ನೀಲಿ ಲೋಕದಲ್ಲಿ ಸರಣಿ ದುರಂತ: ಹೃದಯಾಘಾತದ ಬಳಿಕ ಕೋಮಾಗೆ ಜಾರಿದ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌

Published : Mar 12, 2024, 03:57 PM ISTUpdated : Mar 12, 2024, 03:59 PM IST
ನೀಲಿ ಲೋಕದಲ್ಲಿ ಸರಣಿ ದುರಂತ: ಹೃದಯಾಘಾತದ ಬಳಿಕ ಕೋಮಾಗೆ ಜಾರಿದ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌

ಸಾರಾಂಶ

ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ವಾಷಿಂಗ್ಟನ್‌: ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರವಷ್ಟೇ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್‌ ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅಷ್ಟರಲ್ಲೇ ಎಮಿಲಿ ಅಸ್ವಸ್ಥರಾಗಿರುವ ವಿಷಯ ಗೊತ್ತಾಗಿದೆ.

ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ನೀಲಿ ಚಿತ್ರಗಳ ತಾರೆ ಎಮಿಲಿ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು 25 ವರ್ಷದ ನಟಿಯ ತಂದೆ ಹೇಳಿದ್ದಾರೆ. ಆಕೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ, ಆಕೆ ವೆಂಟಿಲೇಟರ್‌ ಸಹಾಯದಲ್ಲಿದ್ದು, ಕೆಟ್ಟ ಕ್ಷಣಗಳನ್ನು ಎದುರಿಸಲು ಸಿದ್ಧರಾಗುವಂತೆ ಅವರು ಎಮಿಲಿ ವಿಲ್ಲಿಸ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ವಿಪರೀತ ಮಾದಕ ವಸ್ತುಗಳ ಸೇವನೆಯಿಂದ ಹೃದಯಾಘಾತ ಸಂಭವಿಸಿದೆ. ಆಕೆ ಈಗ ಕೋಮಾಕ್ಕೆ ಜಾರಿದ್ದಾರೆ. ಸದ್ಯಕ್ಕೆ ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿರುವ ವಿಲ್ಲಿಸ್‌ನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಸಿದ್ಧ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ಶವವಾಗಿ ಪತ್ತೆ, 26ನೇ ವಯಸ್ಸಿಗೆ ಸಾವು ಅಭಿಮಾನಿಗಳಿಗೆ ಆಘಾತ

ಫೆಬ್ರವರಿಯಲ್ಲಿ ಎಮಿಲಿ ವಿಲ್ಲೀಸ್‌ಗೆ ಹೃದಯಾಘಾತವಾಗಿತ್ತು. ರಿಹಬಿಲಿಟೇಷನ್ ಸೆಂಟರ್‌ನಲ್ಲಿ ಇದ್ದಾಗ ಆಕೆಗೆ ಹೃದಯಾಘಾತ ಸಂಭವಿಸಿತ್ತು. ಆಕೆಗೆ ನೀಡಿದ ಡ್ರಗ್‌ ಓವರ್ ಡೋಸೇಜ್‌ನಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದರು.  ಆದರೆ ಪ್ರಯೋಗಾಲಯದ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಆಕೆಯ ತಂದೆ ಹೇಳಿದ್ದಾರೆ. ಎಮಿಲಿ 8 ದಿನಗಳ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರವನ್ನು ಸೇರಿದ್ದರು. ಸ್ವಲ್ಪ ದಿನಗಳ ಹಿಂದಷ್ಟೇ ಎಮಿಲಿ ವಿಲ್ಲೀಸ್ ಸೋದರ ಆಕೆಯ ಚಿಕಿತ್ಸೆಗೆ ನೆರವಾಗಲು ಗೋ ಫಂಡ್ ಮೀ ಪೇಜ್ ಮೂಲಕ ಖಾತೆ ತೆರೆದು ನೆರವು ಕೇಳಿದ್ದರು.  ಎರಡು ವರ್ಷಗಳ ಹಿಂದೆ ಆಕೆ ಅಡಲ್ಟ್ ಚಿತ್ರೋದ್ಯಮದಿಂದ ಹೊರಗೆ ಬಂದಿದ್ದಳು. ಹಾಗೂ ಮನೋರಂಜನೆಯ ಇತರ ಫೀಲ್ಡ್‌ಗಳಲ್ಲಿ ಕೆಲಸ ಮಾಡಬೇಕು ಎಂದು ಬಯಸಿದ್ದಳು. 

ಈ ತಿಂಗಳ ಆರಂಭದಲ್ಲಿ  ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ತನ್ನ 26ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಳು, ಅಪಾರ್ಟ್‌ಮೆಂಟ್‌ನಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಳು. ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್  ಸಾವಿನ ನಂತರ ಈ ವರ್ಷ ವಯಸ್ಕ ಸಿನಿಮೋದ್ಯಮದಲ್ಲಿ ಮಿಸ್ ಸೋಫಿಯಾ ಅವರ ಮರಣವು ನಾಲ್ಕನೇ ಅಕಾಲಿಕ ಮರಣವಾಗಿದೆ. ಸೋಫಿಯಾ ಲಿಯೋನ್  ಸಾವು ಆತ್ಮಹತ್ಯೆಯೋ? ಕೊಲೆಯೋ ಎಂಬ ಬಗ್ಗೆ ಅನುಮಾನವಿದೆ.

36ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ನೀಲಿ ತಾರೆ..! ಜಾಗೃತವಾಗಿರಿ ಎಂದು ಕಣ್ಣೀರಿಟ್ಟ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?