ಬಹುಭಾಷಾ ನಟಿ ಮೃಣಾಲ್ ಠಾಕೂರ್ ಕಲ್ಲಂಗಣಿ ಹಣ್ಣನ್ನು ತಿನ್ನುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಯುವಕರ ಬಾಯಲ್ಲಿ ನೀರು ಬಂತಂತೆ!
ಹಿಂದಿ, ತೆಲುಗು ಮತ್ತು ಮರಾಠಿ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಸಾಕಷ್ಟು ಹೆಸರು ಮಾಡಿದವರು ನಟಿ ಮೃಣಾಲ್ ಠಾಕೂರ್. ಹಿಂದಿಯ ಕುಂಕುಮ ಭಾಗ್ಯ ಸೀರಿಯಲ್ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಮೃಣಾಲ್ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅವರು ಮಾಡಿರುವುದಲ್ಲಿ ಹೆಚ್ಚಿನವು ಯಾವುವೂ ಅಷ್ಟು ಹಿಟ್ ಆಗಲಿಲ್ಲ. ಮೃಣಾಲ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕೆಲ ತಿಂಗಳ ಹಿಂದೆ ಅವರ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಾಣಲಿಲ್ಲ. ಆದರೆ ಅವರ ‘ಸೀತಾ ರಾಮಂ’ ಸಿನಿಮಾ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇವೆಲ್ಲವುಗಳ ನಡುವೆಯೇ ನಟಿ ಅಂಡಾಣು ಫ್ರೀಜ್ ಕುರಿತು ಮಾತನಾಡಿ ಸಾಕಷ್ಟು ಹಲ್ಚಲ್ ಸೃಷ್ಟಿಸಿದ್ದರು. ಹೌದು. ಮದುವೆಯಾಗದ ನಟಿ ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿ ಸಾಕಷ್ಟು ಸದ್ದು ಮಾಡಿದ್ದರು. ಇದಾಗಲೇ ಪ್ರಿಯಾಂಕಾ ಚೋಪ್ರಾ, ರಾಖಿ ಸಾವಂತ್, ಏಕ್ತಾ ಕಪೂರ್, ಉಪಾಸನಾ ಕಾಮನೇನಿ, ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಈ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇದೀಗ ಅವರ ಸಾಲಿಗೆ ಇನ್ನೋರ್ವ ನಟಿ ಮೃಣಾಲ್ ಠಾಕೂರ್ ಸೇರಿದ್ದಾರೆ.
ಹೌದು. ಕೆಲ ದಿನಗಳ ಹಿಂದಷ್ಟೇ ನಟಿ, ಎಗ್ ಫ್ರೀಜಿಂಗ್ ಕುರಿತು ಮಾತನಾಡಿದ್ದರು. ಈಗ ಈ ಕುರಿತು ಮಾತನಾಡಿದ್ದ ಮೃಣಾಲ್, ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದರು. ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂದೂ ಹೇಳಿದ್ದರು. ಇದೀಗ ಕಲ್ಲಂಗಡಿ ಹಣ್ಣು ತಿನ್ನುವ ಚಾಲೆಂಜ್ ತೆಗೆದುಕೊಂಡು ಎಲ್ಲರನ್ನೂ ನಗಿಸಿದ್ದಾರೆ. ಇವರು ಕಲ್ಲಂಗಣಿ ಹಣ್ಣು ತಿನ್ನುವ ಪರಿ ನೋಡಿ, ಯುವಕರು ಜೊಲ್ಲು ಸುರಿಸುತ್ತಿದ್ದಾರೆ! ಏಕೆಂದರೆ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ ನಟಿ, ಖುದ್ದು ಜೊಲ್ಲು ಸುರಿಸಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗಿದೆ. ಸದ್ಯ ಈ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.
ಅಂಬಾನಿ ಮದ್ವೇಲಿ ಕಿಮ್ ಕರ್ದಾಶಿಯಾನ್ ತೆರೆದ ಎದೆ ನೋಡಿ ಸಲ್ಮಾನ್ ಹೀಗ್ ಮಾಡೋದಾ? ವಿಡಿಯೋ ವೈರಲ್
ಇನ್ನು ಮೃಣಾಲ್ ಕುರಿತು ಹೇಳುವುದಾದರೆ, ಇವರು ನಟನೆ ಮಾತ್ರವಲ್ಲದೆ ಫ್ಯಾಷನ್ ವಿಚಾರದಲ್ಲೂ ಮುಂದು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಹಲವಾರು ರೀತಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಬಾಲಿವುಡ್‌ನ ಪ್ರಬುದ್ಧ ನಟಿಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಈಕೆ ಸದ್ಯಕ್ಕೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ನಟಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ತೆಲುಗಿಗೆ ಎಂಟ್ರಿ ಕೊಡುವುದಕ್ಕಿಂತ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇವರಿಗೆ ಅದ್ಭುತ ಎನ್ನುವಂತಹ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸಕ್ಸಸ್ ಕೂಡ ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಸದ್ಯ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಮೃಣಾಲ್ ಠಾಕೂರ್ ಕೂಡ ಒಬ್ಬರಾಗಿದ್ದಾರೆ.
ತಮ್ಮ ಖಿನ್ನತೆಯ ಕುರಿತು ಮಾತನಾಡಿದ್ದ ನಟಿ, ಸಿನಿಮಾವೊಂದರ ಪಾತ್ರಕ್ಕಾಗಿ ವೇಶ್ಯಾಗೃಹಕ್ಕೆ ಎರಡು ತಿಂಗಳು ವಾಸ್ತವ್ಯ ಹೂಡಿದ್ದರು. ಅಲ್ಲಾದ ಅನುಭವ ಈಕೆಯನ್ನು ಖಿನ್ನತೆಗೆ (Depression) ದೂಡಿತ್ತಂತೆ. 2018ರಲ್ಲಿ ಮೃಣಾಲ್ ಠಾಕೂರ್ 'ಲವ್ ಸೋನಿಯಾ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಯ ಪಾತ್ರ ತನ್ನ ತಂಗಿಯನ್ನು ಮಹಿಳಾ ಕಳ್ಳಸಾಗಣೆಯಿಂದ ರಕ್ಷಿಸುವುದಾಗಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ತಮ್ಮ ಪಾತ್ರದಲ್ಲಿ ನೈಜತೆ ಇರಬೇಕೆಂಬ ಉದ್ದೇಶದಿಂದ ಎರಡು ತಿಂಗಳು ವೇಶ್ಯಾಗೃಹದಲ್ಲಿ (Brothel) ಇದ್ದಿದ್ದಾಗಿ ಹೇಳಿಕೊಂಡಿದ್ದರು.
ಕಂಗನಾ ಸ್ನೇಹ ವಿವರಿಸುತ್ತಲೇ ಮದುವೆ ವಿಷಯ ತಿಳಿಸಿದ ತರುಣಿಯರ ಕ್ರಷ್ ಸಂಸದ ಚಿರಾಗ್ ಪಾಸ್ವಾನ್!