Fact Check: ಹೋಳಿಗೆ ಚೀನಾ ಬಣ್ಣ ಬಳಸದಂತೆ ಪ್ರಕಟಣೆ!
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರ ಎರಡೂ ಕೂಡ ಮಾರ್ಚ್ 9 ರ ಹೋಳಿ ಹಬ್ಬಕ್ಕೆ ಚೀನಾ ಉತ್ಪನ್ನಗಳನ್ನು ಬಳಸದಂತೆ ಸೂಚನೆ ನೀಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಸುಮಾರು 2000ಕ್ಕೂ ಹೆಚ್ಚಿನ ಜನರನ್ನು ಬಲಿ ಪಡೆದ ಚೀನಾ ಮೂಲದ ಕೊರೋನಾ ವೈರಸ್ ಹಲವು ದೇಶಗಳಲ್ಲಿ ವ್ಯಾಪಿಸುತ್ತಿದೆ. ಈ ಮಾರಣಾಂತಿಕ ವೈರಸ್ ಬಗ್ಗೆ ಪ್ರತಿಯೊಬ್ಬರೂ ಭಯಭೀತರಾಗಿದ್ದಾರೆ. ವೈರಸ್ನಿಂದ ಪಾರಾಗಲು ಹಲವು ದೇಶಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.
Fact check: ಕೊರೋನಾದಿಂದ ಮುಕ್ತಿ ಕೋರಿ ಮಸೀದಿಗೆ ಮೊರೆ ಹೋದ ಕ್ಸಿ!
ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರ ಎರಡೂ ಕೂಡ ಮಾಚ್‌ರ್ 9ರ ಹೋಳಿ ಹಬ್ಬಕ್ಕೆ ಚೀನಾ ಉತ್ಪನ್ನಗಳನ್ನು ಬಳಸದಂತೆ ಸೂಚನೆ ನೀಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಸರ್ಕಾರ ಸುತ್ತೋಲೆ ಹೊರಡಿಸಿದ ಎಂಬ ಪ್ರಕಟಣೆಯನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗಿದೆ.
ಅದರಲ್ಲಿ ಭಾರತ ಸರ್ಕಾರದ ಸೀಲ್ ಕೂಡ ಇದೆ. ‘ಬಹು ಮುಖ್ಯ ಪ್ರಕಟಣೆ. ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರುತ್ತಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು. ಆದರೆ ಭಾರತದಲ್ಲಿ ಹೋಳಿ ಹಬ್ಬದಂದು ಬಳಸುವ ಬಹುತೇಕ ಬಣ್ಣಗಳು ಚೀನಾದಿಂದ ಆಮದಾಗುತ್ತವೆ. ದಯವಿಟ್ಟು ಯಾರೂ ಈ ಚೀನಾ ಉತ್ಪನ್ನಗಳನ್ನು ಬಳಸಬಾರದೆಂದು ಕೋರುತ್ತೇವೆ’ ಎಂದಿದೆ.
ಬೂಮ್ ಲೈವ್ ಸುದ್ದಿಸಂಸ್ಥೆ ಈ ಪ್ರಕಟಣೆಯ ಹಿಂದಿನ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ಇದೊಂದು ನಕಲಿ ಪ್ರಕಟಣೆ ಎಂಬುದು ಖಚಿತವಾಗಿದೆ. ಭಾರತದ ಯಾವುದೇ ಸಚಿವಾಲಯವಾಗಲೀ, ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಚೀನಾ ವಸ್ತುಗಳನ್ನು ನಿಷೇಧಿಸಿ ಪ್ರಕಟಣೆ ಹೊರಡಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ವೈರಲ್ ಆಗಿರುವ ಪ್ರಕಟಣೆಯಲ್ಲಿ ಸಾಕಷ್ಟುವ್ಯಾಕರಣ ದೋಷಗಳಿವೆ.
- ವೈರಲ್ ಚೆಕ್