ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡ್ತಿದ್ದಾಗ್ಲೇ ರಣವೀರ್​ ಪ್ಯಾಂಟ್​ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?

Published : Mar 12, 2024, 05:10 PM IST
ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡ್ತಿದ್ದಾಗ್ಲೇ ರಣವೀರ್​  ಪ್ಯಾಂಟ್​ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?

ಸಾರಾಂಶ

ಪಾರ್ಟಿಯಲ್ಲಿ ವಿಚಿತ್ರ ರೀತಿಯಲ್ಲಿ  ರಣವೀರ್​ ಡ್ಯಾನ್ಸ್​ ಮಾಡ್ತಿರುವಾಗ ಅವರು ಧರಿಸಿದ್ದ ಪ್ಯಾಂಟ್​ ಹರಿದೇ ಹೋಯ್ತು. ಆ ಸಮಯದಲ್ಲಿ ಪತ್ನಿ ದೀಪಿಕಾ ಮಾಡಿದ್ದೇನು?  

 ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟೆಸ್ಟ್ ಜೋಡಿ ಎಂದು ಕರೆಯಲಾಗುತ್ತದೆ.  ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ತೆರೆಯ ಮೇಲೆ ನೋಡಿದ ಅವರ ಪ್ರಣಯಕ್ಕಿಂತ ನಿಜ ಜೀವನದಲ್ಲಿ ಅವರು ಹೆಚ್ಚು ರೋಮ್ಯಾಂಟಿಕ್ ಆಗಿದ್ದಾರೆ.  ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ  ದೀಪಿಕಾ ಗರ್ಭಿಣಿ ಎಂದು  ವರದಿಯಾಗಿತ್ತು.  ಆದರೆ ಅದರ ಬಗ್ಗೆ ಸತ್ಯ ತಿಳಿದು ಬಂದಿರಲ್ಲಿ. ಆದರೆ ಬಳಿಕ  ಖುದ್ದು ನಟ ದಂಪತಿಯೇ ಅನೌನ್ಸ್​ ಮಾಡಿದ್ದಾರೆ.  ದೀಪಿಕಾ ಮತ್ತು ರಣವೀರ್​ ಸಿಂಗ್​ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.  ದೀಪಿಕಾ ಅವರಿಗೆ ಈಗ ಕೇವಲ ಎರಡು ತಿಂಗಳು.  ಅಂದಹಾಗೆ ಈ ಜೋಡಿ,  25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು.  ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.  

ಇದೀಗ ಈ ರೋಮ್ಯಾಂಟಿಕ್ ದಂಪತಿಯ ಹಳೆಯ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ಅವರು ರಣವೀರ್‌ನ ವರ್ತನೆಗಳ ದೀಪಿಕಾ ಪಡಕೋಣೆ  ವಿವರಿಸಿದ್ದಾರೆ.  ಮ್ಯೂಸಿಕ್ ಫೆಸ್ಟಿವಲ್ ವೇಳೆ ರಣವೀರ್ ಸಿಂಗ್ ಪ್ಯಾಂಟ್ ಹೇಗೆ ಹರಿದಿದೆ ಎಂದು ದೀಪಿಕಾ ಹೇಳಿದ್ದಾರೆ. 'ದಿ ಕಪಿಲ್ ಶರ್ಮಾ ಶೋ' ನಲ್ಲಿ ರಣವೀರ್‌ಗೆ ಸಂಬಂಧಿಸಿದ ಘಟನೆಯನ್ನು ವಿವರಿಸಿದ್ದಾರೆ ದೀಪಿಕಾ.  ನಾವು ಪಾರ್ಟಿಯೊಂದಕ್ಕೆ ಹೋಗಿದ್ವಿ.  ರಣವೀರ್ ಸಿಂಗ್ ಆಗ ಸಡಿಲವಾದ ಪ್ಯಾಂಟ್ ಧರಿಸಿದ್ದರು. ಅಲ್ಲಿಗೆ ಹೋದ ನಂತರ ವಿಚಿತ್ರವಾದ ಡ್ಯಾನ್ಸ್ ಸ್ಟೆಪ್ಸ್ ಹಾಕುತ್ತಿದ್ದರು. ಅವರು ಪಾರ್ಟಿಯಲ್ಲಿ ಹಾಗೆನೇ. ಚಿತ್ರ-ವಿಚಿತ್ರವಾದ ಸ್ಟೆಪ್​ ಹಾಕೋದು ಎಂದರೆ ಖುಷಿ. ಹೀಗೆ ವಿಚಿತ್ರ ಸ್ಟೆಪ್​ ಹಾಕ್ತಿದ್ದ ಸಂದರ್ಭದಲ್ಲಿ  ಇದ್ದಕ್ಕಿದ್ದಂತೆ ಪ್ಯಾಂಟ್ ಮಧ್ಯದಲ್ಲಿ ಹರಿದೇ ಹೋಯ್ತು. ಎಲ್ಲರೂ ಡ್ಯಾನ್ಸ್​ ಮಾಡುವ ಖುಷಿಯಲ್ಲಿ ಇದ್ದರು. ಆಗ ನನಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ ಎಂದು ದೀಪಿಕಾ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್​: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್​

