
ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ಈಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಆರೋಪಿ ಸುಕೇಶ್ ಚಂದ್ರಶೇಖರ್ ಹಾಗೂ ಅತನ ಪತ್ನಿ ಲೀನಾ ಮರಿಯಾ ಪೌಲ್ ಹಾಗೂ ಇನ್ನೂ ಆರು ಮಂದಿಯ ವಿರುದ್ಧ ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 200 ಕೋಟಿ ಹಣ ವಂಚನೆ ಕೇಸ್‌ನಲ್ಲಿ ಇವರೆಲ್ಲರ ವಿರುದ್ಧ ಕೇಸ್ ದಾಖಲಾಗಿದೆ, ಚಾರ್ಜ್‌ಶೀಟ್ ಪ್ರಕಾರ ಆರೋಪಿ ಸುಕೇಶ್ ತಾನು ಜಾಕ್ವೆಲಿನ್‌ಗೆ ಕೊಟ್ಟ ದುಬಾರಿ ಉಡುಗೊರೆಗಳ ಕುರಿತು ಸೀಕ್ರೆಟ್ ರಿವೀಲ್ ಮಾಡಿದ್ದಾನೆ.
ಶ್ರೀಲಂಕಾ ಸುಂದರಿ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ 52 ಲಕ್ಷ ರುಪಾಯಿಯ ಕುದುರೆ ಹಾಗೂ 9 ಲಕ್ಷ ರೂಪಾಯಿಯ ಪರ್ಷಿಯನ್ ಬೆಕ್ಕು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾನೆ. ಚಾರ್ಜ್‌ಶೀಟ್‌ನಲ್ಲಿ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರ ಹೆಸರನ್ನೂ ನಮೂದಿಸಲಾಗಿದೆ. ನಟಿಗೆ ಸುಕೇಶ್ ಚಂದ್ರಶೇಖರ್ ದುಬಾರಿ ಕಾರು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.
Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!
ಸ್ಪಷ್ಟನೆ ಕೊಟ್ಟಿದ್ದ ನೋರಾ ಫತೇಹಿ:
ಈ ಹಿಂದೆ ನೋರಾ ಫತೇಹಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಾನು ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ನೋರಾ ಫತೇಹಿ ಪ್ರಕರಣದ ಸುತ್ತ ಬಲಿಪಶುವಾಗಿದ್ದು, ಸಾಕ್ಷಿಯಾಗಿರುವ ಅವರು ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಸಹಾಯ ಮಾಡುತ್ತಿದ್ದಾರೆ. ಆಕೆ ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿಲ್ಲ, ಆಕೆಗೆ ಆರೋಪಿಗಳೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ. ತನಿಖೆಗೆ ಕಟ್ಟುನಿಟ್ಟಾಗಿ ಸಹಾಯ ಮಾಡಲು ಇಡಿ ಕರೆ ಮಾಡಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ ಎನ್ನಲಾಗಿತ್ತು.
ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪೌಲ್ ಅವರು ಆಹ್ವಾನಿಸಿದ ನಂತರ ನೋರಾ ಫತೇಹಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಟಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಯಿತು ಎಂದು ಹೇಳಲಾಗಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸುಕೇಶ್ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರು, ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ₹200 ಕೋಟಿ ವಂಚಿಸಿದ್ದಾರೆ ಎಂದು ಆರೋಪದ ಮೇಲೆ ಕೇಸ್ ದಾಖಲಿಸಲಾಗಿತ್ತು. ಪೊಲೀಸ್ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿತ್ತು. ಪ್ರಕರಣದಲ್ಲಿ ವ್ಯಕ್ತಿಯು ಗೃಹ ಸಚಿವಾಲಯದ ಅಧಿಕಾರಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡು ಪ್ರಕರಣದಲ್ಲಿ ಪತಿಯಂದಿರನ್ನು ಬಿಡುಗಡೆ ಮಾಡಲು ನೆರವಾಗುವುದಾಗಿ ವಂಚಿಸಿದ್ದರು. ಈ ವಿಚಾರವಾಗಿ ಸುಕೇಶ್ 2019ರಲ್ಲಿ ಅರೆಸ್ಟ್ ಆಗಿದ್ದರು. ರೆಲಿಗೇರ್ ಫಿನ್‌ವೆಸ್ ಲಿಮಿಟೆಡ್‌ಗೆ 2000 ಕೋಟಿ ವಂಚಿಸಿದ್ದರು.
ತಿಹಾರ್ ಜೈಲಿನ ಸಿಬ್ಬಂದಿಗೇ ಲಂಚ:
ವಿಚಾರಣೆ ವೇಳೆ ಸುಕೇಶ್ ಅವರು ಜೈಲಿನಿಂದ ತನ್ನ ಸುಲಿಗೆ ದಂಧೆ ನಡೆಸಲು ತಿಹಾರ್ ಜೈಲು ಸಿಬ್ಬಂದಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಸುಲಿಗೆ ದಂಧೆ ನಡೆಸಲು ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಕ್ಕಾಗಿ ಐವರು ಹಿರಿಯ ಜೈಲು ಅಧಿಕಾರಿಗಳನ್ನು ಬಂಧಿಸಲಾಗಿದೆ.
ಚಂದ್ರಶೇಖರ್ ಅವರ ಪತ್ನಿ ಪೌಲ್ ಅವರ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ತನಿಖೆಯ ಸಂದರ್ಭದಲ್ಲಿ, ಚಂದ್ರಶೇಖರ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 6 ಅತ್ಯಾಧುನಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರುಗಳು ಪೌಲ್ ಅವರ ಸಂಸ್ಥೆಗಳ ಹೆಸರಿನಲ್ಲಿ ಅಥವಾ ಮೂರನೇ ವ್ಯಕ್ತಿಗಳ ಹೆಸರಿನಲ್ಲಿವೆ. ಪೌಲ್ ಮತ್ತು ಚಂದ್ರಶೇಖರ್ ಇತರರು ಹವಾಲಾ ಮಾರ್ಗಗಳನ್ನು ಬಳಸುತ್ತಿದ್ದರು. ಅಪರಾಧದ ಆದಾಯದಿಂದ ಗಳಿಸಿದ ಹಣವನ್ನು ನಿಲುಗಡೆ ಮಾಡಲು ಶೆಲ್ ಕಂಪನಿಗಳನ್ನು ರಚಿಸಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.