ಜಾಹ್ನವಿ ಕಪೂರ್​ಗೆ ಕೆಮ್ಮು ಶೀತ- ಬಾಯ್​ಫ್ರೆಂಡ್​ ಜೊತೆ ಹುಷಾರಮ್ಮಾ... ವೈರಲ್​ ವಿಡಿಯೋಗೆ ಕಾಲೆಳೆದ ನೆಟ್ಟಿಗರು

Published : Mar 12, 2024, 05:37 PM IST
ಜಾಹ್ನವಿ ಕಪೂರ್​ಗೆ ಕೆಮ್ಮು ಶೀತ- ಬಾಯ್​ಫ್ರೆಂಡ್​ ಜೊತೆ ಹುಷಾರಮ್ಮಾ... ವೈರಲ್​ ವಿಡಿಯೋಗೆ ಕಾಲೆಳೆದ ನೆಟ್ಟಿಗರು

ಸಾರಾಂಶ

ಜಾಹ್ನವಿ ಕಪೂರ್​ಗೆ ಅನಾರೋಗ್ಯವಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ವಿಡಿಯೋ ನೊಡಿದ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡು..  

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಕಾರಿನಲ್ಲಿ ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ಅವರ ಮೂಗು, ಮುಖ ಎಲ್ಲ ಕೆಂಪಗಾಗಿರುವುದನ್ನು ನೋಡಬಹುದು. ಸೂಂ.. ಸೂಂ... ಎನ್ನುತ್ತಾ ನಟಿ ಮೂಗು ಒರಿಸಿಕೊಂಡಿದ್ದು, ಕೆಮ್ಮಿದ್ದಾರೆ. ಸೆಲೆಬ್ರಿಟಿಗಳಿಗೆ ಏನೇ ಆದರೂ ಅವರ ಹಿಂದೆ ಕ್ಯಾಮೆರಾ ಕಣ್ಣು ನೆಟ್ಟೇ ಇರುತ್ತದೆ. ಇನ್ನು ಈ ರೀತಿಯಾದರೆ ಕೇಳಬೇಕಾ? ಸಾಮಾನ್ಯ ಜನರಿಗೆ ಆಗದ್ದು ಇವರಿಗೆ ಆಗಿ ಹೋಯ್ತು ಎನ್ನುವಷ್ಟರ ಮಟ್ಟಿಗೆ ಸುದ್ದಿಯಾಗುತ್ತದೆ. ಇದೀಗ ನಟಿ ಜಾಹ್ನವಿ ಅವರ ಈ ವಿಡಿಯೋ ಕೂಡ ಸಕತ್​ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಸದ್ಯ ನಟಿ ಜಾಹ್ನವಿ ಕಪೂರ್​, ಬಾಯ್​ಫ್ರೆಂಡ್​  ಶಿಖರ್​ ಪಹರಿಯಾ (Shikhar Pahariya) ಜೊತೆ ಸಕತ್​ ಸದ್ದು ಮಾಡುತ್ತಿದ್ದಾರೆ.  ಕದ್ದುಮುಚ್ಚಿ ಇವರಿಬ್ಬರ  ಮದ್ವೆಯಾಗೋಯ್ತು ಎಂದು ಕಳೆದ ತಿಂಗಳು ಭಾರಿ ಸುದ್ದಿಯಾಗಿತ್ತು.   ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ  ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು  ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.  ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.  

ಅಂದಹಾಗೆ,  ಶ್ರೀದೇವಿ ಪುತ್ರಿ  ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ  ಈಕೆ ಉದ್ಯಮಿ ಶಿಖರ್​ ಪಹರಿಯಾ (Shikhar Pahariya) ಜೊತೆ ಸುತ್ತಾಟ ಮಾಡುತ್ತಿದ್ದಾರೆ. ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​  ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು.  

ಬಾಯ್​ಫ್ರೆಂಡ್​ ಜೊತೆ ಮತ್ತೆ ಜಾಹ್ನವಿ ಟೆಂಪಲ್​ ರನ್​: ಏನಮ್ಮಾ ನಿನ್​ ಕಥೆ ಅಂತಿದ್ದಾರೆ ಫ್ಯಾನ್ಸ್​!

