100 ದಿನಗಳಲ್ಲಿ ಕೆಜಿಎಫ್, ಸಲಾರ್ ದಾಖಲೆ ಆಗುತ್ತಾ ಉಡೀಸ್? ಸಿನಿ ಅಂಗಳದಲ್ಲಿ ಕುತೂಹಲದ ವಿದ್ಯಮಾನ

Published : Feb 20, 2025, 12:36 PM ISTUpdated : Feb 20, 2025, 12:38 PM IST
100 ದಿನಗಳಲ್ಲಿ ಕೆಜಿಎಫ್, ಸಲಾರ್ ದಾಖಲೆ ಆಗುತ್ತಾ ಉಡೀಸ್? ಸಿನಿ ಅಂಗಳದಲ್ಲಿ ಕುತೂಹಲದ ವಿದ್ಯಮಾನ

ಸಾರಾಂಶ

Big Budget Movie Teaser: ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಗೆ 100 ದಿನ ಬಾಕಿ ಇದ್ದು, ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಕೆಜಿಎಫ್ ಮತ್ತು ಸಲಾರ್ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಮೂಡಿಸಿದೆ. ಹಾಗಾದ್ರೆ ಯಾವುದು ಈ ಚಿತ್ರ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರು: ಭಾರತದ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಇಂದಿಗೆ ಬರೋಬ್ಬರಿ 100 ದಿನಗಳು ಬಾಕಿ ಉಳಿದಿವೆ. ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಭಾರತದ ಸಿನಿಲೋಕದಲ್ಲಿ ಹಲ್‌ಚಲ್ ಸೃಷ್ಟಿಸಿದೆ. 1 ನಿಮಿಷ 53 ಸೆಕೆಂಡ್ ಅವಧಿಯ ಈ ಟೀಸರ್, ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳಾದ ಕೆಜಿಎಫ್ ಮತ್ತು ಸಲಾರ್ ದಾಖಲೆಗಳನ್ನು ಉಡೀಸ್ ಮಾಡಲಿದೆ ಎಂಬ ಗುಲ್ಲೆದ್ದಿದೆ.  ಟೀಸರ್‌ನ ಪ್ರತಿಯೊಂದು ಸೆಕೆಂಡ್ ಅದ್ಭುತವಾಗಿ ಮೂಡಿಬಂದಿರೋ ಕಾರಣದಿಂದಾಗಿ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಈ ಸಿನಿಮಾದ ಟೀಸರ್‌ಗೆ ಈಗಾಗಲೇ 70 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಈ ಮಹಾ 'ಸಾಮ್ರಾಜ್ಯ'ದ ಕಥೆಯನ್ನು ಬೆಳ್ಳಿ ಪರದೆ ನೋಡಲು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಸ್ಟಾರ್ ಕಲಾವಿದರು, ಈ 1.53 ನಿಮಿಷದ ಕ್ಲಿಪ್ ಸಿನಿಮಾ ಮೇಲಿನ ಭರವಸೆ ಮತ್ತು ನಿರೀಕ್ಷೆಯನ್ನು ಹಚ್ಚಿಸಿದೆ. ನಾವು ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ನಟ ಹಾಗೂ ಚಿತ್ರತಂಡಕ್ಕೆ ಶುಭಕೋರಿದ್ದಾರೆ. 

