ನೀರ್​ ದೋಸೆ ತಿಂದ್ರೆ ಪ್ರಭುದೇವ ಥರ ಡಾನ್ಸ್​ ಮಾಡ್ಬೋದು, ಕತ್ರಿನಾರಂತೆ ಸ್ಲಿಮ್​ ಆಗ್ಬೋದು! ನಟರ ಬಾಯಲ್ಲೇ ಕೇಳಿ

By Suchethana D  |  First Published Jul 21, 2024, 4:32 PM IST

ನೀರ್​ ದೋಸೆ ತಿಂದ್ರೆ ಪ್ರಭುದೇವ ಥರ ಡಾನ್ಸ್​ ಮಾಡ್ಬೋದು, ಕತ್ರಿನಾರಂತೆ ಸ್ಲಿಮ್​ ಆಗ್ಬೋದಂತೆ! ಬಾಲಿವುಡ್​ ಸ್ಟಾರ್​ಗಳ ಬಾಯಲ್ಲೇ ಕೇಳಿ... 
 


ನೀರು ದೋಸೆ ಇದೀಗ ಸಕತ್​ ಫೇಮಸ್​ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ತವರೂರಾಗಿರುವ ನೀರು ದೋಸೆಯನ್ನು ಮಲೆನಾಡಿನ, ಕರಾವಳಿಯ ಮನೆಮನೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಈಗೀಗ ನೀರುದೋಸೆ ತನ್ನ ಮೂಲಗುಣವನ್ನು ಕಳೆದುಕೊಳ್ಳುತ್ತಿದೆಯಾದರೂ, ಇದಕ್ಕೆ ಮೂಲತಃ ಬೇಕಾಗಿರುವುದು ತೆಂಗಿನಕಾಯಿ. ತೆಂಗಿನಕಾಯಿ ಹೆಚ್ಚಾಗಿ ಬಳಸಿ ನೀರು ದೋಸೆಯನ್ನು ತಯಾರು ಮಾಡುವ ಕಾರಣದಿಂದ ತೆಂಗಿನಕಾಯಿ ಹೆಚ್ಚಾಗಿ ಬೆಳೆಯುವ ಕರಾವಳಿ ಪ್ರದೇಶಗಳ ಮನೆಗಳಲ್ಲಿ ಇದನ್ನು ಮಾಡುವುದು ಹೆಚ್ಚು.  ದೋಸೆಹಿಟ್ಟಿಗೆ ನೀರು ಹೆಚ್ಚಾಗಿ ಹಾಕಿ ತಿಳುವಾಗಿ ದೋಸೆ ಮಾಡುವ ಕಾರಣದಿಂದಲೇ ಇದಕ್ಕೆ ನೀರು ದೋಸೆ ಎಂದು ಹೆಸರು. ಕಡಿಮೆ ಹಿಟ್ಟಿನಲ್ಲಿ ನೀರು ಹೆಚ್ಚಾಗಿ ಬಳಸಿ, ಇದನ್ನು ತಯಾರು ಮಾಡಲಾಗುತ್ತದೆ. ಕೊಬ್ಬರಿಯ ಚಟ್ನಿಯ ಜೊತೆ ಇದನ್ನು ಸವಿಯಲು ಕುಳಿತರೆ 10-15 ದೋಸೆಗಳನ್ನೂ ತಿನ್ನುವವರು ಇದ್ದಾರೆ.

