ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್‌ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?

Published : Feb 20, 2025, 12:02 PM ISTUpdated : Feb 20, 2025, 12:20 PM IST
ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್‌ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?

ಸಾರಾಂಶ

ಗಾಯಕಿ ಶ್ರೇಯಾ ಘೋಷಾಲ್ ಸಂದರ್ಶನದಲ್ಲಿ, ತಮಗೆ ಹಳೆಯ ತಲೆಮಾರಿನ ನಟಿಯರಾದ ವಹೀದಾ ರೆಹಮಾನ್ ಮತ್ತು ಮಧುಬಾಲಾ ಅವರಿಗೆ ಹಾಡಲು ಇಷ್ಟವೆಂದು ಹೇಳಿದ್ದಾರೆ. ಈಗಿನ ನಟಿಯರಲ್ಲಿ ಐಶ್ವರ್ಯಾ ರೈ ಅವರ ಅಭಿನಯ ಮತ್ತು ಲಿಪ್ ಸಿಂಕ್ ಸಾಮರ್ಥ್ಯವನ್ನು ಮೆಚ್ಚಿದ್ದಾರೆ. ಸಂಗೀತ ಜ್ಞಾನವಿರುವ ವಿದ್ಯಾ ಬಾಲನ್ ಅವರಂತಹ ನಟಿಯರಿಗೆ ಹಾಡುವುದು ಸುಲಭವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಜನಪ್ರಿಯ ಸಿಂಗರ್ ಶ್ರೇಯಾ ಘೋಷಾಲ್ (Shreya Ghoshal) ತುಂಬಾ ಹಳೆಯದಾದ ಹೃದಯ ಹೊಂದಿದ್ದಾರೆಯೇ? ಅವರ ಪ್ರಕಾರ ಹೌದು..! ಗಾಯಕಿ ಶ್ರೇಯಾ ಘೋಷಾಲ್ ಮೂಲತಃ ರಾಜಸ್ಥಾನದವರು. ಆದರೆ, ಮುಂಬೈನಲ್ಲಿ ಗಾಯಕಿಯಾಗಿ ಸೆಟ್ಲ್ ಆಗಿದ್ದಾರೆ. ಭಾರತದ ಬಹಳಷ್ಟು ಭಾಷೆಗಳಲ್ಲಿ ಹಾಡಿರುವ ಶ್ರೇಯಾ ಘೋಷಾಲ್ ಹಿಂದಿ ಗೀತೆಗಳನ್ನು ಹೆಚ್ಚು ಹಾಡಿದ್ದಾರೆ. ಆದರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಬಹಳಷ್ಟು ಚಿತ್ರಗೀತೆಗಳಿಗೂ ಶ್ರೇಯಾ ಧ್ವನಿ ನೀಡಿದ್ದಾರೆ. 

ಅದೆಲ್ಲಾ ಓಕೆ, ಆದರೆ ಶ್ರೇಯಾ ಘೋಷಾಲ್ ಓಲ್ಡ್ ಹಾರ್ಟ್ ಕಥೆ ಏನು? ಸಹಜವಾಗಿಯೇ ಯಾರಿಗಾದರೂ ಕುತೂಹಲ ಇದ್ದೇ ಇರಲಿದೆ. ಸಂದರ್ಶನವೊಂದರಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ 'ನಿಮ್ಮ ಫೇವರೆಟ್ ನಟಿ ಯಾರು? ಯಾವ ನಟಿಗೆ ನಿಮ್ಮ ಧ್ವನಿ ಹೆಚ್ಚು ಸ್ಯೂಟ್ ಆಗುತ್ತೆ ಅಂತ ನಿಮಗೆ ಅನ್ನಿಸುತ್ತೆ..?' ಅಂತ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಶ್ರೇಯಾ ಕೊಟ್ಟ ಉತ್ತರ ತಮಾಷೆ ಎನ್ನಿಸಿದರೂ ಅವರು ಅವರ ಉತ್ತರ ಹಾಗೂ ಅವರಿಷ್ಟಕ್ಕೆ ಸಂಬಂಧಿಸಿದ್ದು ಎನ್ನಲೇಬೇಕಲ್ಲ!

ಒಂದೇ ಮಾತಲ್ಲಿ ಹೇಳೋದಾದರೆ... ರವಿಚಂದ್ರನ್‌ ಹೊಸ ಸಿನಿಮಾದ ಹಾಡಿಗೆ ದನಿಯಾದ ಶ್ರೇಯಾ ಘೋಷಾಲ್!

