ಸಮಂತಾ- ವಿಜಯ್ ದೇವರಕೊಂಡ ಇಷ್ಟು ಕ್ಲೋಸಾದ್ರಾ? ಮಿಡ್​ನೈಟ್‌​ ವಿಡಿಯೋ ಮೆಸೇಜ್​ ವೈರಲ್​

By Suvarna News  |  First Published Aug 28, 2023, 2:50 PM IST

ಸಮಂತಾ ಮತ್ತು ವಿಜಯ ದೇವರಕೊಂಡ ಅವರ ಖುಷಿ ಚಿತ್ರದ ಬಿಡುಗಡೆಗೂ ಮುನ್ನವೇ ಈ ಜೋಡಿ ಮಿಡ್​ನೈಟ್​ ಮಾತನಾಡಿರೋ ವಿಡಿಯೋ ವೈರಲ್​ ಆಗಿದೆ. 
 


ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಸೆಪ್ಟೆಂಬರ್​ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ.  'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ.  ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ರುತ್​ ಪ್ರಭು ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಟ ವಿಜಯ್ ದೇವರಕೊಂಡ. ಈಗ ಅದರ ನಡುವೆಯೇ, ಈಚೆಗೆ ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್​ ಆಗಿತ್ತು. ಅದರಲ್ಲಿ   ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದಾರೆ. ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್​ ಉಸ್ಸಪ್ಪಾ ಎಂದಿದ್ದರು.  ಜಯ್​ ದೇವರಕೊಂಡ (Vijay Devarakonda) ಅವರು ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್​ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್​ ಮುಂದುವರೆಯಿತು. 

ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿತ್ತು. ಅದಕ್ಕೂ ಮುನ್ನ  ಖುಷಿ ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್​.  ಇಲ್ಲಿಯವರೆಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ.

Tap to resize

Latest Videos

ಮದ್ವೆಯ ಮಾತನಾಡುತ್ತಲೇ ಸಮಂತಾ ನನ್ನ ಕ್ರಷ್​ ಎಂದ ವಿಜಯ ದೇವರಕೊಂಡ; ರಶ್ಮಿಕಾ ಶಾಕ್​!

ಇದೀಗ ಸಮಂತಾ ಹಾಗೂ ವಿಜಯ್ ದೇವರಕೊಂಡ (Vijay Devarakonda) ಅವರು ಇನ್ನೂ ಸಕತ್​ ಕ್ಲೋಸ್​ ಆಗಿದ್ದಾರೆ ಎನ್ನುವ ವಿಷಯ ಮಧ್ಯರಾತ್ರಿಯ ಅವರ ವಿಡಿಯೋ ಚಾಟಿಂಗ್​ ಮೂಲಕ ತಿಳಿದುಬಂದಿದೆ. ಅದೇನಪ್ಪಾ ಎಂದರೆ ವಿಜಯ್​ ದೇವರಕೊಂಡ ಅವರು ಹೈದರಾಬಾದ್​ನಲ್ಲಿದ್ದು, ಸಮಂತಾ ಟ್ರೀಟ್​ಮೆಂಟ್​ಗೆಂದು ಅಮೆರಿಕಕ್ಕೆ ಹೋಗಿದ್ದಾರೆ. ನಡುರಾತ್ರಿ  ವಿಜಯ್ ದೇವರಕೊಂಡ ವಿಡಿಯೋ ಕಾಲ್ ಮಾಡಿದ್ದಾರೆ.  ಕಾಲ್​ ರಿಸೀವ್ ಮಾಡಿರೋ ಸಮಂತಾ ವಾಟ್ಸ್​ ಅಪ್​, ಎಲ್ಲವೂ ಓಕೆ ನಾ ಎಂದು ಕೇಳಿದ್ದಾರೆ ಇದಕ್ಕೆ ವಿಜಯ್​, ಐ ಮಿಸ್​ ಯೂ ಎಂದಿದ್ದಾರೆ. ವಿಜಯ್​ ಅವರ ಮಾತು ಕೇಳಿ ಸಮಂತಾ ಕೂಡ ನಾಚಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. 

 ನಿನಗೆ ಜೋಕ್ ಒಂದನ್ನು ಹೇಳೋದಾಗಿ ವಿಜಯ್​ ದೇವರಕೊಂಡ ಹೇಳಿದ್ದಾರೆ. ವಿಡಿಯೋ ಕಾಲ್ ಮಾಡಿ ನನ್ನ ಬಳಿ ಒಂದು ‘ನಾಕ್ ನಾಕ್’ ಜೋಕ್ ಇದೆ ಎಂದಿದ್ದಾರೆ ವಿಜಯ್, ಅಮೆರಿಕದಲ್ಲಿ ಈಗ ಎಷ್ಟು ಸಮಯ ಗೊತ್ತೆ? ನಿನ್ನದು ಜೋಕಾ, ಬೇಗ ಹೇಳು ಎಂದಿದ್ದಾರೆ ಸಮಂತಾ. ವಿಜಯ್ ದೇವರಕೊಂಡ ನಾಕ್ ನಾಕ್ (knock knock) ಎಂದಾಗ ನಿಯಮದಂತೆ ಸಮಂತಾ, ಯಾರದು ಎಂದಿದ್ದಾರೆ. ಆಗ  ವಿಜಯ್ ದೇವರಕೊಂಡ  ನಾ ರೋಜಾ ನುವ್ವೆ ಹಾಡು ಹಾಡಿದ್ದಾರೆ. ಇದರ ವಿಡಿಯೋ ಸಕತ್​ ಸುದ್ದಿ ಮಾಡುತ್ತಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

ಅದೇನೇ ಇದ್ದರೂ ಖುಷಿ ಸಿನಿಮಾದ  ಟ್ರೈಲರ್​ (Trailer), ಹಾಡಿಗೆ ಫಿದಾ ಆಗಿರೋ ಫ್ಯಾನ್ಸ್​ ಖುಷಿ ಚಿತ್ರದಲ್ಲಿ ಈ ಜೋಡಿಯ  ಕೆಮಿಸ್ಟ್ರಿ ನೋಡಲು ಕಾತರರಾಗಿದ್ದಾರೆ. ಅಂದಹಾಗೆ, ‘ಖುಷಿ’ ಚಿತ್ರಕ್ಕೆ ಶಿವನಿರ್ವಾಣ ಅವರ ನಿರ್ದೇಶನವಿದೆ.  ಸಮಂತಾ ಕಾಶ್ಮೀರದ ಹಿನ್ನೆಲೆಯಲ್ಲಿ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಳ್ಳುವ ಸಮಂತಾರನ್ನು ಪ್ರೀತಿಸುವ ನಾಯಕನ ಪಾತ್ರದಲ್ಲಿ ವಿಜಯ್​ ನಟಿಸಿದ್ದಾರೆ.  ಚಿತ್ರವು ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆಯಾಗಲಿದೆ.  ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ನಟಿಸಿದ್ದಾರೆ.

click me!