ಕೆಲ ತಿಂಗಳ ಹಿಂದಷ್ಟೇ  ಜಾಹ್ನವಿ ಕಪೂರ್​ ಹಾಫ್​ ಸ್ಯಾರಿ ತೊಟ್ಟು ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಭೇಟಿ ಕೊಟ್ಟಿದ್ದರು. ಅದಾದ ಬಳಿಕ ಕೆಲವು ದೇವಾಲಯಗಳಲ್ಲಿ ಜೋಡಿ ಕಂಡುಬಂದಿತ್ತು. ಒಟ್ಟಿಗೇ ಕುಳಿತು ದಂಪತಿಯಂತೆ ಪೂಜೆಯನ್ನೂ ನೆರವೇರಿಸಿದ್ದರು. ಕಳೆದ ಬಾರಿ ತಿರುಪತಿಗೆ ಹೋಗಿದ್ದಾಗ  ಅವರ ಬೆರಳಿನಲ್ಲಿ ವಜ್ರದ ಉಂಗುರ   ಎಲ್ಲರ ಕಣ್ಣು ಕುಕ್ಕಿಸಿತ್ತು. ಜಾಹ್ನವಿ ಅವರು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುವ ಸಮಯದಲ್ಲಿ ಈ ವಜ್ರದ ಉಂಗುರ ಎಲ್ಲರ ಕಣ್ಣಿಗೆ ಬಿದ್ದಿದ್ದು, ಅದರ ಬಗ್ಗೆ ಸಕತ್​ ಸುದ್ದಿಯಾಗಿತ್ತು.  ಶಿಖರ್​ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್​ಮೆಂಟ್​ ಆಯ್ತಾ ಎಂದು ಸುದ್ದಿಯಾಗಿತ್ತು.   

ಇದೀಗ ನಟಿಗೆ ಹುಷಾರು ಇಲ್ಲದೇ ಇರುವ ವಿಡಿಯೋ ನೋಡಿದ ತರ್ಲೆ ನೆಟ್ಟಿಗರು ಬಾಯ್​ಫ್ರೆಂಡ್​ ವಿಷಯವನ್ನು ಎಳೆದು ತಂದಿದ್ದಾರೆ. ಹೀಗೆಲ್ಲಾ ಊರೂರು ಸುತ್ತತ್ತಾ ಇದ್ದರೆ ಇನ್ನೇನು ಆಗುತ್ತೆ ಎಂದು ಕೇಳಿದರೆ, ಮತ್ತೆ ಕೆಲವರು ಸದಾ ಬಾಯ್​ಫ್ರೆಂಡ್ ಜೊತೆ ಇರುತ್ತಿ, ಹುಷಾರಮ್ಮಾ ಎಂದು ನಟಿಯ ಕಾಲೆಳೆದಿದ್ದಾರೆ. ಬಾಯ್​ಫ್ರೆಂಡ್​ಗೂ ಶೀತ ಹಚ್ಚಿಸಬೇಡ ಎಂದು ತಮಾಷೆ ಮಾಡಿದ್ದಾರೆ. ಇನ್ನು ಹಲವರು ಯಾರಿಗೂ ಆಗದ್ದು ನಟಿಗೆ ಆಗಿಬಿಟ್ಟಿದೆ, ಪಾಪ ಎಂದು ತಮಾಷೆ ಮಾಡುತ್ತಿದ್ದರೆ, ಮತ್ತೆ ಕೆಲವರು ಇಂಥ ವಿಡಿಯೋಗಳು ವೈರಲ್​ ಆಗುತ್ತಿರುವುದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಆದರೆ ಜಾಹ್ನವಿ ಫ್ಯಾನ್ಸ್​ ಮಾತ್ರ ಹುಷಾರಮ್ಮಾ, ಜಾಗೃತೆ, ಆರೋಗ್ಯದ ಬಗ್ಗೆ ಕಾಳಜಿ ತೋರು ಎಂದು ಕಮೆಂಟ್​ ಮಾಡುತ್ತಿದ್ದಾರೆ. 

ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡ್ತಿದ್ದಾಗ್ಲೇ ರಣವೀರ್​ ಪ್ಯಾಂಟ್​ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?