Jr NTR ಜೊತೆ ರೊಮಾನ್ಸ್​ ಮಾಡಲು ಜಾಹ್ನವಿ ಕಪೂರ್‌ಗೆ​ ಈ ಪರಿ ಸಂಭಾವನೆಯಾ?

By Suvarna News  |  First Published Feb 20, 2023, 2:54 PM IST

ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಸೌತ್​ ಇಂಡಸ್ಟ್ರಿಗೂ ಕಾಲಿಟ್ಟಿದ್ದು, ತೆಲಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?
 


ಬಾಲಿವುಡ್‌ನ ಬ್ಯೂಟಿ ಕ್ವೀನ್​ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್​ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ.  2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್​,  ಮಿಲಿ ಚಿತ್ರದಲ್ಲಿಯೂ  ಪ್ರಶಂಸೆ ಗಳಿಸಿದವರು. ಇವರು ಸೌತ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು.  ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್​ಟಿಆರ್​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಡುತ್ತಿರುವುದು ನಿಶ್ಚಿತವಾಗಿದೆ. ಇದೇ ಚಿತ್ರದ ವಿಷಯವಾಗಿ  ಹೈದರಾಬಾದ್​​ಗೆ ನಟಿ ಭೇಟಿ ಕೊಟ್ಟಿರುವುದು ಚರ್ಚೆಯಾಗುತ್ತಿದೆ. 

ಜೂನಿಯರ್ ಎನ್​ಟಿಆರ್​ ಅವರಿಗೆ ಎನ್​ಟಿಆರ್​ 30 (NTR 30)ನಲ್ಲಿ ನಾಯಕಿಯಾಗಿ ನಟಿಸುತ್ತಿರುವ ಜಾಹ್ನವಿ ಕಪೂರ್​, ಈ  ಚಿತ್ರಕ್ಕೆ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್​ನಲ್ಲಿ (B- town)  ಹರಿದಾಡುತ್ತಿದೆ. ಇದೊಂದು ರೊಮಾಂಟಿಕ್​ ಮೂವಿಯಾಗಿದ್ದು, ಜ್ಯೂ. ಎನ್​ಟಿಆರ್​ ಜೊತೆ ರೊಮಾನ್ಸ್​ ಮಾಡಲು ಬೃಹತ್​ ಮೊತ್ತವನ್ನು ನಟಿ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿದೆ. ತಮ್ಮ ಚೊಚ್ಚಲ ಚಿತ್ರ ಧಡಕ್ (Dhadak) ಸಿನಿಮಾಗಾಗಿ ರೂ. 60 ಲಕ್ಷ ಸಂಭಾವನೆ ಪಡೆದಿದ್ದ ಜಾಹ್ನವಿ ಬರಬರುತ್ತಾ ಎಲ್ಲರಂತೆಯೇ ಸಂಭಾವನೆ ಹೆಚ್ಚು ಮಾಡುತ್ತಲೇ ಬಂದಿದ್ದಾರೆ. ಆದರೆ ಇದೀಗ ಏಕಾಏಕಿ ಇವರ ಸಂಭಾವನೆ ಮೂರ್ನಾಲ್ಕು ಪಟ್ಟು ಏರಿಕೆ ಆಗಿದೆ ಎನ್ನುವ ಸುದ್ದಿ ಬಂದಿದೆ.  ಈ ಚಿತ್ರಕ್ಕೆ ನಟಿ ಭಾರಿ ಸಂಭಾವನೆ ಪಡೆಯಲಿದ್ದಾರೆ. ತೆಲಗು ಚಿತ್ರತಂಡ  ಇದಾಗಲೇ ನಟಿಯ ಲುಕ್ ಟೆಸ್ಟ್ ಕೂಡ ಮುಗಿಸಿದ್ದು, ಈಕೆಯೇ ತಮ್ಮ ಚಿತ್ರಕ್ಕೆ ಸ್ಯೂಟ್​ ಆಗುತ್ತಾರೆ ಎನ್ನುವ ನಿರ್ಧಾರಕ್ಕೆ ಬಂದ ನಂತರ ಜಾಹ್ನವಿ ಸಂಭಾವನೆ ಹೆಚ್ಚಾಗಿದೆಯಂತೆ.  ಚಿತ್ರದ ನಿರ್ದೇಶಕ ಕೊರಟಾಲ ಶಿವ ಲುಕ್ ಟೆಸ್ಟ್ ನಡೆಸಿದ್ದರು.  

