆ. ಆದರೆ ಇದನ್ನು ಖಂಡಿತ ಜಾವೇದ್ ಹೇಳಿದ್ದೇನು?
ಕಾಂಟ್ರೋವರ್ಸಿ ಕ್ವೀನ್ ಎಂದೇ ಜನಜನಿತವಾಗಿರುವ ನಟಿ ನಟಿ ಕಂಗನಾ ರಣಾವತ್ (Kangana Ranaut) ತಮಗೆ ಕಂಡದ್ದನ್ನು ಯಾರ ಮುಲಾಜೂ ಇಲ್ಲದೇ ನೇರಾನೇರವಾಗಿ ಹೇಳುವಾಕೆ. ಕೆಲವೊಮ್ಮೆ ಇವರು ಹೇಳಿದ್ದು ಸರಿಯಾಗಿದ್ದರೂ, ಇನ್ನು ಕೆಲವೊಮ್ಮೆ ಅನಗತ್ಯವಾಗಿ ಸಲ್ಲದ ವಿಷಯಗಳಲ್ಲಿ ಮೂಗು ತೂರಿಸುವುದು ಉಂಟು. ಇದೇ ಕಾರಣಕ್ಕೆ ಸದಾ ಟ್ರೋಲ್ ಆಗುತ್ತಲೇ ಇರುತ್ತಾರೆ ಕಂಗನಾ. ತಮಗೆ ಸರಿ ಎನ್ನಿಸಿದ್ದನ್ನು ಸರಿ ಎಂದೂ, ಆಗಿ ಬರದ್ದನ್ನು ನೇರಾನೇರ ಖಂಡಿಸುವ ಗುಣ ಇರುವ ಕಂಗನಾ ಅವರನ್ನು ಕಂಡರೆ ಹಲವರಿಗೆ ಅಸಡ್ಡೆ. ಕಂಗನಾ ಸದಾ ಟೀಕೆ ಮಾಡುತ್ತಿರುವವರ ಪೈಕಿ ಹಿರಿಯ ಗೀತರಚನಾಕಾರ ಜಾವೇದ್ ಅಖ್ತರ್ (Javed Akhtar) ಕೂಡ ಒಬ್ಬರು. ಈ ಹಿಂದೆ ಜಾವೇದ್ ಅಖ್ತರ್ ಬಗ್ಗೆ ಈ ಹಿಂದೆ ಅವರು ಹಲವು ರೀತಿಯಲ್ಲಿ ಟೀಕೆ ಮಾಡಿದ್ದರು.
ಆದರೆ ಇದೀಗ ಪಾಕಿಸ್ತಾನದ ನೆಲದಲ್ಲಿಯೇ ನಿಂತು ಭಯೋತ್ಪಾದನೆ ವಿರುದ್ಧ ಗುಡುಗಿದ್ದ ಜಾವೇದ್ ಅಖ್ತರ್ ಅವರನ್ನು ಕಂಗನಾ ಹಾಡಿ ಹೊಗಳಿದ್ದಾರೆ. ಜಾವೇದ್ ಅಖ್ತರ್ (Javed Akhtar) ಅವರು ನೀಡಿರುವ ಹೇಳಿಕೆ ಸರಿಯಾಗಿ ಎಂದಿದ್ದಾರೆ. 2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದವರು ಈಗಲೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡಿಕೊಂಡಿದ್ದಾರೆ ಎಂದು ಜಾವೇದ್ ಅಖ್ತರ್ ತರಾಟೆಗೆ ತೆಗೆದುಕೊಂಡಿದ್ದರು. ಜಾವೇದ್ ಅಖ್ತರ್ ಪಾಕಿಸ್ತಾನದ ಖ್ಯಾತ ಉರ್ದು ಕವಿ ಫಾಯಜ್ ಅಹ್ಮದ್ ಫಾಯಜ್ ಅವರ ಸ್ಮರಣಾರ್ಥ ಲಾಹೋರ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಹೋಗಿದ್ದರು. ಆ ಒಬ್ಬ ಪಾಕಿಸ್ತಾನಿ (Pakistani), ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಬಂದಿದ್ದಿರಿ. ನೀವು ಭಾರತಕ್ಕೆ ವಾಪಸ್ ಹೋದಾಗ, ಪಾಕಿಸ್ತಾನೀ ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತೀರಾ? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಅಖ್ತರ್, ನಾವು ಪರಸ್ಪರ ದೂರಿಕೊಳ್ಳುವುದು ಬೇಡ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕೋದಿಲ್ಲ. ಮುಂಬೈ ದಾಳಿ ಹೇಗಾಯ್ತು ಎಂದು ನೋಡಿದ್ದೇವೆ. ಆ ಉಗ್ರರು ನಾರ್ವೆಯಿಂದಲೋ, ಈಜಿಪ್ಟ್ನಿಂದಲೋ ಬಂದವರಲ್ಲ. ನಿಮ್ಮ ದೇಶದಲ್ಲಿ ಈಗಲೂ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದಿದ್ದರು. ಇದು ಭಾರತೀಯರ ಮನ ಗೆದ್ದಿದ್ದು, ಕಂಗನಾ ಕೂಡ ಈ ಮಾತಿಗೆ ಬೆಂಬಲ ಸೂಚಿಸಿ ಟ್ವೀಟ್ (tweet) ಮಾಡಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ನೆಪೋಟಿಸಂ ಮಾಫಿಯಾ: ಕಂಗನಾ ಗರಂ!
