ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಾದಕ ನಟಿ ಮಮತಾ ಕುಲಕರ್ಣಿ ಇಸ್ಲಾಂಗೆ ಮತಾಂತರಗೊಂಡು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದು ಹೇಗೆ? ಈಗ ಕೋರ್ಟ್ ನೀಡಿರುವ ಆದೇಶ ಏನು?
ಮಮತಾ ಕುಲಕರ್ಣಿ ಎಂದರೆ ಸಾಕು, ಎಲ್ಲರ ಗಮನಕ್ಕೆ ಬರುವುದು 80-90ರ ದಶಕದಲ್ಲಿಯೇ ಹಾಟ್ ಅವತಾರದಿಂದ ಮತ್ತೇರಿಸಿದ ನಟಿ. ಮ್ಯಾಗಜೀನ್ ಒಂದಕ್ಕೆ ಆಗಲೇ ನಗ್ನ ಫೋಟೋಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಾಕೆ ಈಕೆ. 1993ರಲ್ಲಿ ಕನ್ನಡದಲ್ಲಿ ವಿಷ್ಣವರ್ಧನ ಅಭಿನಯದ ವಿಷ್ಣು ವಿಜಯದಲ್ಲಿ ನಟಿ ಕಾಣಿಸಿಕೊಂಡಿದ್ದರು. ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ನಟಿ ಭೂಗತ ಲೋಕಕ್ಕೆ ಸೇರಿದ್ದರು. ಬಳಿಕ ಇಸ್ಲಾಂಗೆ ಮತಾಂತರಗೊಂಡು ಡ್ರಗ್ಸ್ ಲೋಕದ ಒಳಗೆ ಹೊಕ್ಕರು. ದೇಶ-ವಿದೇಶಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುವ ಆರೋಪದ ಮೇಲೆ ಕೊನೆಗೂ ಸಿಕ್ಕಿಬಿದ್ದಿದ್ದರು. 2016ರಿಂದ ನಡೆಯುತ್ತಿರುವ ಈ ಪ್ರಕರಣದಲ್ಲಿ, ಸದ್ಯ ನಟಿಗೆ ಕೋರ್ಟ್ ರಿಲೀಫ್ ನೀಡಿದೆ. ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣ ರದ್ದತಿಗೆ ನಟಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಅವರ ಮನವಿಯನ್ನು ಈಗ ಪುರಸ್ಕರಿಸಿರುವ ಕೋರ್ಟ್, ವಿವರವಾದ ಆದೇಶ ಇನ್ನೂ ನೀಡಬೇಕಾಗಿದೆ ಎಂದಿದೆ.
ಅಷ್ಟಕ್ಕೂ ನಟಿ ಭೂಗತ ಲೋಕ ಸೇರಿದ್ದೆ ಕುತೂಹಲವಾದದ್ದು. ಅಷ್ಟಕ್ಕೂ ಬಾಲಿವುಡ್ ಭೂಗತ ಲೋಕದ ಹಿಡಿತದಲ್ಲಿ ಇರುವುದು ಹೊಸ ವಿಷಯವೇನಲ್ಲ. ಅದೂ 80-90ರ ದಶಕದಲ್ಲಿ ಬಾಲಿವುಡ್ನ ಅಣು ಅಣುವೂ ಭೂಗತ ಲೋಕದ ಮಾಫಿಯಾಗಳ ಹಿಡಿತದಲ್ಲಿತ್ತು. ಇದೇ ಸಮಯದಲ್ಲಿ ಮಮತಾ ಕುಲಕರ್ಣಿ ವಿಕ್ಕಿ ಗೋಸ್ವಾಮಿ ಅವರನ್ನು ಮದುವೆಯಾಗಿದ್ದರು. ಆದರೆ ಅದಾಗಲೇ ವಿಕ್ಕಿ ಅವರು, ಡ್ರಗ್ಸ್ ಮಾಫಿಯಾದಲ್ಲಿ ಬಹುದೊಡ್ಡ ಕುಖ್ಯಾತಿ ಗಳಿಸಿದ್ದರು. ಅವರನ್ನು ಯುಎಇ ಜೈಲಿನಲ್ಲಿಯೂ ಇರಿಸಲಾಗಿತ್ತು. 1997 ರಲ್ಲಿ ನಿಷೇಧಿತ ಮ್ಯಾಂಡ್ರಕ್ಸ್ 11.5 ಟನ್ ಗಳಷ್ಟು ಸಾಗಿಸುತ್ತಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. 25 ವರ್ಷ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
undefined
