ಗೋಲ್ಡನ್ ವ್ಯಕ್ತಿಗೆ ಚಿನ್ನದ ಸುರಿಮಳೆ; ಅಣ್ಣನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲು ಹಂಚಿಕೊಂಡ ರಜನಿಕಾಂತ್

Published : Feb 20, 2023, 01:03 PM IST
ಗೋಲ್ಡನ್ ವ್ಯಕ್ತಿಗೆ ಚಿನ್ನದ ಸುರಿಮಳೆ; ಅಣ್ಣನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲು ಹಂಚಿಕೊಂಡ ರಜನಿಕಾಂತ್

ಸಾರಾಂಶ

ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಗೋಲ್ಡನ್ ಹಾರ್ಟ್ ವ್ಯಕ್ತಿಗೆ ಚಿನ್ನದ ಸುರಿಮಳೆ ಎಂದು ಹೇಳಿದ್ದಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಕರ್ನಾಟಕದಲ್ಲಿದ್ದಾರೆ. ಕರ್ನಾಟಕದ ಕೆಲವು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ತಲೈವ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಬಹು ನಿರೀಕ್ಷೆಯ ಜೈಲರ್ ಸಿನಿಮಾದ ಚಿತ್ರೀಕರಣ ಕರ್ನಾಟಕದಲ್ಲಿ ನಡೆಯುತ್ತಿದೆ. ಈ ನಡುವೆ ಸೂಪರ್ ಸ್ಟಾರ್ ಮಹಾ ಶಿವರಾತ್ರಿಯನ್ನು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಫೆಬ್ರವರಿ 18ರಂದು  ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ವಿಶೇಷ ದಿನದಂದು ರಜನಿಕಾಂತ್ ಮತ್ತು ಅವರ ಪತ್ನಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮಹಾ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು.  ಶಿವರಾತ್ರಿ ಆಚರಿಸಿದ ಮಾರನೆ ದಿನವೇ ರಜನಿಕಾಂತ್ ಅಣ್ಣನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 

ರಜನಿಕಾಂತ್ ಪ್ರೀತಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕವಾಡ ಅವರು 80ನೇ ವರ್ಷದ ಹಬುಟ್ಟುಹಬ್ಬ ಆಚರಿಸಿಕೊಂಡರು. ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ಜನ್ಮ ದಿನ ಸಂಭ್ರಮಿಸಿದರು. ಅಣ್ಣನ ಹುಟ್ಟುಹಬ್ಬ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಭಾಗಿಯಾಗಿದ್ದರು. ವಿಶೇಷ ಎಂದರೆ ಅಣ್ಣನ ಹುಟ್ಟುಹಬ್ಬದ ದಿನವೇ ಅವರ ಮಗ ರಾಮಕೃಷ್ಣ ಅವರ ಜನ್ಮದಿನವೂ ಆಗಿತ್ತು. ಹಾಗಾಗಿ ತಲೈವಾಗೆ ಇದು ಡಬಲ್ ಸಂಭ್ರಮವಾಗಿತ್ತು. 

ಸೂಪರ್ ಸ್ಟಾರ್ ಅನೇಕ ವರ್ಷಗಳ ಬಳಿಕ ಕುಟುಂಬದ ಜೊತೆ ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಸಹೋದರ ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಫೋಟೋಗಳು ವೈರಲ್ ಆಗಿವೆ. ರಜನಿಕಾಂತ್ ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ. ತಮ್ಮ ಜೀವನದ ಪ್ರಮುಖ ನಿರ್ಧಾರಗಳ ಬಗ್ಗೆ ಯಾವಾಗಲೂ ಅಣ್ಣನನ್ನು ಸಂಪರ್ಕಿಸುತ್ತಾರೆ. 

ಬೆಂಗಳೂರಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಿದ ರಜನಿಕಾಂತ್; ಪತ್ನಿ ಜೊತೆ ಧ್ಯಾನ ಮಾಡಿದ ಫೋಟೋ ವೈರಲ್

ಈ ಬಗ್ಗೆ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಣ್ಣನ ಹುಟ್ಟು ಅಚರಣೆಯ ಫೋಟೋಗಳನ್ನು ಶೇರ್ ಮಾಡಿ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.  

'ನನ್ನ ಸಹೋದರ ಸತ್ಯನಾರಾಯಣ ರಾವ್ ಗಾಯಕವಾಡ ಅವರ 80 ನೇ ಹುಟ್ಟುಹಬ್ಬ ಮತ್ತು ಅವರ ಮಗ ರಾಮಕೃಷ್ಣ ಅವರ 60 ನೇ ಹುಟ್ಟುಹಬ್ಬವನ್ನು ನನ್ನ ಕುಟುಂಬದೊಂದಿಗೆ ಒಂದೇ ದಿನ ಆಚರಿದ್ದು ಸಂತೋಷವಾಗಿದೆ. ನಾನು ಇವತ್ತು ಏನಾಗಿದ್ದೇನೋ ಅದಕ್ಕೆ ಅಣ್ಣನೆ ಕಾರಣ. ಈ ಚಿನ್ನದ ಹೃದಯಕ್ಕೆ ಚಿನ್ನದ ಮಳೆಯ ಸುರಿಮಳೆ' ಎಂದು ಹೇಳಿದ್ದಾರೆ. ಸೂಪರ್ ಸ್ಟಾರ್ ಪೋಸ್ಟ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಸಹ ವಿಶ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಆದಿಯೋಗಿ ಪ್ರತಿಮೆ ವೀಕ್ಷಣೆಗೆ ಸದ್ದಿಲ್ಲದೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ನಟ ರಜನಿಕಾಂತ್!

ಜೈಲರ್ ಸಿನಿಮಾದ ಬಗ್ಗೆ 

ನೆಲ್ಸನ್ ದಿಲೀಪ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ ಜೈಲರ್ ಸಿನಿಮಾ. ಸದ್ಯ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್  ಮತ್ತು ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಿವಣ್ಣ ಮತ್ತು ರಜನಿಕಾಂತ್ ಇಬ್ಬರ ಶೂಟಿಂಗ್ ಫೋಟೋಗಳು ವೈರಲ್ ಆಗಿತ್ತು. ಜೈಲರ್ ಸಿನಿಮಾ ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೈಲರ್ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ. ರಜನಿಕಾಂತ್ ಕೊನೆಯದಾಗಿ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!