ಈ ದೋಸೆ ಹೆಚ್ಚು ಫೇಮಸ್​ ಆಗಿದ್ದು, 2016ರಲ್ಲಿ ಬಿಡುಗಡೆಯಾದ ಜಗ್ಗೇಶ್​, ಹರಿಪ್ರಿಯಾ, ಸುಮನ್​ ರಂಗನಾಥ್​ ನಟನೆಯ ನೀರ್​ ದೋಸೆ ಸಿನಿಮಾದಿಂದಾಗಿ. ಆದರೆ ಕರ್ನಾಟಕದಲ್ಲಿ ಮಾತ್ರ ಪ್ರಚಲಿತವಿರುವ ಈ ದೋಸೆ ಇದೀಗ ಬಾಲಿವುಡ್​​ ಸೂಪರ್​ಸ್ಟಾರ್​ಗಳ ಬಾಯಲ್ಲೂ ನಲಿದಾಡುತ್ತಿದೆ. ವಿಚಿತ್ರ ಎನಿಸಿದರೂ ಇದು ಸತ್ಯ. ನೀರು ಎಂದರೇನು, ನೀರ್​ ದೋಸೆ ಎಂದರೇನು, ಅದು ಯಾವ ಭಾಷೆಯದ್ದು ಎನ್ನುವ ಅರ್ಥ ಗೊತ್ತಿಲ್ಲದ ಬಾಲಿವುಡ್​ ಸೆಲೆಬ್ರಿಟಿಗಳು ನೀರ್​ ದೋಸೆಯ ಗುಣಗಾನ ಮಾಡುತ್ತಿದ್ದಾರೆ. ಅದರ ಜೊತೆ ನೀರ್​ ದೋಸೆ ಎಂದು ಹೇಳಲಾಗುವ ದೋಸೆಯ ವಿಡಿಯೋ ಕೂಡ ವೈರಲ್​ ಆಗುತ್ತಿದೆ. ಅಸಲಿಗೆ ನೀರು ದೋಸೆ ಹಾಗೆ ಕಾಣಿಸುವುದಿಲ್ಲವಾದರೂ, ಅದನ್ನು ರೂಪಾಂತರ ಮಾಡಿ ಕೊತ್ತಂಬರಿ ಸೊಪ್ಪು, ಈರುಳ್ಳಿ ಎಲ್ಲಾ ಹಾಕಿರುವ ದೋಸೆಯನ್ನೇ ನೀರು ದೋಸೆ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ.

Tap to resize

Latest Videos

undefined

ಡೆಂಗ್ಯೂ ಹತ್ತಿರ ಸುಳಿಯದಂತೆ ಇಲ್ಲಿದೆ ದಿವ್ಯ ಔಷಧ: ಜ್ವರಕ್ಕೂ ರಾಮಬಾಣ- ವೈದ್ಯೆಯಿಂದ ಸುಲಭದ ಪರಿಹಾರ...

ಅಷ್ಟಕ್ಕೂ ಇಲ್ಲಿ ಕತ್ರಿನಾ ಕೈಫ್​  ಮತ್ತು ಸಲ್ಮಾನ್​ ಖಾನ್ ನೀರು ದೋಸೆಯ ಬಗ್ಗೆ ಮಾತನಾಡುವುದನ್ನು ಈ ವಿಡಿಯೋದಲ್ಲಿ ಕೇಳಬಹುದು. ಕಪಿಲ್​ ಶರ್ಮಾ ಷೋನಲ್ಲಿ ಮೊದಲಿಗೆ ನಟಿ ಕತ್ರಿನಾ ಕೈಫ್​, ನೀರು ದೋಸೆ ತುಂಬಾ ಹೆಲ್ದಿ ಫುಡ್​​ ಎಂದಿದ್ದಾರೆ. ಆಗ ಕೂಡಲೇ ಕಪಿಲ್​ ಶರ್ಮಾ ಅವರು, ದೋಸಾ ಗೊತ್ತು ಇದೇನು ನೀರ್​ ದೋಸಾ ಎಂದು ಕೇಳಿದ್ದಾರೆ. ಅದೇನು ಎಂದು ನಟಿಗೆ ಗೊತ್ತಿದ್ದರೆ ತಾನೆ? ನೀರ್​ ದೋಸಾ ಆರೋಗ್ಯಕರ ಎಂದಷ್ಟೇ ಹೇಳಿದ್ದಾರೆ. ಇದೇ ವೇಳೆ ಸಲ್ಮಾನ್​ ಖಾನ್​ ಕೂಡ ನೀರ್​ ದೋಸೆಯ ಬಗ್ಗೆ ಮಾತನಾಡಿರುವ ವಿಡಿಯೋ ಹಾಕಲಾಗಿದೆ. ಇದರಲ್ಲಿ ಸಲ್ಮಾನ್​ ಖಾನ್​, ನೀರ್ ದೋಸೆ ತಿನ್ನುವ ಮೂಲಕ ಪ್ರಭು ದೇವ ಅವರು ತಮ್ಮ ನೃತ್ಯವನ್ನು ಸುಧಾರಿಸಿಕೊಂಡಿದ್ದಾರೆ. ಅವರಂತೆಯೇ ಡಾನ್ಸ್​ ಮಾಡಬೇಕು ಎಂದರೆ ನೀರು ದೋಸೆ ತಿನ್ನಬೇಕು ಎಂದಿದ್ದಾರೆ.  
 