Tap to resize

Latest Videos

Rajinikanth: ಅಬ್ಬಬ್ಬಾ! ಮಗಳ ಚಿತ್ರಕ್ಕೂ ರಜನಿಕಾಂತ್​ ಈ ಪರಿ ಸಂಭಾವನೆನಾ?

ಅಷ್ಟಕ್ಕೂ  NTR 30 ಚಿತ್ರಕ್ಕೆ ಜಾಹ್ನವಿ ಪಡೆಯಲಿರುವ ಸಂಭಾವನೆ  ಮೂರೂವರೆ ಕೋಟಿ ರೂಪಾಯಿ (3.5 crores) ಎನ್ನುವ ಸುದ್ದಿಯಿದೆ. ಇದು ನಿಜವೇ ಆಗಿದ್ದರೆ, ಇಲ್ಲಿಯವರೆಗೆ ಜಾಹ್ನವಿ ಮಾಡಿರುವ ಚಿತ್ರಗಳಲ್ಲಿನ ಅತಿ ಹೆಚ್ಚು ಸಂಭಾವನೆ ಎನಿಸಲಿದೆ. ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ 25 ವರ್ಷದಯ ಯುವನಟಿಯೊಬ್ಬಳು ಇಷ್ಟೊಂದು ಸಂಭಾವನೆ (Remmuneration) ಪಡೆಯುವುದು ಕೂಡ ದಾಖಲೆ ಎನ್ನಲಾಗುತ್ತಿದೆ.
  
ಇನ್ನು ಈ ಯಂಗ್​ ನಟಿಯ ಜೀವನದ ಬಗ್ಗೆ ಹೇಳುವುದಾದರೆ, ಅವರದ್ದು ಐಷಾರಾಮಿ ಬದುಕು ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಅಮ್ಮ ಸೂಪರ್​ಸ್ಟಾರ್​ (Super Star) ಆದರೆ ತಂದೆ ಬೋನಿ ಕಪೂರ್​ (Bony Kapoor) ಕೋಟ್ಯಧೀಶ. ಇದೇ ಕಾರಣಕ್ಕೆ  2022 ರ ವೇಳೆಗೆ ಜಾಹ್ನವಿಯ ಸಂಪತ್ತು $ 10 ಮಿಲಿಯನ್ (10 million Dollar) ಎಂದು ದಾಖಲಾಗಿತ್ತು. ಅಂದರೆ ಸುಮಾರು 82 ಕೋಟಿ ರೂಪಾಯಿಗಳು. ಇದು ಅಪ್ಪ-ಅಮ್ಮನ ಸಂಪತ್ತು ಎಲ್ಲಾ ಸೇರಿಸಿದ್ದೇ ಆದರೂ ಜಾಹ್ನವಿ ಕೂಡ ಸಾಕಷ್ಟು ಗಳಿಸುತ್ತಿದ್ದಾರೆ. ಜಾನ್ವಿಯ ಸಿನಿಮಾಗಳಷ್ಟೇ ಅಲ್ಲ, ಹಲವು ಬ್ರಾಂಡ್​ಗಳ ಪ್ರಚಾರ ಮಾಡುವ ಮೂಲಕ ಅಪಾರ ಹಣ ಗಳಿಸುತ್ತಿದ್ದಾರೆ.  ಅಷ್ಟೇ ಅಲ್ಲದೇ, ವಿವಿಧ ಉತ್ಪನ್ನಗಳನ್ನು ಪ್ರಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕೆಲ ಪೋಸ್ಟ್ ಮಾಡುವ ಮೂಲಕ ಹಣಗಳಿಸುತ್ತಿದ್ದಾರೆ. ಸದ್ಯ ಈಕೆಯ ಮಾಸಿಕ ಆದಾಯ ಲೆಕ್ಕಾಚಾರ ಮಾಡುವುದಾದರೆ ಅರ್ಧ ಕೋಟಿ ರೂಪಾಯಿಗಳು (Half Crore Rupees) ಹಾಗೂ  ವಾರ್ಷಿಕ ಆದಾಯ ಸುಮಾರು 6 ರಿಂದ 8 ಕೋಟಿ ಎಂದು ಹೇಳಲಾಗಿದೆ.

Hansika Motwani: ದೊಡ್ಡವಳಂತೆ ಕಾಣಲು ಇಂಜೆಕ್ಷನ್​ ಪಡೆದುಕೊಂಡಿದ್ರಾ?  

click me!