
ಬಿ- ಟೌನ್ ಬೋಲ್ಡ್ ನಟಿ ಶ್ರುತಿ ಹಾಸನ್ ಚಿತ್ರರಂಗದಿಂದ ದೂರ ಉಳಿದರೂ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ಈ ಸುಂದರಿ ಬಗ್ಗೆ ಜನರಿಗೂ ಎಲ್ಲಿಲ್ಲದ ಕುತೂಹಲ.
ಚಿತ್ರಗಳಲ್ಲಿ ಹೆಚ್ಚಾಗಿ ಮೇಕಪ್ ಬಳಸದೇ ಸಿಂಪಲ್ ಆ್ಯಂಡ್ ನ್ಯಾಚುಲರ್ ಆಗಿ ಕಾಣಿಸಿಕೊಳ್ಳಲು ಬಯಸುವ ನಟಿ ಶ್ರುತಿ. ಈಕೆಯ ನೇರ ನುಡಿ, ನಿರ್ಧಾರಗಳು ಎಷ್ಟೋ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದೆ. ಆದರೆ ಇದರಿಂದ ಶ್ರುತಿ ಜೀವನದಲ್ಲಿಯೂ ಹಲವು ಬಾಡಿ ಶೇಮಿಂಗ್ (ದೇಹ ನಿಂದನೆ) ಕಾಮೆಂಟ್ ಎದುರಿಸಬೇಕಾಯ್ತು.
ಖ್ಯಾತ ಸ್ಟಾರ್ ನಟನ ಮಗಳು ವಿಸ್ಕಿ ವ್ಯಸನಿಯಂತೆ; ನಟಿಯೇ ಬಾಯ್ಬಿಟ್ರು ಸತ್ಯ!
'ಮೇಕಪ್ ಇಲ್ಲದೇ ಹುಡುಗನಂತಿರುವೆ' 'ನೀನು ತುಂಬಾ ಡುಮ್ಮಿ' 'ನಿನ್ನ ಮೂಗು ಸರಿ ಇಲ್ಲ ' 'ಸ್ವಲ್ಪ ತುಟಿ ದಪ್ಪ ಮಾಡಿಸಿಕೋ' ಎಂದು ಟ್ರೋಲಿಗರಿಂದ ಬಂದ ಮಾತಿಗೆ ಕಿವಿಗೊಡದ ಕಮಲ್ ಹಾಸನ್ ಮಗಳು, ಜೀವನದಲ್ಲಿ ತಮಗೆ ಮುಖ್ಯ ಎಂದೆನಿಸಿದ್ದನ್ನು ಮಾಡಿಯೇ ತೀರುತ್ತಾರೆ. ವರ್ಷಗಳ ಹಿಂದೆ ಶ್ರುತಿ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಇದರ ಬಗ್ಗೆ ಸ್ವತಃ ಶ್ರುತಿ ಬಹಿರಂಗವಾಗಿಯೂ ಮಾತನಾಡಿದ್ದರು.
'ಆಗಾ ತುಂಬಾ ದಪ್ಪ ಇದ್ರು, ಈಗ ತುಂಬಾ ಸಣ್ಣಗಾಗಿದ್ದಾಳೆಂದು ಒಂದೇ ಸಮ ಕಾಮೆಂಟ್ ಮಾಡುವವರಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರು ವರ್ಷಗಳ ಹಿಂದೆ ಸೆರೆ ಹಿಡಿದಿದ್ದ ಫೋಟೋ ಇದು. ನಾನು ಅನುಭವಿಸುತ್ತಿರುವುದನ್ನು ಎಷ್ಟೋ ಹೆಣ್ಣು ಮಕ್ಕಳು ಎದುರಿಸುತ್ತಿದ್ದಾರೆ, ನಾನು ಏನು ಹೇಳುತ್ತಿರುವೆ ಎಂದು ಅವರಿಗೆ ಮಾತ್ರ ಅರ್ಥವಾಗುತ್ತದೆ. ಹೆಣ್ಣು ಅಂದ್ಮೇಲೆ ಎಷ್ಟೋ ಹಾರ್ಮೋನಲ್ ಬದಲಾವಣೆಗಳು ಅಗುತ್ತವೆ. ನೀನು ಇದ್ದಂಗೇ ನಾನೂ ಇರಬೇಕು ಎನ್ನುವುದು ದಡ್ಡತನ. ಒಬ್ಬರನ್ನು ಶೇಮ್ ಮಾಡುತ್ತಿದ್ದೀರಾ ಅಂದ್ರೆ ನೀವು ಪಾಸಿಟಿವ್ ವ್ಯಕ್ತಿ ಎಂದಲ್ಲ. ಇದು ನನ್ನ ಮುಖ ಹೌದು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ. ಇದು ನನ್ನ ಲೈಫ್. ಜೀವನದಲ್ಲಿ ನಾನು ಹೇಗಿರಬೇಕು ಎಂದು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನೀವು ಹೇಳಿದ ಪ್ರಕಾರವಲ್ಲ. ಜೀವನದಲ್ಲಿ ನಾನು ಒಬ್ಬರನ್ನು ಅರ್ಥ ಮಾಡಿಕೊಳ್ಳಬೇಕು, ದೊಡ್ಡವರಾಗಿ ಬೆಳೆಯಬೇಕೆಂದರೆ ಮೊದಲು ಆ ವ್ಯಕ್ತಿ ಹೇಗಿದ್ದಾರೋ ಹಾಗೆಯೇ ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಹೆಣ್ಣಾಗಿ, ಹೆಣ್ಣಿನ ಪರ ನಿಲ್ಲದಿದ್ದರೇ ಬದುಕಿಗೆ ಅರ್ಥವಿದ್ಯಾ? ಪ್ರೀತಿ ಹರಡಿಸಿ ಎಲ್ಲರನ್ನೂ ಪ್ರೀತಿಸಿ. ನನ್ನನು ನಾನು ಪ್ರೀತಿಸುವುದಕ್ಕೆ ಶುರು ಮಾಡಿದ್ದೇನೆ. ನೀವು ಮಾಡುತ್ತೀರೆಂದೂ ನಂಬಿರುವೆ' ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.