ಶರತ್ ಬಾಬು ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಲಾಸಿ ಮನೆ, ವಿಲ್ಲಾ, ಅಪಾರ್ಟ್‌ಮೆಂಟ್ ಹಾಗೂ ಹಲವು ಕಂಪನಿಗಳಲ್ಲಿ ಪಾಲುದಾರಿಕೆಯನ್ನು ಶರತ್ ಬಾಬು ಹೊಂದಿದ್ದಾರಂತೆ.
ಬೆಂಗಳೂರು: ಸ್ಟಾರ್ ನಟ ಶರತ್ ಬಾಬು ನಿಧನರಾಗಿ ವರ್ಷದ ಮೇಲಾಗಿದೆ. ಕನ್ನಡ, ತಮಿಳು, ಮಲಯಾಳಂ, ತೆಲಗು ಹಾಗೂ ಹಿಂದಿ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಶರತ್ ಬಾಬು ಅಪಾರ ಆಸ್ತಿಯನ್ನು ಮಾಡಿಕೊಂಡಿದ್ದರು. ಯಾವುದೇ ವಾರಸುದಾರರಿಲ್ಲದ ಶರತ್ ಬಾಬು ಆಸ್ತಿ ಯಾರ ಪಾಲಾಗಿದೆ ಎಂಬುದರ ಬಗ್ಗೆ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ. ಶರತ್ ಬಾಬು ಎರಡು ಮದುವೆಯಾಗಿದ್ದರೂ ವಿಚ್ಛೇಧನ ಪಡೆದುಕೊಂಡಿದ್ದಾರೆ. ಅಂತಿಮ ಕಾಲದಲ್ಲಿ ಒಂಟಿಯಾಗಿ ಶರತ್ ಬಾಬು ಜೀವನ ಕಳೆದಿದ್ದರು. ಇಷ್ಟು ಮಾತ್ರವಲ್ಲದೇ ಶರತ್ ಬಾಬು ಕೆಲ ನಟಿಯರ ಜೊತೆ ಸಂಬಂಧ ಹೊಂದಿದ್ದರು ಎಂಬ ಸುದ್ದಿಗಳು ಸಿನಿ ಅಂಗಳದಲ್ಲಿ ಕೇಳಿ ಬಂದಿದ್ದವು. ಈ ಕಾರಣಕ್ಕಾಗಿಯೇ ಎರಡು ಮದುವೆಯಾದರೂ ಕೊನೆಯವರೆಗೂ ಉಳಿಯಲಿಲ್ಲ ಎಂಬ ಮಾತುಗಳು ಕೇಳಿದ್ದುಂಟು.
1970ರಲ್ಲಿ ಸಿನಿಮಾ ಅಂಗಳಕ್ಕೆ ಕಾಲಿಟ್ಟ ಶರತ್ ಬಾಬು, ಸೌತ್ ಇಂಡಸ್ಟ್ರಿಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ವರ್ಷ ಬೆಂಗಳೂರಿನಲ್ಲಿಯೇ ನೆಲೆಸಿದ್ದ ಶರತ್ ಬಾಬು ನಂತ್ರ ಚೆನ್ನೈನಲ್ಲಿ ನೆಲೆಯೂರಿದ್ದರು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ರಜನಿಕಾಂತ್ ಸೇರಿದಂತೆ ಹಲವು ಅತ್ಯಾಪ್ತರನ್ನು ಹೊಂದಿರುವ ಕಾರಣ ಶರತ್ ಬಾಬು ಚೆನ್ನೈಗೆ ಶಿಫ್ಟ್ ಆಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯಲ್ಲಿಯೂ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.
1971ರಲ್ಲಿ ರಮಾ ಪ್ರಭಾ ಜೊತೆ ಮದುವೆ
ಶರತ್ ಬಾಬು 1971ರಲ್ಲಿ ಹಾಸ್ಯ ಕಲಾವಿದೆ ರಮಾ ಪ್ರಭಾ ಜೊತೆ ಶರತ್ ಬಾಬು ಮದುವೆಯಾಗಿದ್ದರು. ರಮಾ ಪ್ರಭಾ ಸಹ ಚಿರಪರಿಚಿತ ಕಲಾವಿದೆಯಾಗಿದ್ದು, ತಮಿಳು, ತೆಲಗು ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾದ 17 ವರ್ಷಕ್ಕೆ ಅಂದ್ರೆ 1988ರಲ್ಲಿ ರಮಾ ಪ್ರಭಾ ಮತ್ತು ಶರತ್ ಬಾಬು ಪರಸ್ಪರ ಸಮ್ಮತಿ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು.
