
ಬಾಲಿವುಡ್ ನಟ ಶಾರುಖ್ ಖಾನ್ ಎಂದಕೂಡಲೇ ಅವರ ʼಮನ್ನತ್ʼ ನೆನಪಾಗುವುದು. ಅಷ್ಟೇ ಅಲ್ಲದೆ ದುಬೈನಲ್ಲಿಯೂ ಕೂಡ ʼಜನ್ನತ್ʼ ಮನೆ ಇದೆ. ಈಗ ಅವರು ಎರಡು ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ.
ಬಾಡಿಗೆ ಎಷ್ಟು?
ಶಾರುಖ್ ಖಾನ್ ಅವರು ಮುಂಬೈನಲ್ಲಿ ಲಕ್ಷುರಿ ಡುಪ್ಲೆಕ್ಷ್ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಮೂರು ವರ್ಷಗಳಿಗೆ 8.67 ಕೋಟಿ ರೂಪಾಯಿ ಬಾಡಿಗೆ ಎನ್ನಲಾಗಿದೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದನ್ನು ನಟ ಜಾಕಿ ಭಗ್ನಾನಿ ಹಾಗೂ ಅವರ ಸಹೋದರಿ ದೀಪ್ಶಿಕಾ ದೇಶಮುಖ್ ಅವರಿಂದ ಪಡೆಯಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ಶಾರುಖ್ 11.5 ಲಕ್ಷ ರೂಪಾಯಿಯಂತೆ ಬಾಡಿಗೆ ನೀಡುತ್ತಿದ್ದಾರೆ. ಮೂರು ವರ್ಷಗಳಿಗೆ 32.97 ಲಕ್ಷ ರೂಪಾಯಿ ಮುಂಗಡ ಹಣ ನೀಡಲಾಗಿದೆ. ಇನ್ನು ನಿರ್ಮಾಪಕ ವಶು ಭಗ್ನಾನಿ ಅವರಿಂದ ಪಡೆದುಕೊಂಡಿರೋ ಇನ್ನೊಂದು ಅಪಾರ್ಟ್‌ಮೆಂಟ್‌ಗೆ 12.61 ಲಕ್ಷ ರೂಪಾಯಿ ಬಾಡಿಗೆ ಕೊಡಲಾಗುತ್ತಿದೆ. ಇದಕ್ಕು ಕೂಡ 36 ಲಕ್ಷ ರೂಪಾಯಿ ಮುಂಗಡ ಹಣ ನೀಡಲಾಗುತ್ತಿದೆ. 2025 ಫೆಬ್ರವರಿ 14ರಂದು ಡಾಕ್ಯುಮೆಂಟ್ ರಿಜಿಸ್ಟರ್ ಆಗಿದೆ.
Intimate Scenes: ಮುತ್ತಿನ ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ!
ಇನ್ನೆರಡು ಫ್ಲೋರ್ ಬೇಕು!
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ತಮ್ಮ ಮನ್ನತ್ ಬಂಗಲೆಯ ಹಿಂಭಾಗದಲ್ಲಿ ಎರಡು ಫ್ಲೋರ್ ಕಟ್ಟುವ ವಿಚಾರವಾಗಿ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಜೊತೆ ಚರ್ಚಿಸುವ ವಿಚಾರವಾಗಿ ಸುದ್ದಿಯಲ್ಲಿದ್ದರು.
ʼಮನ್ನತ್ʼ ಮನೆಯೇ 27000 square foot ಇದೆ. 2001ರಲ್ಲಿ ಶಾರುಖ್ ಈ ಮನೆ ಖರೀದಿಸಿದ್ದರು. ಅಂದು 13 ಕೋಟಿಗೆ ಈ ಮನೆ ಖರೀದಿಸಿದ್ದರು, ಈಗ ಈ ಮನೆಯ ಬೆಲೆ 200 ಕೋಟಿ ರೂಪಾಯಿ ಎನ್ನಲಾಗಿದೆ. ಮುಂಬೈನ ಕೇಂದ್ರ ಸ್ಥಳದಲ್ಲಿ ಈ ಬಂಗಲೆ ಇರೋದಿಕ್ಕೆ ಬೆಲೆ ಜಾಸ್ತಿಯಾಗುತ್ತಿದೆ. Bai Khorshed Bhanu Sanjana Trust ಅವರಿಂದ ಶಾರುಖ್ ಈ ಮನೆ ಖರೀದಿಸಿದ್ದರು. ಈ ಬಂಗಲೆಗೆ ʼvilla viennaʼ ಎಂದು ಹೆಸರಿತ್ತು. 2005ರಲ್ಲಿ ʼಮನ್ನತ್ʼ ಎಂದು ಮರು ನಾಮಕರಣ ಮಾಡಲಾಯ್ತು. ʼಮನ್ನತ್ʼ ಎಂದರೆ ಪ್ರಾರ್ಥನೆ ಎಂದರ್ಥ. ನಿತ್ಯವೂ ಸಾವಿರಾರು ಪ್ರವಾಸಿಗರು ಈ ಬಂಗಲೆ ಮುಂದೆ ಫೋಟೋ ತೆಗೆಸಿಕೊಂಡು ಹೋಗೋದುಂಟು.
Shah Rukh Khan: 58 ಪ್ರಶಸ್ತಿ ಬಾಚಿಕೊಂಡ ಆ ಫಿಲಂ ಶೂಟಿಂಗ್‌ಗೆ ಶಾರುಖ್ ಖಾನ್ ಕುಡಿದೇ ಬರುತ್ತಿದ್ದ!
ಈ ಬಂಗಲೆ ಮಾರೋದಿಲ್ಲ
ಈ ಬಂಗಲೆ ಬಗ್ಗೆ ಒಂದೊಂದು ಇತಿಹಾಸ ಒಂದೊಂದು ಕಥೆ ಹೇಳುತ್ತದೆ. ಈ ಬಗ್ಗೆ ಮಾತನಾಡಿದ್ದ ಶಾರುಖ್, “ನನ್ನ ಪಾಲಕರು ತೀರಿಕೊಂಡಮೇಲೆ ನನಗೆ ಮನೆ ಇರಲಿಲ್ಲ. ನನಗೆ ಮಕ್ಕಳಾದ ಮೇಲೆ ನಾನು ಈ ಮನೆ ಖರೀದಿಸಿದೆ. ಇದು ಕುಟುಂಬದ ಮನೆ. ನನಗೆ ಮನೆ ಮಾಡುವ ಆಸೆ ಇತ್ತು. ಈ ಮನೆ ಖರೀದಿಸಲು ನಾನು ತುಂಬ ಕಷ್ಟಪಟ್ಟಿದ್ದೇನೆ. ಎಂಥದ್ದೇ ಕಷ್ಟ ಬಂದರೂ ಕೂಡ ನಾನು ಈ ಮನೆ ಮಾತ್ರ ಮಾರೋದಿಲ್ಲ” ಎಂದು ಹೇಳಿಕೆ ನೀಡಿದ್ದರು.
ಮನ್ನತ್‌ನಲ್ಲಿ ರೂಮ್‌ಗಳು, ಆಡಿಟೋರಿಯಂ, ಪೂಲ್, ಲೈಬ್ರರಿ, ಜಿಮ್ ಹೀಗೆ ಎಲ್ಲ ವ್ಯವಸ್ಥೆಗಳು ಇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.