150 ಕೋಟಿ ರೂ. ಹೊಸ ಮನೆಗೆ ಕಾಲಿಟ್ಟ ನಟ ಧನುಷ್: ಗೃಹ ಪ್ರವೇಶದ ಫೋಟೋಗಳು ವೈರಲ್

Published : Feb 20, 2023, 01:46 PM IST
150 ಕೋಟಿ ರೂ. ಹೊಸ ಮನೆಗೆ ಕಾಲಿಟ್ಟ ನಟ ಧನುಷ್: ಗೃಹ ಪ್ರವೇಶದ ಫೋಟೋಗಳು ವೈರಲ್

ಸಾರಾಂಶ

ಕಾಲಿವುಡ್ ಸ್ಟಾರ್ ಧನುಷ್ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಟಾಲಿವುಡ್ ಸ್ಟಾರ್ ಧನುಷ್ ಅವರ ಹೊಸ ಮನೆಯ ಗೃಹ ಪ್ರವೇಶ ಇಂದು (ಫೆಬ್ರವರಿ 20) ಅದ್ದೂರಿಯಾಗಿ ನೆರವೇರಿತು. ಚೆನ್ನೈನ ಪೋಯಿಸ್ ಗಾರ್ಡನ್ ನಲ್ಲಿ ಹೊಸ ಮನೆ ಕಟ್ಟಿಸಿದ್ದು ಇದೀಗ ಗೃಹ ಪ್ರವೇಶ ಸಂಭ್ರಮ ನೆರವೇರಿದೆ. ಗೃಹ ಪ್ರವೇಶದ ಸಂಭ್ರಮದಲ್ಲಿರುವ ಧನುಷ್ ಮತ್ತು ಪೋಷಕರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಧನುಷ್ ಹೊಸ ಮನೆ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದಾಗಿದೆ. ಈ ಹೊಸ ಮನೆಯನ್ನು ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.        

ಧನುಷ್ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹ ಪ್ರವೇಶ ಸಂಭ್ರಮದಲ್ಲಿ ಧನುಷ್ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದರು. ಈ ಸಂಭ್ರಮದಲ್ಲಿ ಧನುಷ್ ಮಕ್ಕಳು ಸಹ ಭಾಗಿಯಾಗಿದ್ದಾರೆ. ಧನುಷ್ ಹೊಸ ಮನೆಯ ಸಂಭ್ರಮಕ್ಕೆ ಸ್ನೇಹಿತರು, ಸಿನಿಮಾರಂಗದ ಗಣ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಅನೇಕರು ಫೋಟೋಗಳನ್ನು ಶೇರ್ ಮಾಡಿ ಧನುಷ್ ಕುಟುಂಬಕ್ಕೆ ಶುಭಕೋರಿದ್ದಾರೆ. 

ಚೆನ್ನೈನ ಪೋಯಿಸ್ ಗಾರ್ಡನ್​ನಲ್ಲಿ ಕಾಲಿವುಡ್‌ನ ಅನೇಕ ಸಿನಿಮಾ ಗಣ್ಯರ ಮನೆಗಳಿವೆ. ವಿಶೇಷ ಎಂದರೆ ಸೂಪರ ಸ್ಟಾರ್ ರಜನಿಕಾಂತ್ ಮನೆ ಇರುವುದು ಸಹ ಅಲ್ಲೆ. ಇನ್ನೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಾಸಿಸಿದ್ದ ಬಹುಕೋಟಿ ಬಂಗಲೆ ಇರುವುದು ಕೂಡ ಪೋಯಿಸ್​​ ಗಾರ್ಡನ್​ನಲ್ಲಿ. ಕಳೆದ ಎರಡು ವರ್ಷಗಳ ಹಿಂದೆ ಧನುಷ್ ಹೊಸ ಮನೆಗೆ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆಯಲ್ಲಿ ರಜನಿಕಾಂತ್ ದಂಪತಿ ಮತ್ತು ಮಾಜಿ ಪತ್ನಿ ಐಶ್ವರ್ಯಾ ಸಮ್ಮುಖದಲ್ಲಿ ನೆರವೇರಿತ್ತು. ಆದರೆ ಗೃಹ ಪ್ರವೇಶದ ವೇಳೆಗೆ ಧನುಷ್ ಮತ್ತು ಐಶ್ವರ್ಯಾ ದಂಪತಿ ದೂರ ದೂರ ಆಗಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. 

ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್

ಕಳೆದ ವರ್ಷ ಧನುಷ್ ಮತ್ತು ಐಶ್ವರ್ಯಾ ದಂಪತಿ ವಿಚ್ಛೇದನ ಪಡೆಯುತ್ತಿರುವುದಾಗಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. 2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ದಾಂಪತ್ಯಕ್ಕೆ ಕಾಲಿಟ್ಟರು. ಈ ದಾಂಪತ್ಯಕ್ಕೆ ಯಾತ್ರಾ ಮತ್ತು ಲಿಂಗ್ ಎಂಬ ಇಬ್ಬರೂ ಗಂಡು ಮಕ್ಕಳಿದ್ದಾರೆ. ಧನುಷ್ ಮನೆಯ ಪೂಜೆಯಲ್ಲಿ ಇಬ್ಬರೂ ಮಕ್ಕಳು ಭಾಗಿಯಾಗಿದ್ದಾರೆ.

ಸೂಪರ್ ಸ್ಟಾರ್ ಧನುಷ್‌ ಅವರ 150 ಕೋಟಿ ಬೆಲೆಯ ಬಂಗಲೆ ಒಳಗೆ ಹೇಗಿದೆ ನೋಡಿ

ಬೆಂಗಳೂರಿನಲ್ಲಿ ರಜನಿಕಾಂತ್ ದಂಪತಿ  

ಅತ್ತ ಧನುಷ್ ಮನೆ ಗೃಹ ಪ್ರವೇಶ ನಡೆಯುತ್ತಿದ್ದರೆ ಸೂಪರ್ ರಂಜನಿಕಾಂತ್ ಮತ್ತು ಲತಾ ದಂಪತಿ ಬೆಂಗಳೂರಿನಲ್ಲಿದ್ದಾರೆ. ಜೈಲರ್ ಸಿನಿಮಾದ ಸೂಟಿಂಗ್ ಗಾಗಿ ರಜನಿಕಾಂತ್ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ಅನೇಕ ಪ್ರಸಿದ್ಧ ಸ್ಥಳಗಳಿಗೆ ರಜನಿಕಾಂತ್ ಭೇಟಿ ನೀಡುತ್ತಿದ್ದಾರೆ. ಶಿವರಾತ್ರಿಯನ್ನು ಸಂಭ್ರಮಿಸಿದ ರಜನಿಕಾಂತ್ ಅಣ್ಣ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಣ್ಣನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಕೂಡ ಬೆಂಗಳೂರಿಗೆ ಆಗಮಿಸಿದ್ದರು. ಅಪ್ಪ-ಅಮ್ಮನ ಜೊತೆ ಶಿವರಾತ್ರಿ ಆಚರಿಸಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!