ಮೂರು ದಿನಗಳ ಚಿಕಿತ್ಸೆ ಬಳಿಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಸಲಿಗೆ ಅವರಿಗೆ ಆಗಿದ್ದೇನು? ತಂದೆ ಬೋನಿ ಕಪೂರ್ ಹೀಗೆ ಮಾಹಿತಿ ನೀಡಿದ್ದಾರೆ...
ಮೂರು ದಿನಗಳ ಹಿಂದೆ ಬಾಲಿವುಡ್ ನಟಿ ದಿಢೀರ್ ಎಂದು ಆಸ್ಪತ್ರೆಗೆ ದಾಖಲಾಗಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ದುಬಾರಿ ಬಟ್ಟೆ ತೊಟ್ಟು, ಭಾರಿ ಮಿಂಚಿದ್ದ ನಟಿ ಏಕಾಏಕಿಯಾಗಿ ಆಸ್ಪತ್ರೆಗೆ ದಾಖಲಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಮದುವೆಯ ಮುನ್ನಾ ದಿದನ ಚಿನ್ನದ ಬಣ್ಣದ ಲೆಹೆಂಗಾ ಧರಿಸಿದ್ದ ಜಾಹ್ನವಿ ಕಪೂರ್ ಮದುಮಗಳಂತೆ ಕಂಗೊಳಿಸಿದ್ದರೆ, ಮರುದಿನ ವಜ್ರದ ಹರಳುಗಳುಳ್ಳ ಉಡುಗೆಯನ್ನು ಧರಿಸಿ ಎಲ್ಲರ ಕಣ್ಣು ಕುಕ್ಕಿಸಿದ್ದರು. ಇದಾದ ಬಳಿಕ ದಿಢೀರ್ ಎಂದು ಆಸ್ಪತ್ರೆಗೆ ದಾಖಲಾದರು. ಫುಡ್ ಪಾಯಿಸನ್ ಆಗಿದೆ ಎಂದು ವೈದ್ಯರು ಹೇಳಿದ್ದ ಕಾರಣ, ಅಂಬಾನಿ ಮದುವೆಯಲ್ಲಿಯೇ ಊಟ ಮಾಡಿ ಈ ರೀತಿ ಆಗಿದೆ ಎಂದು ಕೆಲವು ಕಿಡಿಗೇಡಿಗಳು ಸುದ್ದಿಯನ್ನೂ ಹರಿಬಿಟ್ಟಿದ್ದರು. ಐಷಾರಾಮಿ ಮದುವೆಯನ್ನು ವಿರೋಧಿಸುವವರು ಇದೇ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿಯೂ ವ್ಯಾಪಕವಾಗಿ ಪ್ರಚಾರ ಮಾಡಿದರು.
ಇದೀಗ ಮೂರು ದಿನಗಳ ಸುದೀರ್ಘ ಟ್ರೀಟ್ಮೆಂಟ್ ಬಳಿಕ ನಟಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅಷ್ಟಕ್ಕೂ ನಟಿಗೆ ಏನು ಆಯಿತು ಎಂದು ಖುದ್ದು ಅವರ ತಂದೆ ಬೋನಿ ಕಪೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾದ ಪ್ರಚಾರಕ್ಕಾಗಿ ಜಾಹ್ನವಿ ದೇಶಾದ್ಯಂತ ಓಡಾಟ ನಡೆಸಿದ್ದಳು. ಇದಾದ ಬಳಿಕ ಮುಂಬರುವ ಉಲ್ಜ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲೂ ಸಾಕಷ್ಟು ಬಿಜಿಯಾಗಿದ್ದಾಳೆ. ಇದರಿಂದ ತುಂಬಾ ಬಳಲಿದ್ದಳು. ಬಳಿಕ ಅನಂತ್ ಅಂಬಾನಿ ಮದುವೆಯಲ್ಲಿಯೂ ಪಾಲ್ಗೊಂಡಳು. ಆಗಲೇ ಅವಳು ಸಾಕಷ್ಟು ಬಳಲಿದ್ದಳು. ನಂತರ ಕಾರ್ಯಕ್ರಮವೊಂದಕ್ಕೆ ಹೋಗುವಾಗ ಏರ್ಪೋರ್ಟ್ನಲ್ಲಿ ಆಹಾರ ಸೇವನೆ ಮಾಡಿದಳು. ಅಲ್ಲಿ ತಿಂಡಿ ತಿಂದ ಬಳಿಕ ಎಚ್ಚರ ತಪ್ಪಿದಳು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಹೇಳಿದರು ಎಂದಿದ್ದಾರೆ ಬೋನಿ ಕಪೂರ್.
