
ಹಾಲಿವುಡ್ ಲೋಕದ ಆ್ಯಕ್ಷನ್ ಕಿಂಗ್, ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಾಕಿ ಜಾನ್ ಕೊರೊನಾ ವೈರಸ್ಸಿನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಜಾಕಿ ಜಾನ್ ಕೊರೊನಾ ವೈರಸ್ಸಿನಿಂದ ಬಳಲುತ್ತಿದ್ದಾರೆ ಬೇಗ ಗುಣ ಮುಖರಾಗಲಿ ಎಂದು ಕಾಮೆಂಟ್‌ಗಳು ಹಾಗೂ ಫೋಟೋಗಳು ಹರಿದಾಡುತ್ತಿದೆ. ಇದಕ್ಕೆ ಸ್ವತಃ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ.
ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ; ಜಾಗತಿಕ ಅಪಾಯ ಗಂಭೀರ ಮಟ್ಟಕ್ಕೆ
'ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿದ್ದೀನಿ. ಯಾವುದೇ ತೊಂದರೆ ಆಗಿಲ್ಲ. ದಯವಿಟ್ಟು ಚಿಂತಿಸಬೇಡಿ ಹಾಗೂ ವದಂತಿ ಹರಡಿಸಬೇಡಿ. ನೀವೆಲ್ಲರೂ ಆರೋಗ್ಯವಾಗಿ ಹಾಗೂ ಸುರಕ್ಷಿತ ಸ್ಥಳದಲ್ಲಿ ಇದ್ದೀರಾ ಎಂದು ಭಾವಿಸಿದ್ದೀನಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.
Fact Check: ಹೋಳಿಗೆ ಚೀನಾ ಬಣ್ಣ ಬಳಸದಂತೆ ಪ್ರಕಟಣೆ!
ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜಾಕಿ ಜಾನ್ ಜನಿಸಿದ್ದು ಹಾಂಗ್‌ಕಾಂಗ್‌ನಲ್ಲಾದರೂ ಸದ್ಯಕ್ಕೆ ನೆಲೆಸಿರುವುದು ಬೀಜಿಂಗ್‌ನಲ್ಲಿ. ವರದಿಗಳ ಪ್ರಕಾರ ಕೊರೊನಾ ವೈರಸ್‌ಗೆ 3000 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಹಾಗೂ 85 ಸಾವಿರಕ್ಕೂ ಹೆಚ್ಚು ಜನ ವೈರಸ್‌ನಿಂದ್ ಬಳಲುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.