ಅಷ್ಟಕ್ಕೂ ನೀರು ದೋಸೆ ಬರೀ ಅಕ್ಕಿ ಮತ್ತು ಕಾಯಿಯಿಂದ ಮಾಡುವ ದೋಸೆಯಾಗಿದೆ.  ಅಕ್ಕಿಯ ಜೊತೆಯ ತೆಂಗಿನ ಕಾಯಿ ಹಾಕಿ ರುಬ್ಬಿ ಈ ದೋಸೆ ತಯಾರಿಸುತ್ತಾರೆ. ಬರೀ ಅಕ್ಕಿ ರುಬ್ಬಿ ಮಾಡುವ ದೋಸೆಗಿಂತ ಸ್ವಲ್ಪ ತೆಂಗಿನ ಕಾಯಿ ಹಾಕಿ ಮಾಡುವ ದೋಸೆ ಹೆಚ್ಚು ರುಚಿಕರವಾಗಿರುತ್ತದೆ. ಇದಕ್ಕಾಗಿ ಒಂದು ಕಪ್ ಅಕ್ಕಿಯನ್ನು ಸ್ವಲ್ಪ ಕಾಲ ನೆನೆಸಿ ಇಡಬೇಕು. ನಂತರ ನೀರು ಬಸಿದು ರುಬ್ಬಬೇಕು. ಅದಕ್ಕೆ ಅರ್ಧ ಕಪ್​  ತೆಂಗಿನಕಾಯಿಯನ್ನು ಸಹ ಸೇರಿಸಿ  ನುಣ್ಣಗೆ ಪೇಸ್ಟ್​  ಮಾಡಿದರೆ ಮುಗಿಯಿತು. ಇದಕ್ಕೆ ಸ್ವಲ್ಪ  ಉಪ್ಪು ತಿಳುವಾಗುಷ್ಟು ನೀರು ಸೇರಿಸಬೇಕು.  ನಂತರ ಬಿಸಿ ತವಾ ಮೇಲೆ ದೋಸೆ ಹಿಟ್ಟು  ತಿಳುವಾಗಿಯೇ ಹಾಕಬೇಕು.  ಅದನ್ನು ಒಂದು ಪ್ಲೇಟ್ ಬಳಸಿ ಮುಚ್ಚಿ ಮಧ್ಯಮ ಉರಿಯಲ್ಲಿ 1 ನಿಮಿಷ ಬೇಯಿಸಬೇಕು. ಒಂದೇ ಬದಿ ಬೇಯಿಸಿದರೆ ಸಾಕು. 

ಅರಬ್​ ದೇಶ ಲೆಬಿನಾನ್​ನಲ್ಲಿ ಅರಳಿದ ಕಮಲ! ಒಂದೇ ದಿನ 8 ಲಕ್ಷ ವ್ಯೂಸ್​ ಕಂಡ ಡಾ.ಬ್ರೋ ವಿಡಿಯೋದಲ್ಲೇನಿದೆ?

click me!