ಒಂದೂವರೆ ವರ್ಷ ಗಂಡನಿಂದ ದೂರವಾಗಿದ್ರು 'ಸೀತಾರಾಮ ಕಲ್ಯಾಣ' ನಟಿ!

By Suvarna NewsFirst Published Feb 29, 2020, 2:26 PM IST
Highlights

'ಅಮ್ಮಾವ್ರ ಗಂಡ' ಖ್ಯಾತಿಯ ಭಾಗ್ಯಶ್ರೀ ಅನ್ಯೂನ್ಯ ದಾಂಪತ್ಯದಲ್ಲಿ ಬಿರುಕು ಎಂಬ ಸುದ್ದಿ ಹರಿದಾಡುತ್ತಿದೆ. ಇವರು ಪತಿಯಿಂದ ದೂರವಿದ್ದು, ಕಳೆದ ಒಂದೂವರೆ ವರ್ಷಗಳಿಂದ ದೂರ ಉಳಿದಿದ್ದಾರೆ ಎಂಬೊಂದು ಸುದ್ದಿ ಇದೆ. ಈ ವಿಷಯದ ಸತ್ಯಾಸತ್ಯತೆ ಏನು?

1993ರಲ್ಲಿ 'ಅಮ್ಮಾವ್ರ ಗಂಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟವರು. ಬಾಲಿವುಡ್ ನಟಿ ಭಾಗ್ಯಶ್ರೀ ಮೇನೇ ಪ್ಯಾರ್ ಕ್ಯಾಯಾದಲ್ಲಿ ಅಭಿನಯಿಸುವಾಗಲೇ, ಪತಿ ಹಿಮಾಲಯ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದರು. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಭಾಗ್ಯಶ್ರೀ ದಾಂಪತ್ಯ ಜೀವನದ ಬಗ್ಗೆ ಇದ್ದ ಗಾಳಿ ಸುದ್ದಿಯನ್ನು ತೆಗೆದು ಹಾಕಿ, ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

1990ರಲ್ಲಿ ಉದ್ಯಮಿ ಹಿಮಾಲಯ ದಾಸನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವರು ಭಾಗ್ಯಶ್ರೀ, ಇವರು ಸಾಂಗ್ಲಿ ರಾಜಮನೆತನದ ಕುವರಿ. ಪೋಷಕರನ್ನು ವಿರೋಧಿಸಿ ದೇವಾಲಯದಲ್ಲಿ, ಸಿಂಪಲ್‌ ಆಗಿ ಹಸೆಮಣೆ ಏರಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿವೆ. ಪತಿಯೇ ಸರ್ವಸ್ವ ಎಂದು ಚಿತ್ರರಂಗದಿಂದ ದೂರ ಉಳಿದು, ಕುಟುಂಬಕ್ಕೆ ಸಮಯ ನೀಡುತ್ತಿದ್ದ ಈ ನಟಿಯ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬೊಂದು ಸುದ್ದಿ ಹರಿದಾಡಿದೆ.

ಸಾಂಗ್ಲಿ ರಾಜಮನೆತನದ ಕುವರಿ, ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್‌ ಬ್ಯಾಂಕ್‌ ತಲೆನೋವು!

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಮೇನೆ ಪ್ಯಾರ್ ಕೀಯಾ ನಟಿ, ಅಚ್ಚರಿ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. 'ನನ್ನ ಫರ್ಸ್ಟ್‌ ಲವ್ ಹಿಮಾಲಯ ಜೀ. ತುಂಬಾ ಪ್ರೀತಿಸಿ, ಎಲ್ಲರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟೆ. ಆದರೆ ಎಲ್ಲವೂ ಸರಿ ಹೋಗಲಿಲ್ಲ. ಕೆಲವು ಸಮಯದ ಕಾಲ ಅವರಿಂದ ದೂರ ಉಳಿಯುವ ಪರಿಸ್ಥಿತಿ ಬಂತು. ನಾನು ಇವರನ್ನು ಮದುವೆ ಆಗದೇ, ಮತ್ಯಾರನ್ನೋ ಮದುವೆ ಆಗಿದ್ದಿದ್ರೆ ನನ್ನ ಲೈಫ್‌ ಹೇಗಿರ್ತಿತ್ತು? ಅಬ್ಬಾ ಆ ಕೆಟ್ಟ ಟೈಮಲ್ಲಿ ನಾನು ಹೇಗ್‌ ಇದ್ದೆ ಅಂದ್ರೆ, ಅಂತ ಈಗ ನೆನಪಿಸಿಕೊಂಡರೂ ಭಯವಾಗುತ್ತದೆ. ಇದು ಸುಮಾರು 1.5 ವರ್ಷಗಳ ಕಾಲದ ಹಾರಿಬಲ್ ಟೈಮ್,' ಎನ್ನುತ್ತಲೇ ನನ್ನ ಕಡೆಯ ಲವ್ ಸಹ ಹಿಮಾಲಯ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಜೂಜಾಟದಲ್ಲಿ ಭಾಗಿ: ಬಾಲಿವುಡ್‌ ನಟಿ ಪತಿ ಬಂಧನ

ಕಳೆದ ವರ್ಷ ಮುಂಬೈನಲ್ಲಿ ಜೂಜಾಟದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಹಿಮಾಲಯ್ ದಾಸನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ಮೇನೇ ಪ್ಯಾರ್ ಕೀಯಾ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿತ್ತು. ಸಿಂಪಲ್ ಲವ್ ಸ್ಟೋರಿ ಕಥೆಯ ಈ ಚಿತ್ರ, ಯುವ ಹೃದಯಗಳಲ್ಲಿ ಪ್ರೇಮದ ಘಂಟೆ ಬಾರಿಸಿತ್ತು.

ಇತ್ತೀಚೆಗೆ ಭಾಗ್ಯಶ್ರೀ ಫೋಷಕರಿಗೆ ಸ್ವಿಸ್ ಬ್ಯಾಂಕ್‌ನಿಂದಲೂ ನೋಟಿಸ್ ಬಂದಿತ್ತು. ಇವರ ಫೋಷಕರಾದ ವಿಜಯ್‌ಸಿಂಗ್ ಮಾಧವರಾವ್ ಪಟವರ್ಧನ್ ಹಾಗೂ ರೋಹಿಣಿ ವಿಜಯ್ ಸಿಂಗ್ ಆಡಳಿತಾತ್ಮಕ ಮಾಹಿತಿ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಸ್ವಿಜರ್ಲೆಂಡ್‌ನ ತೆರಿಗೆ ಇಲಾಖೆ ಮಾನ್ಯ ಮಾಡಿದ್ದು, ನೋಟಿಸ್ ಜಾರಿ ಮಾಡಿತ್ತು.

 

click me!