ಡಿವೋರ್ಸ್ ಪಡೆದ ಎರಡು ವರ್ಷಕ್ಕೆ 1990ರಲ್ಲಿ ಎಂಎನ್ ನಂಬಿಯಾರ್ ಪುತ್ರಿ ಸ್ನೇಹಲತಾರನ್ನು ಶರತ್ ಬಾಬು ಮದುವೆಯಾಗುತ್ತಾರೆ. ಆದ್ರೆ ಈ ಸಂಬಂಧವೂ ಡಿವೋರ್ಸ್‌ನಲ್ಲಿ ಅಂತ್ಯವಾಗಿದೆ. 2011ರಲ್ಲಿ ಶರತ್ ಬಾಬು-ಸ್ನೇಹಲತಾ ವಿಚ್ಚೇದನ ಪಡೆದುಕೊಂಡಿದ್ದಾರೆ. ಎರಡು ಮದುವೆಯಾದರೂ ಶರತ್ ಬಾಬುಗೆ ಮಕ್ಕಳಿಲ್ಲ.
ನೇಸರನ ಹೊಂಬೆಳಕಿನಲ್ಲಿ ಹೂ ಕಟ್ಟುತ್ತಾ ಕುಳಿತ ಗಟ್ಟಿಮೇಳದ ಅದಿತಿಯ ನೋಟಕ್ಕೆ ಸೋತ ಸೌಂದರ್ಯ ಆರಾಧಕರು
ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ನಟ
ಶರತ್ ಬಾಬು ತಮ್ಮ ಅಂತಿಮ ಕಾಲದಲ್ಲಿ ಸೆಪ್ಸಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆ ದಾಖಲಾಗಿದ್ದ ಶರತ್ ಬಾಬು ಚಿಕಿತ್ಸೆ ಫಲಕಾರಿಯಾಗದೇ 2023ರ ಮೇ 22ರಂದು ಕೊನೆಯುಸಿರೆಳೆದಿದ್ದರು. ಕೆಲ ವರದಿಗಳ ಪ್ರಕಾರ, ಶರತ್ ಬಾಬು ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಲಾಸಿ ಮನೆ, ವಿಲ್ಲಾ, ಅಪಾರ್ಟ್‌ಮೆಂಟ್ ಹಾಗೂ ಹಲವು ಕಂಪನಿಗಳಲ್ಲಿ ಪಾಲುದಾರಿಕೆಯನ್ನು ಶರತ್ ಬಾಬು ಹೊಂದಿದ್ದಾರಂತೆ. ಹಾಗಾಗಿ ಈ ಎಲ್ಲಾ ಆಸ್ತಿ ಯಾರ ಪಾಲಾಗುತ್ತೆ ಎಂಬುದರ ಬಗ್ಗೆ ಪ್ರಶ್ನೆಗಳು ಮೂಡಿವೆ.
ಉಯಿಲು ಬರೆದಿಟ್ಟಿದ್ದೀರಾ ಶರತ್ ಬಾಬು?
ಶರತ್ ಬಾಬು ಸೋದರನ ಮಕ್ಕಳನ್ನೇ ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಹೀಗಾಗಿ ಎಲ್ಲಾ ಆಸ್ತಿ ಸೋದರರ ಮಕ್ಕಳಿಗೆ ಹಂಚಿಕೆ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಆಸ್ತಿಯ ಕುರಿತು ಶರತ್ ಬಾಬು ಸೋದರ ಪ್ರತಿಕ್ರಿಯೆ ನೀಡಿದ್ದರು. ಶರತ್ ಬಾಬು ನಮ್ಮ ಒಡಹುಟ್ಟಿದವರಲ್ಲಿ ನಾಲ್ಕನೇಯವರು. ತಂದೆಯ ಸ್ಥಾನದಲ್ಲಿ ನಿಂತು ನಮ್ಮೆಲ್ಲರನ್ನು ಶರತ್ ಬಾಬು ನೋಡಿಕೊಳ್ಳುತ್ತಿದ್ದರು. ನಾವೆಲ್ಲಾ ಸೋದರರು ಒಗ್ಗಟ್ಟಾಗಿದ್ದು, ಶರತ್ ಬಾಬು ಉಯಿಲು ಬರೆದಿಟ್ಟಿದ್ದರೆ ಯಾವುದೇ ತೊಂದರೆ ಇಲ್ಲ. ಯಾವುದೇ ಉಯಿಲು ಇಲ್ಲವಾದ್ರೆ ಕಾನೂನಿನ ಪ್ರಕಾರ ಕುಟುಂಬದ ಸದಸ್ಯರಿಗೆ ಆಸ್ತಿಯ ಒಡೆತನ ಹಂಚಿಕೆಯಾಗುತ್ತದೆ. ಇದು ನಮ್ಮ ಕುಟುಂಬದ ಆಂತರಿಕ ವಿಚಾರವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ಪತಿ ವೀರೇಂದ್ರ ಚೌಧರಿ ಹೇಳಿದ್ದೇನು?