2012ರಲ್ಲಿ 52 ವರ್ಷ ವಯಸ್ಸಿನ ವಿಕ್ಕಿಯನ್ನು ಮಮತಾ ಮದುವೆಯಾಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಮತಾ ಮತಾಂತರಗೊಂಡು ಡ್ರಗ್ಸ್ ಲೋಕಕ್ಕೆ ಕೊಡುಗೆ ನೀಡುತ್ತಿರುವ ಆರೋಪ ಹೊತ್ತಿದ್ದಾರೆ. ಚಿತ್ರಲೋಕವನ್ನು ತ್ಯಜಿಸಿದರು. ಬಳಿಕ ಬಹು ಕೋಟಿ ಮಾದಕ ವಸ್ತು ಕಳ್ಳಸಾಗಣೆ ಜಾಲ ನಡೆಸುತ್ತಿರುವ ಆರೋಪದ ಮೇಲೆ ಮಮತಾ ಕುಲಕರ್ಣಿ ಅವರಿಗೆ ಸೇರಿರುವ 20 ಕೋಟಿ ರೂ.ಗಳ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. 2016ರಲ್ಲಿ ಸಿಕ್ಕಿಬಿದ್ದ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಡ್ರಗ್ಸ್ ಜಾಲ ಭೇದಿಸಿದ್ದ ವಿಶೇಷ ತಂಡ ಇದರಲ್ಲಿ ಮಮತಾ ಅವರ ಕೈವಾಡ ಇರುವುದನ್ನು ಅರಿತಿದ್ದರು. ಈ ಸಂದರ್ಭದಲ್ಲಿ ಮಮತಾ ಹಾಗೂ ಇತರ ಆರೋಪಿಗಳು ಕೀನ್ಯಾಕ್ಕೆ ಪರಾರಿಯಾಗಿದ್ದರು.
ಇದೇ ವೇಳೆ, ಅಮೆರಿಕ ಮತ್ತು ಆಫ್ರಿಕಾದಲ್ಲಿ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಮಮತಾ ಪತಿ ಗೋಸ್ವಾಮಿ ಕುರಿತು ತನಿಖೆಯಿಂದ ತಿಳಿದುಬಂದಿತ್ತು. ನಂತರ ಅವರನ್ನೂ ಅರೆಸ್ಟ್ ಮಾಡಲಾಗಿತ್ತು. ಇದಕ್ಕೂ ಮುನ್ನ ಅವರು ಪತ್ನಿಯ ಜೊತೆ ಕೀನ್ಯಾದಲ್ಲಿ ತಲೆ ಮರೆಸಿಕೊಂಡಿದ್ದರು. ಇಂಟರ್ ಪೋಲ್ ನೋಟಿಸ್ ಪಡೆದ ಬಳಿಕ ತನಗೆ ಅಪಾಯ ಎದುರಾಗಬಹುದು ಎಂದು ವಿಕ್ಕಿ ತನ್ನ ಜಾಲದ ವಿವರವನ್ನು ಪತ್ನಿ ಮಮತಾಗೆ ಹೇಳಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಮತಾರನ್ನು ದುಬೈ, ಸಿಂಗಪುರ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್ ಕ್ಲೈಂಟ್ ಜತೆ ಸಭೆ ನಡೆಸಲು ಕಳಿಸಿದ್ದರು ಎಂಬ ಮಾಹಿತಿ ಇದೆ. 2014ರಲ್ಲಿ ಈ ದಂಪತಿಯನ್ನು ಕೀನ್ಯಾದಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ಇಬ್ಬರ ವಿರುದ್ಧ ಹಲವು ಆರೋಪಗಳನ್ನು, ಎಫ್ಐಆರ್ ದಾಖಲಿಸಲಾಗಿತ್ತು. ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ, ತಾವು ಇವುಗಳಲ್ಲಿ ಶಾಮೀಲಾಗಿರುವುದಕ್ಕೆ ಸಾಕ್ಷ್ಯಾಧಾರಗಳು ಇಲ್ಲ ಎಂದು ಮಮತಾ 2016ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಅದರ ಆದೇಶ ಹೊರಬಂದಿದ್ದು, ನಟಿಗೆ ಸದ್ಯ ರಿಲೀಫ್ ಸಿಕ್ಕಿದೆ. ಕೇಸ್ ಅನ್ನು ರದ್ದು ಮಾಡುವುದಾಗಿ ಹೇಳಿದೆ. ವಿವರದಾಗ ಆದೇಶದಲ್ಲಿ ಕೋರ್ಟ್ ಏನು ತೀರ್ಪು ನೀಡುತ್ತದೆ ಎಂದು ಕಾದು ನೋಡಬೇಕಿದೆ.
ಸುಂದರ ಕಾಲಿದ್ದರೆ ನಟ ಸಾಕಿಬ್ ಸಲೀಂನನ್ನು ಇಂಪ್ರೆಸ್ ಮಾಡ್ಬೋದು! ಸೋನಾಕ್ಷಿ ಮಾತು ಸಕತ್ ಟ್ರೋಲ್