ಬಾಯ್‌ಫ್ರೆಂಡ್ ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್; ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

Published : Apr 03, 2023, 03:24 PM ISTUpdated : Apr 05, 2023, 03:09 PM IST
ಬಾಯ್‌ಫ್ರೆಂಡ್ ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್; ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ಸಾರಾಂಶ

ಬಾಯ್‌ಫ್ರೆಂಡ್ ಜೊತೆ ನಟಿ ಜಾನ್ವಿ ಕಪೂರ್ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ.ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದದ್ದಾರೆ. ಜಾನ್ವಿ ಕಪೂರ್ ಮತ್ತು ಶಿಖರ್‌ಗೆ ಸಹೋದರಿ ಖುಷಿ ಸಾಥ್ ನೀಡಿದ್ದಾರೆ.  

ಬಾಲಿವುಡ್ ನಟಿ ಜಾನ್ವಿ ಕಪೂರ್ ಸದ್ಯ ಸೌತ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ನಟಿ ಜಾನ್ವಿ ತೆಲುಗು ಸ್ಟಾರ್ ನಟ ಜೂ.ಎನ್ ಟಿ ಆರ್ ಜೊತೆ ಹೊಸ ಸಿನಿಮಾಗೆ ಸಹಿ ಮಾಡಿದ್ದು ಮುಹೂರ್ತ ಸಮಾರಂಭ ಕೂಡ ನೆರವೇರಿದೆ. ಮೊದಲ ಬಾರಿಗೆ ಜಾನ್ವಿ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಜಾನ್ವಿಯ ದೊಡ್ಡ ಕನಸಾಗಿತ್ತು. ಅದರಂತೆ ಈಗ ಕೊನೆಗೂ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಸಿನಿಮಾ ಶೂಟಿಂಗ್‌ಗೂ ಮೊದಲು ಜಾನ್ವಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 

ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಮತ್ತು ಶಿಖರ್ ಪಹಾರಿಯಾ ಇಬ್ಬರೂ ತಿರುಪತಿಗೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾನ್ವಿ ಕಪೂರ್ ಹಸಿರು ಮತ್ತು ಪಿಂಕ್ ಬಣ್ಣದ ದಾವಣಿಯಲ್ಲಿ ಮಿಂಚಿದ್ದಾರೆ. ಇಂದು ಸೋಮವಾರ (ಏಪ್ರಿಲ್ 3) ಬೆಳ್ಳಂಬಳಗ್ಗೆ ಜಾನ್ವಿ ಮತ್ತು ಶಿಖರ್ ಪಹಾರಿಯಾ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು.


ಜಾನ್ವಿ ಮತ್ತು ಶಿಖರ್ ಪಹಾರಿಯಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಇಬ್ಬರೂ ಈ ಮೊದಲು ಸಹ ಪ್ರೀತಿಯಲ್ಲಿದ್ದರು. ಆದರೆ ಬ್ರೇಕಪ್ ಮಾಡಿಕೊಂಡು ದೂರ ದೂರ ಆಗಿದ್ದರು. ಇದೀಗ ಇಬ್ಬರೂ ಮತ್ತೆ ಒಂದಾಗಿದ್ದು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ನಡೆದ ನೀತಾ ಅಂಬಾನಿ ಅವರ ಕಾರ್ಯಕ್ರಮದಲ್ಲೂ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ತಿರುಪತಿಗೆ ಭೇಟಿ ನೀಡುವ ಮೂಲಕ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸುತ್ತಿದ್ದಾರೆ. 



NTR 30: ದೇವರು ಆಸೆ ಈಡೇರಿಸಿದ, ಕನಸೊಂದು ನನಸಾಯ್ತು ಎಂದ ನಟಿ ಜಾಹ್ನವಿ ಕಪೂರ್

ಕಾಫಿ ವಿತ್ ಕರಣ್ ಶೋನಲ್ಲಿ ನಟಿ ಜಾನ್ವಿ ಕಪೂರ್, ಶಿಖರ್ ಬಗ್ಗೆ ಮಾತನಾಡಿದ್ದರು. ಶಿಖರ್ ಜೊತೆಗಿನ ಡೇಟಿಂಗ್ ವದಂತಿಯನ್ನು ಬಹುತೇಕ ಖಚಿತ ಪಡಿಸಿದ್ದರು. ಅಲ್ಲದೇ ಅದು ಹಳೆಯ ವಿಚಾರ ಎಂದು ಹೇಳಿದ್ದರು. ಜಾನ್ವಿ ಪಾತ್ರವಲ್ಲದೇ ನಟ ಸಾರಾ ಅಲಿ ಖಾನ್ ಕೂಡ ಶಿಖರ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಜಾನ್ವಿ ಕಪೂರ್ ಮತ್ತೆ ಶಿಖರ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. 

Jr.NTR ಜೊತೆ ನಟಿಸಲು ಸ್ಟಾರ್ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದ ಜಾನ್ವಿ ಕಪೂರ್

ಜಾನ್ವಿ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ಮಲಯಾಳಂ ಸಿನಿಮಾದ ರಿಮೇಕ್ ಆಗಿತ್ತು. ಮಲಯಾಳಂನಲ್ಲಿ ದೊಡ್ಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಮಿಲಿ ಸಿನಿಮಾ ಬಾಲಿವುಡ್‌ನಲ್ಲಿ ನೆಲಕಚ್ಚಿತು. ಈ ಸಿನಿಮಾ ಬಳಿಕ ಜಾನ್ವಿ ಬವಾಲ್ ಮತ್ತು ಮಹಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸಿನಿಮಾ ಜೊತೆಗೆ ತೆಲುಗು ಸಿನಿಮಾ ಮಾಡುತ್ತಿದ್ದು ಜಾನ್ವಿ ಮೊದಲ ತೆಲುಗು ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವಾಗತಿಸಲಿದ್ದಾರೆ ಎಂದು ಕಾದುನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!