ನಾನು ನನ್ನ ಬ್ಯಾಗ್​ನಲ್ಲಿ ಸದಾ ಸೂಜಿ ಮತ್ತು ದಾರ ಇಟ್ಟುಕೊಂಡಿರುತ್ತೇನೆ. ಅದು ಈಗ ಉಪಯೋಗಕ್ಕೆ ಬಂತು ಎಂದ ದೀಪಿಕಾ,  ನಾನು ಬೇಗನೆ ನನ್ನ ಚೀಲದಿಂದ ಸೂಜಿ ಮತ್ತು ದಾರವನ್ನು ಹೊರತೆಗೆದು ಅವನ ಪ್ಯಾಂಟ್ ಅನ್ನು ಹೊಲಿದೆ.  ಅಲ್ಲಿ ಜನರು ಡ್ಯಾನ್ಸ್ ಮಾಡುತ್ತಿದ್ದರೆ ನಾನು ಹೊಲಿಯುವುದರಲ್ಲಿ ಬಿಜಿಯಾಗಿದ್ದೆ. ಪುಣ್ಯಕ್ಕೆ ಯಾರಿಗೂ ಈ ವಿಷಯ ತಿಳಿಯಲಿಲ್ಲ. ಒಟ್ಟಿನಲ್ಲಿ ರಣವೀರ್​ ಮಾನ ಕಾಪಾಡಿದಂತಾಯ್ತು ಎಂದು ಜೋರಾಗಿ ನಕ್ಕಿದ್ದಾರೆ.  ಆಗ ಕಪಿಲ್​ ಶರ್ಮಾ ಅವರು, ರಣವೀರ್ ಸಿಂಗ್ ಅದೃಷ್ಟವಂತ ಪತಿ ಬಿಡಿ ಎಂದು ತಮಾಷೆ ಮಾಡಿದ್ದಾರೆ.

 ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವಿನ ಸಂಬಂಧ 'ರಾಮಲೀಲಾ' ಚಿತ್ರದ ಮೂಲಕ ಪ್ರಾರಂಭವಾಯಿತು. ಶೂಟಿಂಗ್ ವೇಳೆ ಇಬ್ಬರೂ ಹತ್ತಿರ ಬಂದು ನಂತರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಚಿತ್ರದ ನಂತರ ಇಬ್ಬರೂ ಜೊತೆಯಾಗಿ ಹಲವು ಸಿನಿಮಾ ಮಾಡಿದ್ದಾರೆ. ಈ ವೇಳೆ ಅವರಿಬ್ಬರ ಪ್ರೀತಿಯೂ ಚಿಗುರೊಡೆದಿತ್ತು. ಇಬ್ಬರೂ 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಇವರಿಬ್ಬರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿವೆ. ಮದುವೆಯ ನಂತರ ಇಬ್ಬರೂ ಈಗ '83' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಇಬ್ಬರೂ ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರದಿಂದ ಗ್ಯಾಪ್​ ತೆಗೆದುಕೊಳ್ಳಲಿದ್ದಾರಾ ನೋಡಬೇಕಿದೆ. 

ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್​ ಆಗ್ತಿದ್ದಂತೆಯೇ ಮಗುವಿನ ಬಿಗ್​ ಅಪ್​ಡೇಟ್​ ನೀಡಿದ ರಣವೀರ್​ ಸಿಂಗ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?