ಕೊನೆಗೂ ಸೌತ್ ಸಿನಿರಂಗಕ್ಕೆ ಜಾನ್ವಿ ಎಂಟ್ರಿ; ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಕನಸು ನನಸು ಮಾಡಿಕೊಂಡ ನಟಿ

Published : Feb 13, 2023, 05:10 PM ISTUpdated : Feb 13, 2023, 05:33 PM IST
ಕೊನೆಗೂ ಸೌತ್ ಸಿನಿರಂಗಕ್ಕೆ ಜಾನ್ವಿ ಎಂಟ್ರಿ; ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಕನಸು ನನಸು ಮಾಡಿಕೊಂಡ ನಟಿ

ಸಾರಾಂಶ

ಬಾಲಿವುಡ್ ನಟಿ ಜಾನ್ವಿ ಕಪೂರ್‌ಗೆ ಕೊನೆಗೂ ಸೌತ್ ಸಿನಿಮಾರಂಗದಲ್ಲಿ ನಟಿಸುವ ಆವಕಾಶ ಗಿಟ್ಟಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್‌ಗೆ ಜೋಡಿಯಾಗುವ ಮೂಲಕ ಜಾನ್ವಿ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 

ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸೌತ್ ಸಿನಿಮಾರಂಗದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಅನೇಕ ಬಾರಿ ದಕ್ಷಿಣ ಸಿನಿಮಾರಂಗದ ಬಗ್ಗೆ ಮಾತನಾಡಿದ್ದರು, ಸಿನಿಮಾ ಮಾಡುವ ಕನಸಿದೆ ಎಂದು ಹೇಳಿದ್ದರು. ಅಷ್ಟೆಯಲ್ಲಾ ಯಾರ ಜೊತೆ ನಟಿಸಬೇಕೆನ್ನುವುದನ್ನು ಬಹಿರಂಗ ಪಡಿಸಿದ್ದರು. ಇದೀಗ ಜಾನ್ವಿ ಕನಸು ನನಸಾಗಿದೆ. ಸೌತ್‌ ಸಿನಿಮಾರಂಗದ ಸ್ಟಾರ್ ನಟನಿಗೆ ನಾಯಕಿಯಾಗುವ ಮೂಲಕ ಜಾನ್ವಿ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹೌದು ಬಾಲಿವುಡ್ ನಟಿ ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಮುಂದಿನ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳು ಅಧಿಕೃತಗೊಳಿಸಿವೆ. 

ಜೂ.ಎನ್ ಟಿ ಆರ್ ಮುಂದಿನ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಜೊತೆ ಮಾಡುತ್ತಿದ್ದಾರೆ. ಇಬ್ಬರ ಸಿನಿಮಾ ಅನೇಕ ತಿಂಗಳಿಂದ ಸದ್ದು ಮಾಡುತ್ತಿದೆ. ಸದ್ಯಕ್ಕೆಈ ಸಿನಿಮಾಗೆ NTR30 ಎಂದು ಹೆಸರಿಡಲಾಗಿದೆ. ಈ ಸಿನಿಮಾ ನಾಯಕಿ ಆಯ್ಕೆ ವಿಚಾರಕ್ಕೆ ಈ ಭಾರಿ ಕುತೂಹಲ ಮೂಡಿಸಿತ್ತು. ಇದೀಗ  TR30 ಸಿನಿಮಾಗೆ ಜಾನ್ವಿ ಆಯ್ಕೆ ಫೈನಲ್ ಆಗಿದೆ. ಡೂ.ಎನ್ ಟಿ ಆರ್ ಜೊತೆ ಜಾನ್ವಿ ನಟಿಸುವುದು ಖಚಿತ ಎನ್ನಲಾಗಿದೆ. 

ಕಳೆದ ಕೆಲವು ತಿಂಗಳಿಂದ NTR30ಸಿನಿಮಾಗೆ ಅನೇಕ ನಾಯಕಿಯರ ಹೆಸರು ಕೇಳಿ ಬಂದಿತ್ತು. ರಶ್ಮಿಕಾ ಮಂದಣ್ಣರಿಂದ ಮೃಣಾಲ್ ವರೆಗೂ ಅನೇಕ ನಾಯಕಿಯರ ಹೆಸರು ವೈರಲ್ ಆಗಿತ್ತು. ಆದರೀಗ ಜಾನ್ವಿ ಹೆಸರು ಫೈನಲ್ ಆಗುವ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಈ ಬಗ್ಗೆ ಸಿನಿಮಾತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಈ ಬಗ್ಗೆ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಅಂದಹಾಗೆ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಹಾಗಾಗಿ ಬಾಲಿವುಡ್ ನಾಯಕಿಯನ್ನು ಆಯ್ಕೆ ಮಾಡಿದೆ ಸಿನಿಮಾತಂಡ. 

ಸೌತ್ ಸಿನಿರಂಗದ ಕಡೆ ಜಾನ್ವಿ ಕಪೂರ್ ಒಲವು; ತೆಲುಗಿನ ಈ ಸ್ಟಾರ್ ಜೊತೆ ನಟಿಸಬೇಕೆಂದ ಶ್ರೀದೇವಿ ಪುತ್ರಿ

ಆರ್ ಆರ್ ಆರ್ ಸಿನಿಮಾ ಬಳಿಕ ಜೂ.ಎನ್ ಟಿ ಆರ್ ಮತ್ತೆ ತೆರೆಮೇಲೆ ಬಂದಿಲ್ಲ. ಅಲ್ಲದೇ ಸಿನಿಮಾ ಶೂಟಿಂಗ್ ಕೂಡ ಪ್ರಾರಂಭಿಸಿಲ್ಲ. ಸದ್ಯದಲ್ಲೇ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು ಜೂ.ಎನ್ ಟಿ ಆರ್ ಮತ್ತು ಜಾನ್ವಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಜಾನ್ವಿ ಮೊದಲ ಸೌತ್ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಸಹ ಉತ್ಸುಕರಾಗಿದ್ದಾರೆ. 

ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಆಮೀರ್ ಖಾನ್?

NTR30 ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ.  ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಇರಲಿದೆ ಎನ್ನಲಾಗುತ್ತಿದೆ. ಫೆಬ್ರವರಿ 23ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. 6 ರಿಂದ 7 ತಿಂಗಳ ಅವಧಿಯಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ವರ್ಷ ಪ್ರಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಜೂ. ಎನ್ ಟಿ ಆರ್ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ. 
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar 2: ಹೇಗಿದೆ ಸಿನಿಮಾ? ನಿರೀಕ್ಷೆ ಉಳಿಸಿಕೊಂಡಿತಾ? ಇಲ್ಲಿದೆ ಫಸ್ಟ್ ರೆಸ್ಪಾನ್ಸ್
Dhurandhar 2 Movie Review: ರಣವೀರ್‌ ಸಿಂಗ್ ‌'ಧುರಂಧರ್' ಸಿನಿಮಾಕ್ಕೆ ಭರ್ಜರಿ ಮೆಚ್ಚುಗೆ; ಹೊಗಳಿಕೆಯೋ ಹೊಗಳಿಕೆ