ಹಾಫ್ ಸ್ಯಾರಿ ತೊಟ್ಟು ತಿರುಪತಿ ವೆಂಕಟೇಶ್ವರದ ದರ್ಶನಕ್ಕೆ ಹೋದ ನಟಿ ಜಾಹ್ನವಿ ಕಪೂರ್, ಕಷ್ಟಪಟ್ಟು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ.
ಬಾಲಿವುಡ್‌ನ ಬ್ಯೂಟಿ ಕ್ವೀನ್ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್, ಮಿಲಿ ಚಿತ್ರದಲ್ಲಿಯೂ ಪ್ರಶಂಸೆ ಗಳಿಸಿದವರು. ಇವರು ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು. ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್ಟಿಆರ್ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು.
ಬಿಕಿನಿ, ಅರೆಬರೆ ಡ್ರೆಸ್ಗಳಿಂದಲೇ ಪ್ರಚಲಿತದಲ್ಲಿರೋ ನಟಿಯರು ಕೆಲವೊಮ್ಮೆ ಮೈತುಂಬಾ ಬಟ್ಟೆ ಧರಿಸಿದರೂ ಟ್ರೋಲ್ ಆಗುವುದು ಉಂಟು. ಇನ್ನು ಕೆಲವು ನಟಿಯರು ಉಡುವುದು ಸೀರೆಯಾದರೂ ಸೆರಗು ಮೈಮೇಲೆ ನಿಲ್ಲುವುದೇ ಇಲ್ಲ ಎನ್ನುವಂತೆ ಪೋಸ್ ಕೊಡುತ್ತಾರೆ. ಅದೇನೇ ಇದ್ದರೂ ಈಗ ನಟಿ ಜಾಹ್ನವಿ ಕಪೂರ್ ಹಾಫ್ ಸ್ಯಾರಿ (Half Saree) ತೊಟ್ಟು ಸಕತ್ ಸುದ್ದಿಯಾಗುತ್ತಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲು ನಟಿ ಹಾಫ್ ಸ್ಯಾರಿ ತೊಟ್ಟು ಹೋಗಿದ್ದಾರೆ. ಸದಾ ಜೀನ್ಸ್, ಬಿಕಿನಿ, ಷಾರ್ಟ್, ಮಿನಿ... ಹೀಗೆ ಅರೆಬರೆ ಡ್ರೆಸ್ಗಳಿಂದಲೇ ಓಡಾಡುವ ಜಾಹ್ನವಿ ಅವರಿಗೆ ಈ ಸೀರೆ ಸ್ವಲ್ಪ ಕಷ್ಟ ಎನಿಸುವಂತೆ ಕಾಣುತ್ತಿದೆ. ಅದನ್ನು ಎರಡೂ ಕೈಗಳಿಂದ ಮೇಲಕ್ಕೆತ್ತಿಕೊಂಡು ಸ್ವಲ್ಪ ಕಷ್ಟಪಟ್ಟೇ ನಡೆದುಕೊಂಡು ಹೋಗುವುದನ್ನು ನೋಡಬಹುದು. ಇದನ್ನು ನೋಡಿರೋ ಫ್ಯಾನ್ಸ್ ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ. ಈ ಪರಿ ಕಷ್ಟಪಡೋದನ್ನು ನೋಡ್ಲಿಕ್ಕೆ ಆಗಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್. ದಯವಿಟ್ಟು ಯಾರಾದರೂ ಲಂಗ-ದಾವಣಿ ಹಿಡಿದುಕೊಳ್ಳಲು ಹೆಲ್ಪ್ ಮಾಡಿ ಎನ್ನುತ್ತಿದ್ದಾರೆ.
Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್
ಅಂದಹಾಗೆ ಜಾಹ್ನವಿ ಕಪೂರ್ ಇಂದು ನಸುಕಿನಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಹೋಗಿದ್ದಾರೆ. ಜೂನಿಯರ್ ಎನ್ಟಿಆರ್ (Jr NTR) ನಟನೆಯ ‘ದೇವರ’ ಸಿನಿಮಾದಲ್ಲಿ ನಾಯಕಿಯಾಗಿರುವ ಜಾಹ್ನವಿ, ಶೂಟಿಂಗ್ಗಾಗಿ ಹೈದರಾಬಾದ್ಗೆ ಹೋಗುವ ಮುನ್ನ ವೆಂಕಟೇಶ್ವರನ ದರ್ಶನಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅವರು ದರ್ಶನಕ್ಕೆ ಬರುತ್ತಿದ್ದಂತೆಯೇ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದದ್ದನ್ನು ನೋಡಬಹುದು. ಆದರೆ ನಟಿಯ ಬಾಡಿಗಾರ್ಡ್ಸ್ ಅವರನ್ನು ಆ ಕಡೆ ಹರಸಾಹಸಪಟ್ಟು ಚದುರಿಸುತ್ತಿರುವುದನ್ನೂ ವಿಡಿಯೋದಲ್ಲಿ ನೋಡಬಹುದು.
| Andhra Pradesh | Actress Janhvi Kapoor visits Sri Venkateswara Swami Temple in Tirumala to offer prayers. pic.twitter.com/zbOHYkcBfH
— ANI (@ANI)ಈ ಹಿಂದೆ ಕೂಡ ಉದ್ದನೆ ಡ್ರೆಸ್ ಧರಿಸಿ ಜಾಹ್ನವಿ ಕಪೂರ್ (Janhvi Kapoor) ಟ್ರೋಲ್ಗೆ ಒಳಗಾಗಿದ್ದರು. ಫ್ಯಾಷನ್ ಇವೆಂಟ್ ಒಂದಕ್ಕೆ ತೆರಳಿದ್ದ ನಟಿ, ಉದ್ದದ ಗೌನ್ ಧರಿಸಿ ಪಡಬಾರದ ಕಷ್ಟ ಪಟ್ಟಿದ್ದರು. ಅವರು ಧರಿಸಿದ್ದ ಟೈಟ್ ಗೌನ್ ಕಾಲಿಗೆ ಎಡವುತ್ತಿತ್ತು. ತಾವು ಹಾಕಿದ ಬಟ್ಟೆಯಿಂದಲೇ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬಂದಿತ್ತು. ಜಾಹ್ನವಿ ಕಪೂರ್ ಹಾಕಿದ್ದ ಗೌನ್ ತುಂಬಾ ಉದ್ದ ಇತ್ತು. ಹೀಗಾಗಿ ಒಂದಷ್ಟು ಭಾಗ ನೆಲಕ್ಕೆ ಉದ್ದನೆ ಹಾಸಿತ್ತು. ಅವರು ನಡೆಯಲು ಮುಂದಾದಾಗ ಡ್ರೆಸ್ ಕಾಲಿಗೆ ಸಿಗುತ್ತಿತ್ತು. ಅವರ ಪಿಎ ಅದನ್ನು ಸರಿ ಮಾಡಿದರೂ ನಡಿಯಲು ನಟಿ ಕಷ್ಟಪಟ್ಟರು. ಒಂದು ಕ್ಷಣದಲ್ಲಿ ಅವರು ಬೀಳುವವರಾಗಿದ್ದರು. ಆದರೆ, ಹೇಗೋ ಸುಧಾರಿಸಿಕೊಂಡರು. ಇದು ಅನೇಕ ಬಾರಿ ಉದ್ದನೆಯ ಗೌನ್ ಮುಜುಗರ ತಂದಿತು. ಇನ್ನು ವೇದಿಕೆ ಮೇಲೇರುತ್ತಿದ್ದಂತೆಯೇ ತಮ್ಮ ದೇಹದ ಮೇಲಿದ್ದಡ್ರೆಸ್ ಅನ್ನು ಮೇಲಕ್ಕೆ ಎತ್ತಿ ಸರಿಮಾಡಿಕೊಳ್ಳುತ್ತಾ ಮತ್ತಷ್ಟು ಗಮನ ಸೆಳೆದರು.
Janhvi Kapoor: ಬಾಯ್ಫ್ರೆಂಡ್ ಜೊತೆ ಮತ್ತೆ 'ಸೆರೆ'ಯಾದ ಶ್ರೀದೇವಿ ಪುತ್ರಿ