ಆದರೆ ಕಂಗನಾ ಅವರು ತಮ್ಮನ್ನು ಹೊಗಳಿರುವುದು ಜಾವೇದ್ ಅವರಿಗೆ ಕಿರಿಕಿರಿಯುಂಟು ಮಾಡಿದೆ. ಅವರು ಇದರಿಂದ ಸಂತೋಷವಾಗಿಲ್ಲ. ‘ಜಾವೇದ್ ಅವರ ಕವಿತೆ ಕೇಳಿದಾಗಲೆಲ್ಲ ಸರಸ್ವತಿಯೇ ಅವರಿಗೆ ಆಶೀರ್ವಾದ ಮಾಡಿದ್ದಾಳೆ ಎನಿಸುತ್ತದೆ. ಅವರಲ್ಲಿ ಸತ್ಯ ಇರುವ ಕಾರಣಕ್ಕೇ ಆ ದೈವಿ ಗುಣ ಇದೆ. ಜೈ ಹಿಂದ್. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆದಿದ್ದಾರೆ’ ಎಂದು ಕಂಗನಾ ರಣಾವತ್ ಅವರು ಪೋಸ್ಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ಜಾವೇದ್ ಅವರು, ‘ಕಂಗನಾ ಅವರನ್ನು ನಾನು ಮುಖ್ಯ ಎಂದು ಪರಿಗಣಿಸಿಲ್ಲ. ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕಂಗನಾ (Kangana Ranut) ಅವರ ಟ್ವೀಟ್ ಕುರಿತು ಮಾಧ್ಯಮದವರು ಜಾವೇದ್ ಅಖ್ತರ್ ಅವರನ್ನು ಪ್ರಶ್ನಿಸಿದಾಗ, ಆ ವಿಷಯ ಅಲ್ಲಿಗೆ ಬಿಡಿ. ಬೇರೆ ಏನಾದರೂ ಇದ್ದರೆ ಕೇಳಿ ಎಂದು ಕಂಗನಾ ಕುರಿತು ಮಾತನಾಡಲು ಹಿಂದೇಟು ಹಾಕಿದ್ದಾರೆ.
ಎರಡು ವರ್ಷಗಳ ಹಿಂದೆ ಹೋಗುವುದಾದರೆ, ಇಬ್ಬರ ನಡುವೆ ಕೋರ್ಟ್ ಸಮರ ನಡೆದಿತ್ತು. ಕಂಗನಾ ಅವರು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ , ಜಾವೇದ್ ಅಖ್ತರ್ ಸಿನಿಮಾ ಇಂಡಸ್ಟ್ರಿಯ ನಿರ್ದಿಷ್ಟ ಗ್ಯಾಂಗ್‍ನ ಸದಸ್ಯ ಎಂದು ಉಲ್ಲೇಖಿಸಿದ್ದರು. ಇದರಿಂದ ಕುಪಿತರಾದ ಜಾವೆದ್ ಅಖ್ತರ್ ಅವರು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2020 ಜೂನ್ 14 ರಂದು ನಟ ಸುಶಾಂತ್ ಸಿಂಗ್ ಅವರ ಸಾವಿನ ನಂತರ ರನೌತ್ ಈ ಸಂದರ್ಶವನ್ನು ನೀಡಿದ್ದರು. ಇದಕ್ಕೂ ಮುನ್ನ ಹೃತಿಕ್ ರೋಷನ್ (Hruthik Roshan) ಮತ್ತು ಕಂಗನಾ ನಡುವಿನ ಪ್ರೀತಿಯ ವಿಷಯದಲ್ಲಿಯೂ ಜಾವೇದ್ ಅವರು ವಿವಾದಕ್ಕೆ ಈಡಾಗಿದ್ದರು.
ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್