ಒಹೊ... ಮೂರೂ ಬಿಟ್ಟವರಿಗೆ ಇದು ಬೇರೆ ಗೊತ್ತಾಗತ್ತಾ? ಜಾಹ್ನವಿ ಕಪೂರ್ ಮಾತಿಗೆ ಇನ್ನಿಲ್ಲದ ಟ್ರೋಲ್
ಈಗ ಜಾಹ್ನವಿ ಆರೋಗ್ಯ ಸುಧಾರಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜಾಹ್ನವಿ ತಂಗಿ ಆಕೆಯನ್ನು ನೋಡಿಕೊಳ್ಳುತ್ತಿದ್ದಾಳೆ ಎಂದಿದ್ದಾರೆ. ಅಂದಹಾಗೆ ನಟಿಯ ಮಿಸ್ಟರ್ ಅಂಡ್ ಮಿಸೆಸ್ ಮಹಿ ಈಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜುಲೈ 15 ರಂದು ಉಲ್ಜ್ ಚಿತ್ರವೂ ಬಿಡುಗಡೆಗೊಂಡಿದೆ ಅದು ಕೂಡ ಒಂದು ಮಟ್ಟಿನ ಯಶಸ್ಸು ಕಾಣುತ್ತಿದೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಸಾಕಷ್ಟು ಹಾಟ್ ಬಟ್ಟೆ ತೊಟ್ಟು ಜಾಹ್ನವಿ ಟ್ರೋಲ್ ಆಗುತ್ತಲೇ ಇದ್ದಾರೆ. ಚಿತ್ರ ನಟಿಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್ ನಟಿಯರು ಇಂದು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಇದೇ ಸಾಲಿಗೆ ಜಾಹ್ನವಿಯೂ ಸೇರುತ್ತಿದ್ದಾರೆ. ಶ್ರೀದೇವಿ ಪುತ್ರಿಯಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಕೆಲವರು ನಟಿಗೆ ಹೇಳುತ್ತಲೇ ಬಂದಿದ್ದಾರೆ. ಕೆಲ ದಿನಗಳ ಹಿಂದೆ ತುಂಡುಡುಗೆ ತೊಟ್ಟಿದ್ದ ನಟಿ, ಅದರ ಫೋಟೋ ತೆಗೆಯಲು ಬಂದ ಪಾಪರಾಜಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಈ ರೀತಿಯ ಫೋಟೋ ತೆಗೆದು ಮಾರಾಟ ಮಾಡಿದರೆ ಅವರಿಗೆ ಸಕತ್ ದುಡ್ಡು ಬರುತ್ತದೆ. ಅದಕ್ಕೇ ನಮ್ಮ ಹಿಂದೆ ಬರುತ್ತಾರೆ ಎಂದಿದ್ದರು. ಇದೇ ವೇಳೆ ಚಿತ್ರದ ಪ್ರಮೋಷನ್ ಇದ್ದರೆ ನಾವೇ ಅವರನ್ನು ದುಡ್ಡು ಕೊಟ್ಟು ಕರೆಸುತ್ತೇವೆ. ಇಲ್ಲದಿದ್ದರೆ ನಮ್ಮ ಹಿಂದೆ ಅವರು ಬಿದ್ದು, ಫೋಟೋ, ವಿಡಿಯೋ ಮಾಡಿ ಸಾಕಷ್ಟು ಹಣ ಗಳಿಸುತ್ತಾರೆ ಎಂದಿದ್ದರು. ದುಡ್ಡು ಕೊಟ್ಟು ಕರೆಸುವಾಗ ಪಾಪರಾಜಿಗಳು ಬೇಕು, ಅವರಾಗೇ ಬಂದರೆ ಬೇಡ ಎಂದೆಲ್ಲಾ ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದರು. ಎಲ್ಲರೂ ನೋಡಲಿ ಎನ್ನುವ ಕಾರಣಕ್ಕೆ ದೇಹ ಪ್ರದರ್ಶನ ಮಾಡಿದರೆ, ಅದರ ಫೋಟೋ ತೆಗೆಯಬಾರದು ಎಂದರೆ ಯಾವ ನ್ಯಾಯ ಎಂದು ನಟಿಯನ್ನು ಪ್ರಶ್ನಿಸಿದ್ದರು. ಒಟ್ಟಿನಲ್ಲಿ ಜಾಹ್ನವಿ ಸದಾ ಸುದ್ದಿ ಮಾಡುತ್ತಲೇ ಇದ್ದಾರೆ.
ಜಿಮ್, ವರ್ಕ್‌ಔಟ್ ಇಲ್ಲದೇ ಮಾಧವನ್ 21 ದಿನಗಳಲ್ಲಿ ತೂಕ ಇಳಿಸಿಕೊಂಡದ್ದು ಹೇಗೆ? ನಟನಿಂದ ಟಿಪ್ಸ್