ಕಿಂಗ್‌ಡಮ್‌ ಟೀಸರ್‌ನಲ್ಲಿ ವಿಜಯ್‌ ದೇವರಕೊಂಡ ಅವರ ಇಂಟೆನ್ಸ್ ಲುಕ್ ನೋಡುಗರಿಗೆ ಇಷ್ಟವಾಗಿದೆ. ಈ ಟೀಸರ್ ವೀಕ್ಷಕರಿಗೆ ಅದ್ಭುತವಾದ ಸಿನಿಮಾ ನೀಡಲಿದೆ ಎಂಬ ಭರವಸೆಯನ್ನು ಮೂಡಿಸಿದೆ. ಚಿತ್ರದ ಜಬರ್‌ದಸ್ತ್ ಸಿನಿಮ್ಯಾಟಿಕ್ ಮೊಮೆಂಟ್ಸ್ ಮತ್ತು ಪಾತ್ರಗಳ ಭಾವನಾತ್ಮಕ ನಟನೆ ವೀಕ್ಷಕರಲ್ಲಿ ಚಿತ್ರದ ಕ್ರೇಜ್ ಹೆಚ್ಚುವಂತೆ ಮಾಡಿದೆ. ಕಿಂಗ್‌ಡಮ್‌ ಒಂದು ಒಳ್ಳೆಯ ಕಥೆಯನ್ನು ಹೊಂದಿದ್ದು, ವಿಜಯ್ ದೇವರಕೊಂಡ ಸಹ ಈ ಚಿತ್ರದಲ್ಲಿ ಹಿಂದೆದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ. 

ಇದನ್ನೂ ಓದಿ: 450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75  ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ

ಟಾಲಿವುಡ್ ಅಂಗಳದ ರೌಡಿ ಅಂತಾನೇ ಕರೆಸಿಕೊಳ್ಳುವ ರಗಡ್ ಹೀರೋ ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಫೆಬ್ರವರಿ 12ರಂದು ಕಿಂಗ್‌ಡಮ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, 70 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಗೌತಮ್ ತಿನ್ನಾನೂರಿ ತಾವೇ ಬರೆದ ಕಥೆ ಆಕ್ಷನ್ ಕಟ್ ಹೇಳಿದ್ರೆ, ವಂಶಿ ಎಸ್ ಮತ್ತು ಸಾಯಿ ಸೌಜನ್ಯ ಜೊತೆಯಾಗಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.  ಶ್ರೀ ವಾಸ್ತವ್ ನಿರ್ದೇಶನದ ಕೆಲಸದಲ್ಲಿ ಗೌತಮ್ ತಿನ್ನಾನೂರಿ ಅವರಿಗೆ ಸಾಥ್ ನೀಡಿದ್ದಾರೆ. 

ಹಿಂದಿ ಟ್ರೈಲರ್‌ಗೆ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹಿನ್ನೆಲೆ ಧ್ವನಿ  ನೀಡಿದ್ದಾರೆ. ಚಿತ್ರಕ್ಕೆ  ಅನಿರುದ್ಧ ರವಿಚಂದ್ರನ ಅವರ ಸಂಗೀತವಿದೆ. ಇಂದಿಗೆ ಸಿನಿಮಾ ಬಿಡುಗಡೆಗೆ 100 ದಿನ ಬಾಕಿ ಉಳಿದಿದ್ದು, ಅಭಿಮಾನಿಗಳು ಕೌಂಟ್‌ಡೌನ್ ಶುರು ಮಾಡಿದ್ದಾರೆ. ವಿಜಯ್ ದೇವರಕೊಂಡ ಬಿಗ್‌ ಹಿಟ್‌ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಧರ್ಮ ತೊರೆದು ಮುಸ್ಲಿಂ ರಾಜಮನೆತನದ ಸೊಸೆಯಾದ ಬ್ರಾಹ್ಮಣ ಕುಟುಂಬದ ಖ್ಯಾತ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್- ನಾದಿಯಾ, ಕತೆ ಸುಳಿವು ನೀಡಿದ ರಾಕಿಂಗ್ ಸ್ಟಾರ್ ಯಶ್
ಇಷ್ಟು ದಿನವೂ ಮುಚ್ಚಿಟ್ಟಿದ್ದ ನಟ ಪ್ರಭಾಸ್ 'ಸಿಂಗಲ್ ಲೈಫ್' ಸೀಕ್ರೆಟ್ ಕೊನೆಗೂ ಜಗತ್ತಿಗೆ ಗೊತ್ತಾಯ್ತು..!