ಹೌದು, ಆ ಪ್ರಶ್ನೆಗೆ ಉತ್ತರಿಸಿರುವ ಶ್ರೇಯಾ ಘೋಷಾಲ್, 'ನಾನು ಈಗಿನ ಜನರೇಶನ್ನಿನ ಎಲ್ಲಾ ನಟಿಯರಿಗೂ ಹಾಡಿದ್ದೇನೆ. ಆದರೆ, ನಾನು ಒಮ್ಮೆ ಹಳೆಯ ನಟಿಯರಿಗೆ ಹಾಡಲು ಸಾಧ್ಯವಾದರೆ, ಆ ಕಾಲಕ್ಕೆ, ಅಂದರೆ ಬ್ಲಾಕ್ & ವೈಟ್ ಕಾಲಕ್ಕೆ ಹೋಗಲು ಸಾಧ್ಯವಾದರೆ, ನಾನು ವಹೀದಾ ರೆಹಮಾನ್‌ಜಿ ಹಾಗೂ ಮಧು ಬಾಲಾಜಿ ಅವರಿಗೆ ಹಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಬಹುಶಃ ಓಲ್ಡ್ ಹಾರ್ಟ್ ಹೊಂದಿದ್ದೇನೆ ಅಂತ ಅನ್ನಿಸುತ್ತೆ..' ಅಂತ ತಮಾಷೆ ಮಾಡಿದ್ದಾರೆ. 

ಜೊತೆಗೆ, ಈಗಿನ ಜನರೇಶನ್ ನಟಿಯರಲ್ಲಿ ನಾನು ಎಲ್ಲರಿಗೂ ಹಾಡಿದ್ದೇನೆ. ಆದರೆ, ಸಂಗೀತ ಗೊತ್ತಿರುವ ಗಾಯಕಿಯರಿಗೆ ಹಾಡಲು ನನಗೆ ಹೆಚ್ಚು ಅನುಕೂಲ ಆಗುತ್ತೆ, ಅದು ಹೆಚ್ಚು ಇಷ್ಟ ಆಗುತ್ತೆ.. ಉದಾಹರಣೆಗೆ ವಿದ್ಯಾ ಬಾಲನ್‌.. ಅವರಿಗೆ (Vidya Balan) ಸಂಗೀತ ಗೊತ್ತು, ಜೊತೆಗೆ ಅವರು ಸ್ವತಃ ಹಾಡಬಲ್ಲರು. ಆಗ ಲಿಪ್ ಸಿಂಕ್ ಕೂಡ ಈಸಿ ಆಗುತ್ತೆ.. ಆದರೆ, ನನಗೆ ನಟಿ ಐಶ್ವರ್ಯಾ ರೈ (Aishwarya Rai) ಕೂಡ ತುಂಬಾ ಇಷ್ಟ ಹಾಗೂ ಅವರ ಮೇಲೆ ಅಭಿಮಾನ ಜಾಸ್ತಿ. 

ಕನ್ನಡ ಸ್ಟಾರ್ ನಟರ ಕೈ ತಪ್ಪಿದ ಸಿನಿಮಾಗಳಿವು, ಅವ್ರ ಫ್ಯಾನ್ಸ್‌ಗೆ ಹೇಳ್ಬೇಡಿ.. ಜಸ್ಟ್ ನೋಡಿ..!

ಕಾರಣ, ನಟಿ ಐಶ್ವರ್ಯಾ ರೈ ಅವರು ಹಾಡಿಗೆ ಚೆನ್ನಾಗಿ ಎಕ್ಸ್‌ಪ್ರೆಶನ್ ಕೊಡುತ್ತಾರೆ. ಜೊತೆಗೆ, ಅವರು ಲಿಪ್ ಸಿಂಕ್ ಕೂಡ ಚೆನ್ನಾಗಿ ಮಾಡ್ತಾರೆ. ಒಂದು ಹಾಡು ಎಷ್ಟೇ ಚೆನ್ನಾಗಿ ಹಾಡಿದ್ರೂ ಕೂಡ ಅದು ಪರಿಪೂರ್ಣ ಅಂತ ಸಿನಿಮಾದಲ್ಲಿ ಅನ್ನಿಸಬೇಕಾದ್ರೆ, ಆ ಹಾಡಿಗೆ ನಟಿಸುವ ನಟಿ ಚೆನ್ನಾಗಿ ಲಿಪ್ ಸಿಂಕ್ ಮಾಡ್ಬೇಕು. ಅದನ್ನು ಐಶ್ವರ್ಯಾ ರೈ ತುಂಬಾ ಚೆನ್ನಾಗಿ ಮಾಡ್ತಾರೆ. ಜೊತೆಗೆ, ನಾನು ಹಾಡಿದ ಮೊದಲ ಹಾಡಿಗೆ ಆಕ್ಟ್ ಮಾಡಿರೋ ನಟಿ ಐಶ್ವರ್ಯಾ ರೈ. ಸೋ, ಅವ್ರು ನನ್ ಆಲ್‌ ಟೈಮ್ ಫೇವರೆಟ್..' ಎಂದಿದ್ದಾರೆ ಗಾಯಕಿ ಶ್ರೇಯಾ ಘೋಷಾಲ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?